ಹೂವಿನಹಿಪ್ಪರಗಿ: ಪ್ರತಿಯೊಬ್ಬರು ರಕ್ತದಾನ ಮಾಡಬೇಕು. ರಕ್ತದಾನ ಮಾಡಿ ಅಮೂಲ್ಯವಾದ ಜೀವ ಉಳಿಸಬೇಕು ಎಂದು ಸೊನ್ನದ ದಾಸೋಹಮಠದ ಡಾ| ಶ್ರೀ ಶಿವಾನಂದ ಸ್ವಾಮೀಜಿ ಸಲಹೆ ನೀಡಿದರು.
ಬಸವನ ಬಾಗೇವಾಡಿ ತಾಲೂಕಿನ ವಡವಡಗಿ ಗ್ರಾಮದ ಶ್ರೀ ಶಿವಾನಂದಾಶ್ರಮ ಕಾಳಿಕಾಂಬ ಶಕ್ತಿಪೀಠ, ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಗ್ರಾಪಂ ಸಹಯೋಗದಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ರಕ್ತದಾನ ಮಾಡುವುದರಿಂದ ಮನುಷ್ಯನಲ್ಲಿ ಹೊಸ ರಕ್ತ ಉತ್ಪತ್ತಿಯಾಗುತ್ತದೆ. ಮನುಷ್ಯನಿಗೆ ಮನುಷ್ಯನೇ ರಕ್ತ ನೀಡಬೇಕು. ರಕ್ತಸ್ರಾವದಿಂದ ಹಲವಾರು ಜನರು ಜೀವ ಉಳಿಸಿಕೊಳ್ಳಲು ಜೀವನ್ಮರಣದಲ್ಲಿ ಹೋರಾಡುತ್ತಾರೆ. ಅಂತಹ ಸಂದರ್ಭದಲ್ಲಿ ರಕ್ತದಾನ ಮಾಡುವ ಮೂಲಕ ಒಂದು ಜೀವ ಉಳಿಸಿ ಮಾನವೀಯತೆ ಮೆರೆಯಬೇಕು. ಜತೆಗೆ ರಕ್ತದಾನ ಮಾಡುವುದರಿಂದ ನಮ್ಮ ಆರೋಗ್ಯ ಸುಧಾರಿಸಿ ದೇಹದಲ್ಲಿ ಹೊಸ ರಕ್ತ ಹುಟ್ಟಲು ಸಹಕಾರಿಯಾಗಲಿದೆ ಎಂದು ಹೇಳಿದರು.
ಕರ್ನಾಟಕ ರಾಜ್ಯ ವಿಶ್ವಬ್ರಾಹ್ಮಣ ಪೀಠಾಧಿಪತಿ ರಾಮಚಂದ್ರ ಸ್ವಾಮೀಜಿ ಮಾತನಾಡಿದರು. ಕಾಳಿಕಾಂಬ ಶಕ್ತಿಪೀಠದ ಬಸವರಾಜ ಶರಣರು ಸಾನ್ನಿಧ್ಯ ವಹಿಸಿದ್ದರು. ಗ್ರಾಪಂ ಸದಸ್ಯ ಮಂಜುನಾಥ ಹೊಸಗೌಡ್ರ ಅಧ್ಯಕ್ಷತೆ ವಹಿಸಿದ್ದರು. ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಪುಷ್ಪಾ ಕಲ್ಲುರಕರ್, ಗ್ರಾಪಂ ಸದಸ್ಯ ದಯಾನಂದ ತಳವಾರ, ಪ್ರೇಮ್‌ಜೀ ಫೌಂಡೇಶನ್(ವ್ಯಾಕ್ಸಿನೇಟರ್), ಆರೋಗ್ಯ ನಿರೀಕ್ಷಣಾಧಿಕಾರಿ ಅಶೋಕ ಭಜಂತ್ರಿ, ಆರೋಗ್ಯ ಸುರಕ್ಷಾಧಿಕಾರಿ ಅರುಣಾ ಹಾದಿಮನಿ, ಉಮೇಶ ಸಲ್ಲೋಡಗಿ, ಡಿ.ಎಚ್. ಕಂಕಣಫೀರ, ಆಶಾ, ಅಂಗನವಾಡಿ ಕಾರ್ಯಕರ್ತರು, ಗ್ರಾಮದ ಹಿರಿಯರು ಇದ್ದರು. ಶಾಂತಗೌಡ ಮಾಲಿಪಾಟೀಲ ಸ್ವಾಗತಿಸಿದರು. ನಿರೀಕ್ಷಣಾಧಿಕಾರಿ ಶಶಿಧರ ಆರ್. ಎಲ್. ನಿರೂಪಿಸಿದರು. ಅಂಬಿಕಾದೇವಿ ಪತ್ತಾರ ವಂದಿಸಿದರು.