Advertisement

ರಕ್ತದಾನ ಮಾಡಿ ಜೀವ ಉಳಿಸಿ: ಪರಮೇಶ್ವರಿ

04:48 PM Oct 01, 2019 | Suhan S |

ಚಿಕ್ಕಮಗಳೂರು: ಕೃತಕವಾಗಿ ತಯಾರಿಸಲಾಗದ ರಕ್ತವನ್ನು ದಾನ ಮಾಡುವ ಮೂಲಕ ಜೀವ ಉಳಿಸಬಹುದು ಎಂದು ಮೌಂಟೆನ್‌ವ್ಯೂ ಪದವಿ ಕಾಲೇಜು ಪ್ರಾಂಶುಪಾಲೆ ಪರಮೇಶ್ವರಿ ಪ್ರಕಾಶ್‌ ಅಭಿಪ್ರಾಯಪಟ್ಟರು.

Advertisement

ವಿದ್ಯಾನಗರದ ಮೌಂಟೆನ್‌ವ್ಯೂ ಪದವಿ ಕಾಲೇಜು ಮತ್ತು ಭಾರತೀಯ ರೆಡ್‌ಕ್ರಾಸ್‌ ಸೊಸೈಟಿ ಸಹಯೋಗದೊಂದಿಗೆ ಕಾಲೇಜು ಆವರಣದಲ್ಲಿ ಆಯೋಜಿಸಿದ್ದ ಬೃಹತ್‌ ರಕ್ತದಾನ ಶಿಬಿರ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಪರೋಪಕಾರ, ದೇಶಭಕ್ತಿ ಜತೆಗೆ ಸದ್ಗುಣಗಳನ್ನು ರೂಢಿಸಿಕೊಳ್ಳಬೇಕು.

ಇನ್ನೊಬ್ಬರಿಗೆ ಸಾಧ್ಯವಾದಷ್ಟು ಸಹಾಯ ಮಾಡುವ ಉಪಕಾರಿ ಗುಣ ಒಳ್ಳೆಯದು. ರಕ್ತದಾನದ ಮೂಲಕ ಜೀವವನ್ನೇ ರಕ್ಷಿಸಬಹುದು. ದಾನ ದಾನಗಳಲ್ಲಿ ರಕ್ತದಾನ ಶ್ರೇಷ್ಠವೆಂದು ಪರಿಗಣಿಸಲಾಗಿದೆ. ವಿದ್ಯಾರ್ಥಿಗಳು ಆಗಾಗ ರಕ್ತದಾನ ಮಾಡುವ ಪರಿಪಾಠ ಬೆಳೆಸಿಕೊಳ್ಳಬೇಕು ಎಂದರು.

ಭಾರತೀಯ ರೆಡ್‌ಕ್ರಾಸ್‌ ಸೊಸೈಟಿ ಜಿಲ್ಲಾಧ್ಯಕ್ಷ ಬೈರೇಗೌಡ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಯುವಜನರಲ್ಲಿ ಸೇವಾ ಮನೋಭಾವ ಉದ್ದೀಪನಗೊಳಿಸುವ ಹಿನ್ನೆಲೆಯಲ್ಲಿ ಆರಂಭಗೊಂಡ ಅಂತಾರಾಷ್ಟ್ರೀಯ ಸಂಸ್ಥೆ ರೆಡ್‌ಕ್ರಾಸ್‌. ಹಿಂದೆ ಯುದ್ಧದಲ್ಲಿ ನೊಂದವರ ಸೇವೆಯ ಮೂಲಕ ಗಮನ ಸೆಳೆದಿತ್ತು. ವಿದ್ಯಾರ್ಥಿಗಳಲ್ಲಿ ಸೇವೆ ಪ್ರಚುರಗೊಳಿಸುವ ಹಿನ್ನೆಲೆಯಲ್ಲಿ ಸರ್ಕಾರ ಎಲ್ಲ ಪದವಿ ಕಾಲೇಜುಗಳಲ್ಲಿ ಯುವ ರೆಡ್‌ ಕ್ರಾಸ್‌ ಘಟಕಗಳನ್ನು ರಚಿಸಲು ಆದೇಶಿಸಿದೆ ಎಂದರು.

ರೆಡ್‌ಕ್ರಾಸ್‌ ಕಾರ್ಯದರ್ಶಿ ಬಾಬು ಶಂಕರ್‌ ಮಾತನಾಡಿ, ರಕ್ತದಾನ ಮಾಡುವ ಮೂಲಕ ವಿದ್ಯಾರ್ಥಿಗಳು ಸಮಾಜಕ್ಕೆ ಮಾದರಿಯಾಗುತ್ತಿದ್ದಾರೆ ಎಂದರು. ರಾಜ್ಯ ಸಮಿತಿ ಸದಸ್ಯ ಎಚ್‌.ಆರ್‌. ಹರೀಶ್‌ ಮಾತನಾಡಿ, ರಕ್ತ ನೀಡುವ ಮೂಲಕ ನಮ್ಮ ದೇಹಾರೋಗ್ಯವನ್ನು ಸುಸ್ಥಿತಿಯಲ್ಲಿಡಬಹುದು. ದೇಹದಿಂದ ತೆಗೆದ ರಕ್ತ 24ಗಂಟೆಯೊಳಗೆ ಉತ್ಪಾದನೆಯಾಗುತ್ತದೆ. ಕಾಲಕಾಲಕ್ಕೆ ರಕ್ತ ನೀಡುವುದರಿಂದ ದೇಹದಲ್ಲಿ ಶೇಖರಣೆಗೊಂಡ ಕೊಬ್ಬಿನ ಅಂಶ ಕಡಿಮೆಮಾಡಿಕೊಳ್ಳಬಹುದು ಎಂದರು.

Advertisement

ಉಪನ್ಯಾಸಕಿ ಶೋಭಾ ಸ್ವಾಗತಿಸಿದರು. ಪ್ರಿಯಾ ವಂದಿಸಿದರು. ವಿವೇಕ ಪ್ರಭು ನೇತೃತ್ವದಲ್ಲಿ ವಿದ್ಯಾರ್ಥಿಗಳು ರಕ್ತದಾನ ಮಾಡಿದರು. ವ್ಯವಸ್ಥಾಪಕ ಎಚ್‌.ಆರ್‌. ರಾಜು, ಬ್ಲಿಡ್‌ ಬ್ಯಾಂಕ್‌ ತಾಂತ್ರಿಕ ಅಧಿ ಕಾರಿ ಸುನಿಲ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next