Advertisement

ಉಗ್ರರಿಗೆ ಬ್ರೇಕ್; 7 ದೇಶಗಳ ನಿರಾಶ್ರಿತರು ಅಮೆರಿಕ ಪ್ರವೇಶಿಸುವಂತಿಲ್ಲ

06:08 PM Jan 28, 2017 | Sharanya Alva |

ವಾಷಿಂಗ್ಟನ್; ನೂತನವಾಗಿ ಅಮೆರಿಕ ಪ್ರವೇಶಿಸಲಿರುವ ನಿರಾಶ್ರಿತರನ್ನು ನಿರ್ಬಂಧಿಸುವ ನಿಟ್ಟಿನಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ಹೊಸ ಆದೇಶವೊಂದಕ್ಕೆ ಸಹಿ ಹಾಕುವ ಮೂಲಕ ಅಧ್ಯಕ್ಷೀಯ ಚುನಾವಣೆಯ ಸಂದರ್ಭದಲ್ಲಿ ನೀಡಿದ್ದ ವಿವಾದಿತ ಭರವಸೆಯೊಂದನ್ನು ಈಡೇರಿಸಿದಂತಾಗಿದೆ.

Advertisement

ವಿದೇಶದ ಮೂಲಭೂತವಾದಿ ಉಗ್ರರು ಅಮೆರಿಕ ಪ್ರವೇಶಿಸದಂತೆ ಹಾಗೂ ಕ್ರಿಶ್ಚಿಯನ್ ರಿಗೆ ಪ್ರಾಮುಖ್ಯತೆ ನಿಡುವುದು ನಮ್ಮ ಆದ್ಯತೆಯಾಗಿದೆ ಎಂದು ಟ್ರಂಪ್ ಹೇಳಿದ್ದಾರೆ. ಅಮೆರಿಕದಿಂದ ಇಸ್ಲಾಮಿಕ್ ದೇಶಗಳ  ಮೂಲಭೂತವಾದಿ ಉಗ್ರರನ್ನು ಹೊರಗಿಡುವ ಉದ್ದೇಶದಿಂದಲೇ ನಾನು ಹೊಸ ನಿರ್ಬಂಧವನ್ನು ಜಾರಿತಂದಿದ್ದು, ಆವರು ಇಲ್ಲಿರುವುದು ಬೇಕಾಗಿಲ್ಲ ಎಂದು ಪೆಂಟಗಾನ್ ನಲ್ಲಿ ಘೋಷಿಸಿದ್ದಾರೆ.

ಇಸ್ಲಾಮಿಕ್ ಮೂಲಭೂತವಾದಿ ಉಗ್ರರಿಂದ ಅಮೆರಿಕ ದೇಶವನ್ನು ರಕ್ಷಿಸುವುದೇ ನನ್ನ ಉದ್ದೇಶ ಎಂದಿರುವ ಟ್ರಂಪ್, ಹೊಸ ಆದೇಶದಲ್ಲಿ ಮುಖ್ಯವಾಗಿ ಇಸ್ಲಾಂ ರಾಷ್ಟ್ರಗಳಾದ ಇರಾನ್, ಇರಾಕ್, ಲಿಬಿಯಾ, ಸೋಮಾಲಿಯಾ, ಸುಡಾನ್, ಸಿರಿಯಾ ಮತ್ತು ಯೆಮೆನ್  ಸೇರಿದಂತೆ 7 ರಾಷ್ಟ್ರಗಳ ವಲಸಿಗರಿಗೆ ಅಥವಾ ವಿಸಿಟರ್ಸ್ಸ್ ಗೆ 90 ದಿನಗಳ ಕಾಲ ವೀಸಾವನ್ನು ನೀಡಲು ನಿರ್ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.

ಯಾರು ನಮ್ಮ ದೇಶದ ಪ್ರಜೆಗಳಿದ್ದಾರೋ, ಯಾರು ನಮ್ಮನ್ನು ಬೆಂಬಲಿಸುತ್ತಾರೋ, ಯಾರು ನಮ್ಮ ಜನರನ್ನು ಆಗಾಧವಾಗಿ ಪ್ರೀತಿಸುತ್ತಾರೋ ಅವರು ಮಾತ್ರ ಇಲ್ಲಿರಲಿ ಎಂದು ಟ್ರಂಪ್ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next