Advertisement

ಜೀವನದ ಆನಂದ ಅನುಭವಿಸಲು ದಾನ ಮಾಡಿ

08:46 AM May 21, 2019 | Suhan S |

ಗದಗ: ಹಣ ಮಾಡುವುದೇ ಬದುಕಿನ ಮೂಲ ಉದ್ದೇಶವಾಗಬಾರದು. ತಾನು ಸಂಪಾದನೆ ಮಾಡಿದ ಸಂಪತ್ತು ಕೇವಲ ಕುಟುಂಬ ನಿರ್ವಹಣೆ, ವೈಭವೋಪೇತ ಜೀವನ ಶೈಲಿಗೆ ಸೀಮಿತವಾಗದೇ ಅಲ್ಪಸ್ವಲ್ಪ ಹಣವಾದರೂ ದಾನ, ಧರ್ಮ ಕಾರ್ಯಗಳಿಗೆ ಸದ್ವಿನಿಯೋಗ ಆಗಬೇಕು ಎಂದು ಸೂಡಿ ಡಾ| ಕೊಟ್ಟೂರು ಬಸವೇಶ್ವರ ಶಿವಾಚಾರ್ಯರು ಶ್ರೀಗಳು ಅಭಿಪ್ರಾಯಪಟ್ಟರು.

Advertisement

ನಗರದ ಶ್ರೀ ವೀರಸೋಮೇಶ್ವರ ಬಡಾವಣೆ ಹಿತರಕ್ಷಣಾ ಸಮಿತಿಯಿಂದ ನಿರ್ಮಿಸಿದ ಶ್ರೀ ಪವಾಡ ಆಂಜನೇಯ ಶಿಲಾಮೂರ್ತಿ ಪ್ರಾಣ ಪ್ರತಿಪಾಪನೆ ನೆರವೇರಿಸಿ ಬಳಿಕ ಧರ್ಮಸಭೆಯಲ್ಲಿ ಅವರು ಮಾತನಾಡಿ, ಕೇವಲ ಹಣಕ್ಕಾಗಿ ಓದುವುದು, ಅದಕ್ಕಾಗಿಯೇ ದುಡಿಯುವುದರಲ್ಲಿ ಆನಂದವಿಲ್ಲ. ಇದರ ಜೊತೆಗೆ ದಾನ, ಧರ್ಮ ಮಾಡಬೇಕು. ನಿಸ್ವಾರ್ಥ ಸೇವೆಯಿಂದ ದೇವರ, ಸದ್ಗುರುವಿನ ಸನ್ನಿಧಿಯ ಸತ್ಸಂಗದಲ್ಲಿ ಜೀವನ ಮಾಡಬೇಕು. ಅಂದಾಗ ಜೀವನದ ಮೋಕ್ಷಕ್ಕೆ ದಾರಿ ಸಿಗುವುದು ಎಂದರು.

ಮಾನವ ಧರ್ಮವನ್ನು ಅರಿತು ನಾವು ಸಮಾಜದ ಸೇವೆ ಮಾಡಬೇಕು. ಸ್ವಾರ್ಥದಿಂದ ಜೀವನದ ಉದ್ದೇಶವನ್ನು ಮರೆಯಬಾರದು. ದಾನಗಳಲ್ಲಿ ಮೂರು ಪ್ರಕಾರಗಳು. ಅದರಲ್ಲಿ ನಿಸ್ವಾರ್ಥದಿಂದ ದೇವಸ್ಥಾನ ಕಟ್ಟಲು ಮಾಡಿದ ದಾನ ಶ್ರೇಷ್ಠವಾದದ್ದು ಎಂದರು.

ಮುಕ್ತಿಮಂದಿರದ ವಿಮಲರೇಣುಕ ಶಿವಾಚಾರ್ಯರು ಮಾತನಾಡಿ, ಉತ್ತಮ ವಿಚಾರದಿಂದ ಸಂವೇದನಶೀಲರಾಗುತ್ತೇವೆ. ಸಂವೇದನೆಯಿಂದ ಕೆಲಸವಾಗುತ್ತದೆ. ಅಂದಾಗ ನಮ್ಮ ಸ್ವಯಂ ಖುಷಿಯ ಜೊತೆಗೆ ಪರಿಸರದಲ್ಲಿ ಖುಷಿ ನಿರ್ಮಾಣವಾಗುತ್ತದೆ ಎಂದರು.

ಡಾ| ಜಯಶ್ರೀ ಹೊಸಮನಿ ಮಾತನಾಡಿ, ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ ಮಾಜಿ ಅಧ್ಯಕ್ಷ ಚಂದ್ರು ಬಾಳಿಹಳ್ಳಿಮಠ, ಎಸ್‌.ವೈ. ಚಿಕ್ಕಟ್ಟಿ, ಉಮೇಶ ನಾಲ್ವಾಡ, ಕೆ.ಎನ್‌. ಕಂಕಾಳೆ, ವಿ.ಬಿ. ಬಿಸನಳ್ಳಿ, ಶಂಭುಲಿಂಗ ಪಟ್ಟದಕಲ್ಲು, ಅಶೋಕ ಗೊಜನೂರ, ಮೃತ್ಯುಂಜಯ ಸಂಕೇಶ್ವರ ವೇದಿಕೆಯಲ್ಲಿದ್ದರು.

Advertisement

ಇದೇ ವೇಳೆ ಧಾರವಾಡದ ಪುರೋಹಿತ ಬಾಲದೀಕ್ಷಿತ ತಾಪಸು ಹಾಗೂ ದಾನಿಗಳಿಗೆ, ಶಿಲ್ಪಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.

ಕಮತರ ಭರತ ನಾಟ್ಯ ಪ್ರದರ್ಶಿಸಿದಳು. ಮಹೇಶ ಕುಂದ್ರಾಳಹಿರೇಮಠ ಭಕ್ತಿಗೀತೆ ಪ್ರಸ್ತುತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next