Advertisement

ಫೇಸ್ ಬುಕ್, ಟ್ವಿಟರ್ ಗೆ ಸೆಡ್ಡು; ಹೊಸ ಸೋಶಿಯಲ್ ಮೀಡಿಯಾ ಆರಂಭಿಸಿದ ಟ್ರಂಪ್!

10:52 AM Feb 21, 2022 | Team Udayavani |

ವಾಷಿಂಗ್ಟನ್‌: ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಈ ಹಿಂದೆ ಘೋಷಿಸಿದಂತೆಯೇ ಈಗ ತಮ್ಮದೇ ಆದ ಹೊಸ ಸಾಮಾಜಿಕ ಮಾಧ್ಯಮದೊಂದಿಗೆ ಜನರ ಮುಂದೆ ಬಂದಿದ್ದಾರೆ.

Advertisement

ಸೋಮವಾರವೇ ಅವರ “ಟ್ರಾಥ್‌ ಸೋಷಿಯಲ್‌’ ಎಂಬ ಸೋಷಿಯಲ್‌ ಮೀಡಿಯಾ ಆ್ಯಪ್‌ ಆ್ಯಪಲ್‌ನ ಆ್ಯಪ್‌ ಸ್ಟೋರ್‌ನಲ್ಲಿ ಲಭ್ಯವಾಗಲಿದೆ.

ಟ್ವಿಟರ್‌, ಫೇಸ್‌ಬುಕ್‌, ಯೂಟ್ಯೂಬ್‌ ಸೇರಿದಂತೆ ಎಲ್ಲ ಸಾಮಾಜಿಕ ಜಾಲತಾಣಗಳಿಂದ ನಿಷೇಧಕ್ಕೊಳಗಾದ ಒಂದೇ ವರ್ಷದಲ್ಲಿ ಟ್ರಂಪ್‌ ತಮ್ಮ ಸ್ವಂತ ತಾಣದ ಮೂಲಕ ವಿರೋಧಿಗಳಿಗೆ ಸಡ್ಡು ಹೊಡೆದಿದ್ದಾರೆ.

2021ರ ಜ.6ರಂದು ಅಮೆರಿಕ ಸಂಸತ್‌ಭವನದಲ್ಲಿ ಟ್ರಂಪ್‌ ಬೆಂಬಲಿಗರು ದಾಳಿ ನಡೆಸಿದ ಹಿನ್ನೆಲೆಯಲ್ಲಿ ಅವರಿಗೆ ಎಲ್ಲ ಜಾಲತಾಣಗಳೂ ನಿಷೇಧ ಹೇರಿದ್ದವು.

ಬಳಿಕ 2021ರ ಅಕ್ಟೋಬರ್‌ನಲ್ಲಿ ಟ್ರಂಪ್‌ ಅವರು, ದೊಡ್ಡ ಟೆಕ್‌ ಕಂಪನಿಗಳ ದೌರ್ಜನ್ಯದ ವಿರುದ್ಧ ಎದ್ದುನಿಲ್ಲುವ ಸ್ವಂತ ಸಾಮಾಜಿಕ ಜಾಲತಾಣವನ್ನು ಆರಂಭಿಸುವುದಾಗಿ ಘೋಷಿಸಿದ್ದರು. ಇತ್ತೀಚೆಗಷ್ಟೇ ಸ್ಥಾಪಿಸಲಾದ “ಟ್ರಂಪ್‌ ಮೀಡಿಯಾ ಆ್ಯಂಡ್‌ ಟೆಕ್ನಾಲಜಿ ಗ್ರೂಪ್‌’ನ ಮಾಲೀಕತ್ವದಲ್ಲಿ ಈಗ ಹೊಸ ಆ್ಯಪ್‌ ಅನಾವರಣಗೊಳ್ಳಲಿದೆ.

Advertisement

ಇದನ್ನೂ ಓದಿ:ನಂದಿಬೆಟ್ಟ:ಟ್ರೆಕ್ಕಿಂಗ್ ವೇಳೆ 200 ಅಡಿ ಆಳಕ್ಕೆ ಬಿದ್ದ ಯುವಕ; ಹೆಲಿಕ್ಯಾಪ್ಟರ್ ಬಳಸಿ ರಕ್ಷಣೆ

ಫೆ.15ರಂದು ಟ್ರಂಪ್‌ ಅವರ ಹಿರಿಯ ಪುತ್ರ ಡೊನಾಲ್ಡ್‌ ಜೂನಿಯರ್‌ ಅವರು ತಮ್ಮ ತಂದೆಯ ದೃಢೀಕೃತ ಟ್ರಾಥ್‌ ಸೋಷಿಯಲ್‌ ಖಾತೆಯಿಂದ ಮಾಡಲಾದ ಟ್ವೀಟ್‌ನ ಸ್ಕ್ರೀನ್‌ಶಾಟ್‌ ಹಂಚಿಕೊಂಡಿದ್ದರು. ಅದರಲ್ಲಿ, “ಸಿದ್ಧರಾಗಿ! ನಿಮ್ಮ ಅಚ್ಚುಮೆಚ್ಚಿನ ಅಧ್ಯಕ್ಷರು ಸದ್ಯದಲ್ಲೇ ನಿಮ್ಮನ್ನು ಕಾಣಲಿದ್ದಾರೆ’ ಎಂದು ಬರೆಯಲಾಗಿತ್ತು.

ಟ್ರಾಥ್‌ ಸೋಷಿಯಲ್‌ನ ಮಾತೃಸಂಸ್ಥೆ ಟ್ರಂಪ್‌ ಮೀಡಿಯಾ ಆ್ಯಂಡ್‌ ಟೆಕ್ನಾಲಜಿ ಗ್ರೂಪ್‌ನ ಮುಖ್ಯಸ್ಥರಾಗಿ ರಿಪಬ್ಲಿಕನ್‌ ಪಕ್ಷದ ಮಾಜಿ ಪ್ರತಿನಿಧಿ ಡೇವಿನ್‌ ನ್ಯೂನ್ಸ್‌ ಕಾರ್ಯನಿರ್ವಹಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next