– ಇದು ರಕ್ತನಿಧಿ ಕೇಂದ್ರಗಳು, ಸ್ವಯಂ ಸೇವಾ ಸಂಸ್ಥೆಗಳು, ವೈದ್ಯರ ಮನವಿ.
Advertisement
ಕೊರೊನಾ ಎರಡನೇ ಅಲೆಯಿಂದಾಗಿ 2 ವಾರಗಳಿಂದ ರಕ್ತಸಂಗ್ರಹ ಪ್ರಮಾಣ ಶೇ. 50ರಷ್ಟು ಕುಸಿದಿದೆ. ಮುಂಬರುವ ತಿಂಗಳಿನಿಂದ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಅಭಿಯಾನ ಆರಂಭವಾಗು ತ್ತಿದೆ. ಆದರೆ, ರಾಷ್ಟ್ರೀಯ ರಕ್ತಚಾಲನ ಪರಿಷತ್ತಿ (ಎನ್‌ಬಿಟಿಸಿ)ನ ನಿರ್ದೇಶನ ಮತ್ತು ಕೇಂದ್ರ ಸರಕಾರದ ಮಾರ್ಗಸೂಚಿಯಂತೆ ಲಸಿಕೆ ಪಡೆ ದವರು ಮುಂದಿನ 28 ದಿನ ರಕ್ತದಾನ ಮಾಡು ವಂತಿಲ್ಲ. ಎರಡು ಡೋಸ್‌ಗಳ ನಡುವೆ 28 ದಿನ ಅಂತರವಿದ್ದು, ಒಟ್ಟಾರೆ 56 ದಿನ ರಕ್ತದಾನ ಸಾಧ್ಯವಾಗುವುದಿಲ್ಲ. ಇದರಿಂದಾಗಿ ರಾಜ್ಯದಲ್ಲಿ ರಕ್ತದ ತೀವ್ರ ಕೊರತೆ ಎದುರಾಗುವ ಆತಂಕ ಸೃಷ್ಟಿಯಾಗಿದೆ.
Related Articles
ರಾಜ್ಯದ ವಿವಿಧ ಜಿಲ್ಲೆಗಳ ಅನೇಕ ರಕ್ತ ನಿಧಿ ಕೇಂದ್ರಗಳು ಕನಿಷ್ಠ ಒಂದು ಯುನಿಟ್ ರಕ್ತ ಸಂಗ್ರಹವೂ ಇಲ್ಲದೇ “ನೋ ಸ್ಟಾಕ್’ ಎನ್ನುತ್ತಿವೆ. ರಕ್ತ ಮತ್ತು ರಕ್ತದ ಇತರ ಭಾಗಗಳಾದ ಬಿಳಿ ರಕ್ತಕಣಗಳು, ಪ್ಲೇಟ್ಲೆಟ್ ಗಳು ಸಿಗದೆ ರೋಗಿಗಳು ಸಮಸ್ಯೆ
ಎದುರಿಸುತ್ತಿದ್ದಾರೆ.
Advertisement
ಆತಂಕ ಬಿಟ್ಟು ರಕ್ತದಾನ ಮಾಡಿರಕ್ತನಿಧಿ ಕೇಂದ್ರಗಳು ಮತ್ತು ಆಸ್ಪತ್ರೆಗಳಲ್ಲಿ ಸೋಂಕು ತಗುಲದಂತೆ ಸಾಕಷ್ಟು ಮುಂಜಾಗ್ರತೆ ಕ್ರಮಗಳನ್ನು ಕೈಗೊಂಡಿದ್ದು, ಸಾರ್ವ ಜನಿಕರು ಧೈರ್ಯವಾಗಿ ರಕ್ತದಾನ ಮಾಡಬಹುದು. ಸಂಘ ಸಂಸ್ಥೆಗಳು ಅನುಮತಿ ಪಡೆದು ರಕ್ತ ನಿಧಿ ಕೇಂದ್ರ ಸಹಕಾರದೊಂದಿಗೆ ಸಣ್ಣ ಮಟ್ಟದಲ್ಲಿ ರಕ್ತದಾನ ಶಿಬಿರ ಆಯೋಜಿಸಬಹುದು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.