Advertisement
ನಗರದ ವಾಸವಿ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಸ್ಥಳೀಯ ಆರ್ಯವೈಶ್ಯ ಮಂಡಳಿ, ಶ್ರೀ ಪೇಟೆ ಆಂಜನೇಯಸ್ವಾಮಿ ದೇವಾಲಯ ಟ್ರಸ್ಟ್ ಹಾಗೂ ಭಾರತೀಯ ರೆಡ್‌ಕ್ರಾಸ್ ಸೊಸೈಟಿ ಜಿಲ್ಲಾ ಶಾಖೆ ಸಂಯುಕ್ತಾಶ್ರಯದಲ್ಲಿ ವಾಸವಿ ಜಯಂತಿ ಪ್ರಯುಕ್ತ ಎಂಟನೇ ವರ್ಷದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಅವರು ಮಾತನಾಡಿದರು.
Related Articles
Advertisement
ಸೇವಾ ಮನೋಭಾವ: ಆರ್ಯವೈಶ್ಯ ಮಂಡಳಿ ಅಧ್ಯಕ್ಷ ನಂಜುಂಡರಾಮಯ್ಯ ಶೆಟ್ಟಿ ಮಾತನಾಡಿ, ಯುವಕರಲ್ಲಿ ರಕ್ತದಾನದ ಕುರಿತ ಮೌಡ್ಯವನ್ನು ದೂರ ಮಾಡಬೇಕು. ರಕ್ತದ ಅವಶ್ಯಕತೆ ಬಂದೊದಗಿದ ಸಂದರ್ಭದಲ್ಲಿ ಮಾತ್ರ ರಕ್ತದ ಮಹತ್ವ ಅರಿವಾಗುತ್ತದೆ. ಆರೋಗ್ಯವಂತ ವ್ಯಕ್ತಿಗಳು ತಪ್ಪದೇ ರಕ್ತದಾನ ಮಾಡಬೇಕೆಂದರು. ಸತತ ಏಳು ವರ್ಷಗಳಿಂದ ಶ್ರೀವಾಸವಿ ಜಯಂತಿ ಪ್ರಯುಕ್ತ ಆರ್ಯವೈಶ್ಯ ಮಂಡಳಿ ರಕ್ತದಾನ ಶಿಬಿರಗಳನ್ನು ಆಯೋಜಿಸಿಕೊಂಡು ಬರುತ್ತಿದ್ದು, ಇದರಿಂದ ಯುವಕರಲ್ಲಿ ಸೇವಾ ಮನೋಭಾವ ಬೆಳೆಯುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಭಾರತೀಯ ರೆಡ್‌ಕ್ರಾಸ್ ಕಾರ್ಯದರ್ಶಿ ಗುರುರಾಜರಾವ್, ವೈದ್ಯಾಧಿಕಾರಿ ಡಾ.ಹೇಮಂತ್ ಸಾವಳಗಿ, ತಾಂತ್ರಿಕ ತಜ್ಞ ಶ್ರೀನಾಥ್, ಜಿಲ್ಲಾ ಸಂಚಾಲಕ ಭರತ್ ಕುಮಾರ್, ಆರ್ಯವೈಶ್ಯ ಮಂಡಳಿ ಕಾರ್ಯದರ್ಶಿ ಬಿ.ಎನ್.ಸೂರ್ಯನಾರಾಯಣ ಶೆಟ್ಟಿ, ವಾಸವಿ ಕ್ಲಬ್ ಅಧ್ಯಕ್ಷ ಶ್ರೀಧರ್, ವಾಸವಿ ಯೂತ್ ಕ್ಲಬ್ ಅಧ್ಯಕ್ಷ ಗಣೇಶ್, ಮುಖಂಡರಾದ ಲಕ್ಷ್ಮೀರಾಮ್, ಕೃಷ್ಣಮೂರ್ತಿ, ಬಿ.ಆರ್.ಬದರಿನಾಥ್, ರಾಣಿ ಪ್ರಭಾಕರ್, ಶ್ರೀಧರ್, ಸ್ವರೂಪ್ ಉಪಸ್ಥಿತರಿದ್ದರು.
ಶಿಬಿರದಲ್ಲಿ 171 ಯೂನಿಟ್ ರಕ್ತ ಸಂಗ್ರಹ: ಆರ್ಯವೈಶ್ಯ ಮಂಡಳಿ ವಾಸವಿ ಜಯಂತಿ ಪ್ರಯುಕ್ತ ಜಿಲ್ಲಾ ಭಾರತೀಯ ರೆಡ್‌ಕ್ರಾಸ್ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ ಬರೋಬ್ಬರಿ 171 ಮಂದಿ ವಾಸವಿ ಕ್ಲಬ್, ವಾಸವಿ ಯೂತ್ ಹಾಗೂ ಆರ್ಯವೈಶ್ಯ ಮಂಡಳಿ ಸದಸ್ಯರು ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಿದರು.
ರಕ್ತದಾನ ಮಾಡಿದವರಿಗೆ ಸಾಂಕೇತಿಕವಾಗಿ ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ಪ್ರಮಾಣ ಪತ್ರ ವಿತರಿಸಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ಶಿಬಿರದಲ್ಲಿ ಪಾಲ್ಗೊಂಡ ರಕ್ತದಾನಿಗಳಿಗೆ ಆರ್ಯವೈಶ್ಯ ಮಂಡಳಿಯಿಂದ ಲಘು ಉಪಹಾರ, ಹಣ್ಣು, ಬಿಸ್ಕೆಟ್, ಹಣ್ಣಿನ ರಸ ನೀಡಲಾಯಿತು.