ವಾಷಿಂಗ್ಟನ್: 2016ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಮೂಗುತೂರಿಸಿರುವುದು, ಉಕ್ರೇನ್ ವಿವಾದ, ಅಂತಾರಾಷ್ಟ್ರೀಯ ಕಾನೂನುಗಳನ್ನು ಉಲ್ಲಂಘಿಸಿದೆ ಎಂದು ಹೇಳಿ ಅಮೆರಿಕ ರಷ್ಯಾ ಮೇಲೆ ಹೊಸ ನಿರ್ಬಂಧ ಹೇರಿದೆ. ಇದಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದೀಗ ಒಲ್ಲದ ಮನಸ್ಸಿನಿಂದಲೇ ಸಹಿ ಮಾಡಿದ್ದಾರೆ! ಕಳೆದ ವಾರ ಅಮೆರಿಕ ಸಂಸತ್ತು ರಷ್ಯಾ ಸಸಿತ ಉತ್ತರ ಕೊರಿಯಾ, ಇರಾನ್ ಮೇಲೆ ನಿರ್ಬಂಧಗಳನ್ನು ವಿಧಿಸುವ ಮಸೂದೆಯನ್ನು ಪಾಸ್ ಮಾಡಿತ್ತು. ಆದರೆ ರಷ್ಯಾ ವಿಚಾರದಲ್ಲಿ ಸಂಬಂಧ ವೃದ್ಧಿಸುವ ಮಾತುಗಳನ್ನು ಇತ್ತೀಚೆಗೆ ಟ್ರಂಪ್ ಆಡಿದ್ದರು. ಆದರೆ ಅಮೆರಿಕ ಸಂಸತ್ತು ಅಧ್ಯಕ್ಷರ ವೀಟೋ ಅಧಿಕಾರವನ್ನೂ ನಿವಾಳಿಸುವಂತೆ ಮಸೂದೆಯನ್ನು ಬಹುಮತದಿಂದ ಪಾಸ್ ಮಾಡಿದ್ದು ಅನಿವಾರ್ಯವಾಗಿ ಟ್ರಂಪ್ ಸಹಿ ಹಾಕಬೇಕಾಗಿದೆ. ಅದರಂತೆ ಈ ನಿರ್ಬಂಧಗಳು ಸಂಬಂಧ ವೃದ್ಧಿಗೆ ನೆರವಾಗಲಾರವು ಎಂಬ ಭಾವನೆಯನ್ನು ಟ್ರಂಪ ಹೊಂದಿದ್ದಾಗಿ ಅಮೆರಿಕದ ಗೃಹ ಕಾರ್ಯದರ್ಶಿ ರೆಕ್ಸ್ ಟಿಲ್ಲರ್‌ಸನ್ ಹೇಳಿದ್ದಾರೆ. ನಿರ್ಬಂಧ ಹಿನ್ನೆಲೆಯಲ್ಲಿ ರಷ್ಯಾ ರುÂಬೆಲೆ ಬೆಲೆ ಡಾಲರ್ ಎದುರು ಅಲ್ಪ ಕುಸಿತ ಕಂಡಿದೆ.