Advertisement

ಫೆ.24-25ರಂದು ಭಾರತಕ್ಕೆ ಭೇಟಿ ನೀಡಲಿರುವ ಡೊನಾಲ್ಡ್ ಟ್ರಂಪ್

09:57 AM Feb 12, 2020 | keerthan |

ವಾಷಿಂಗ್ಟನ್ ಡಿ ಸಿ:  ಅಮೇರಿಕಾ ಪ್ರಧಾನಿ ಡೊನಾಲ್ಡ್ ಟ್ರಂಪ್ ಫೆಬ್ರವರಿ 24 ಮತ್ತು 25ರಂದು ಭಾರತಕ್ಕೆ ಭೇಟಿ ನೀಡಲಿದ್ದಾರೆ ಎಂದು ಶ್ವೇತಭವನ ಅಧಿಕೃತವಾಗಿ ತಿಳಿಸಿದೆ.

Advertisement

ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಫೆ.24-25 ರಂದು ಭಾರತಕ್ಕೆ ಭೇಟಿ ನೀಡಲಿದ್ದಾರೆ. ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ. ಈ ಭೇಟಿ ಭಾರತ ಮತ್ತು ಅಮೇರಿಕಾ ನಡುವಿನ ಸಂಬಂಧವನ್ನು ಗಟ್ಟಿಗೊಳಿಸಲಿದೆ ಎಂದು ನಂಬಿದ್ದೇವೆ ಎಂದು ಶ್ವೇತಭವನ ಹೇಳಿದೆ.

ಕಳೆದ ವರ್ಷ ಸಪ್ಟೆಂಬರ್ ನಲ್ಲಿ ಹ್ಯೂಸ್ಟನ್ ನಲ್ಲಿ ನಡೆದಿದ್ದ ‘ಹೌಡಿ ಮೋದಿ’ ಕಾರ್ಯಕ್ರಮದಲ್ಲಿ ನರೇಂದ್ರ ಮೋದಿಯವರು ಅಮೇರಿಕಾ ಅಧ್ಯಕ್ಷ ಟ್ರಂಪ್ ರನ್ನು ಭಾರತಕ್ಕೆ ಬರುವಂತೆ ಆಹ್ವಾನಿಸಿದ್ದರು.

‘ಹೌಡಿ ಮೋದಿ’ ಕಾರ್ಯಕ್ರಮದ ರೀತಿಯಲ್ಲೇ ಭಾರತದಲ್ಲಿ ಟ್ರಂಪ್ ಕಾರ್ಯಕ್ರಮ ನಡೆಸುವ ಬಗ್ಗೆ ಮಾತುಕತೆ ನಡೆಸಲಾಗಿತ್ತು ಎಂದು ವರದಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next