Advertisement

ರಕ್ತದಾನ ಮಾಡಿ ಜನರ ಪ್ರಾಣ ಕಾಪಾಡಿ

06:32 PM Apr 12, 2022 | Team Udayavani |

ಹಗರಿಬೊಮ್ಮನಹಳ್ಳಿ: ರಕ್ತದಾನ ಮಾಡುವ ಮೂಲಕ ಜನರ ಪ್ರಾಣ ರಕ್ಷಣೆಗೆ ಯುವಜನತೆ ಮುಂದಾಗಬೇಕೆಂದು ರಾಜ್ಯ ಕಾಂಗ್ರೆಸ್‌ ವಕ್ತಾರ ಪತ್ರೇಶ್‌ ಹಿರೇಮಠ ಕರೆ ನೀಡಿದರು. ತಾಲೂಕಿನ ಬಸರಕೋಡು ಗ್ರಾಮದಲ್ಲಿ ಸ್ವಾಮಿ ವಿವೇಕಾನಂದ ಬ್ಲಡ್‌ ಬ್ಯಾಂಕ್‌ ಪ್ರಾಥಮಿಕ ಆರೋಗ್ಯ ಕೇಂದ್ರ, ತಂಬ್ರಹಳ್ಳಿ ಸ್ಥಳೀಯ ಸಂಸ್ಥೆ, ಸಂಘ ಸಂಸ್ಥೆಗಳು ಹಮ್ಮಿಕೊಂಡಿದ್ದ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

Advertisement

ತುರ್ತು ಸಂದರ್ಭಗಳಲ್ಲಿ ರಕ್ತದ ಅವಶ್ಯಕತೆ ತುಂಬಾ ಇರುತ್ತದೆ. ಅಂತವರಿಗೆ ಅರೋಗ್ಯವಂತ ಜನರು ರಕ್ತದಾನ ಮಾಡಿದರೆ ಒಂದು ಅಮೂಲ್ಯವಾದ ಜೀವದಾನ ಮಾಡಿದಂತೆ ಅಗುತ್ತದೆ. ಅನೇಕ ಸಂಘಸಂಸ್ಥೆಗಳು ರಕ್ತದಾನದ ಬಗೆಗಿನ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಲು ಜನರಲ್ಲಿ ಅರಿವು ಮೂಡಿಸುತ್ತಲೇ ಇವೆ. ಆದರೂ ರಕ್ತದಾನವೆಂದರೆ ಭಯ ಇನ್ನೂ ಇದೆ, ಸ್ವಯಂಪ್ರೇರಿತರಾಗಿ ರಕ್ತದಾನ ಮಾಡುವುದಕ್ಕೆ ಜನರಲ್ಲಿ ಉತ್ತೇಜನ ತುಂಬಬೇಕಾಗಿದೆ ಎಂದರು.

ತಂಬ್ರಹಳ್ಳಿ ಪೊಲೀಸ್‌ ಠಾಣೆಯ ಎ.ಎಸ್‌.ಐ ಕರಿವೀರಪ್ಪ ಕಬ್ಬೇರ್‌ ಮಾತನಾಡಿ, ಯುವಜನತೆ ದುಶ್ಚಟಗಳಿಗೆ ಬಲಿಯಾಗದೇ ಆರೋಗ್ಯವನ್ನು ಕಾಪಾಡಿಕೊಂಡು ಸದೃಢ ಬದುಕನ್ನು ರೂಪಿಸಿಕೊಳ್ಳಬೇಕೆಂದು ಕಿವಿ ಮಾತು ಹೇಳಿದರು. ಬನ್ನಿಗೋಳ ಗ್ರಾಮ ಪಂಚಾಯಿತಿ ಅಧ್ಯಕ್ಷ ಕರಿಬಸರಾಜ ಬಣಕಾರ ರಕ್ತದಾನ ಮಾಡುವ ಮೂಲಕ ಯುವಕರಿಗೆ ರಕ್ತದಾನಕ್ಕೆ ಪ್ರೇರೇಪಣೆ ಮಾಡಿದರು.

ಇದೇ ಸಂದರ್ಭದಲ್ಲಿ ಸರ್ಕಾರಿ ಪ್ರೌಢಶಾಲೆ ಎಸ್‌ ಡಿಎಂಸಿ ಅಧ್ಯಕ್ಷ ಕೆ.ಎಂ. ಶಿವಮೂರ್ತಿ, ಮಾಜಿ ಗ್ರಾಪಂ ಸದಸ್ಯರಾದ ಬಿ.ಸಿ.ಬಸವರಾಜ, ಎಚ್‌.ಬಿ. ಮೈಲಪ್ಪ, ನಾಗಭೂಷಣ, ಮುಖಂಡರಾದ ಶೇಖರಯ್ಯ ಎಸ್‌. ಎಂ, ಎ.ಕೆ. ಸಾರೆಪ್ಪ, ಮಹಾಂತೇಶ್‌ ಹೊಳಗುಂದಿ, ಧನಂಜಯ ಮೇಟಿ, ಹಿರಿಯ ಆರೋಗ್ಯ ನಿರೀಕ್ಷಣಾಕಾರಿ ನಾಗರಾಜ, ಆಶಾ ಕಾರ್ಯಕರ್ತೆಯರಾದ ಪ್ರತಿಭಾ ಕೆ.ಎಂ., ಎಸ್‌.ಸರಸ್ವತಿ. ವಿವೇಕಾನಂದ ಬ್ಲಿಡ್‌ ಬ್ಯಾಂಕ್‌ನ ವಿರುಪಾಕ್ಷ, ಆಪ್ತ ಸಮಾಲೋಚಕ ಮಹೇಂದ್ರ, ರಾಜೇಂದ್ರ ಬಾಬು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next