ವಾಷಿಂಗ್ಟನ್: ಅಮೆರಿಕದ ಪ್ರಮುಖ ಪ್ರಾಂತಗಳಲ್ಲಿ ಒಂದಾದ ಅರಿಜೋನಾ ದಲ್ಲಿ ಡೊನಾಲ್ಡ್ ಟ್ರಂಪ್ ಗೆಲುವು ಸಾಧಿ ಸಿದ್ದು, ಒಟ್ಟು 312 ಎಲೆಕ್ಟೋರಲ್ ಮತ ಗಳನ್ನು ಪಡೆದಂತಾಗಿದೆ. ಕಳೆದ ಚುನಾವಣೆಯಲ್ಲಿ ಬೈಡೆನ್ 306 ಮತ ಪಡೆದಿದ್ದರೆ, ಅದಕ್ಕೂ ಹಿಂದಿನ ಚುನಾವಣೆಯಲ್ಲಿ ಟ್ರಂಪ್ 304 ಮತ ಗಳಿಸಿದ್ದರು. ಅರಿಜೋನಾದಲ್ಲಿ 11 ಎಲೆಕ್ಟೋರಲ್ ಮತಗಳಿದ್ದವು. ಸೆನೆಟ್ ಮೇಲೆ ತನ್ನ ಪ್ರಭುತ್ವನ್ನು ಪುನಃ ಸ್ಥಾಪಿಸಿ ರುವ ರಿಪಬ್ಲಿಕ್ ಪಾರ್ಟಿ, ಜನಪ್ರತಿ ನಿಧಿಗಳ ಹೌಸ್‌ನಲ್ಲಿ ಬಹುಮತವನ್ನು ಉಳಿ ಸಿಕೊಳ್ಳಲು ಸಜ್ಜಾಗಿದೆ. ಸೆನೆಟ್‌ನಲ್ಲಿ 52 ಸದಸ್ಯರನ್ನು ರಿಪಬ್ಲಿಕ್ ಹೊಂದಿ ದ್ದರೆ, 47 ಡೆಮಾಕ್ರಟ್ಸ್‌ಗಳಿದ್ದಾರೆ. ಜನಪ್ರತಿನಿಧಿಗಳ ಹೌಸ್‌ನಲ್ಲಿ ರಿಪಬ್ಲಿಕ್ 216 ಸ್ಥಾನ ಗೆದ್ದಿದ್ದರೆ, ಡೆಮಾಕ್ರಟ್ಸ್ ಪರ 209 ಇದೆ. ಬಹುಮತಕ್ಕೆ 218 ಸ್ಥಾನ ಬೇಕು.
ನಿಕ್ಕಿ ಹ್ಯಾಲೆಗಿಲ್ಲ ಸಚಿವ ಸ್ಥಾನ !
ಟ್ರಂಪ್ ಸರಕಾರದಲ್ಲಿ ಭಾರತೀಯ ಸಂಜಾತೆ ನಿಕ್ಕಿ ಹ್ಯಾಲೆ, ಮಾಜಿ ಸಚಿವ ಮೈಕ್ ಪೊಂಪಿಯೋಗೆ ಸ್ಥಾನ ನೀಡುವುದಿಲ್ಲ. ಈ ಬಗ್ಗೆ ಟ್ರಂಪ್ ಅವರೇ ಪ್ರಕಟಿಸಿದ್ದಾರೆ. ಅಧ್ಯಕ್ಷೀಯ ಚುನಾವಣೆಗೆ ನಾಮನಿರ್ದೇಶನ ವೇಳೆ ಟ್ರಂಪ್‌ರನ್ನು ನಿಕ್ಕಿ ಹ್ಯಾಲೇ ಹಿಗ್ಗಾಮುಗ್ಗ ಟೀಕಿಸಿದ್ದರು. ಪೊಂಪಿಯೋ ಪ್ರಚಾರ ನಡೆಸಿರಲಿಲ್ಲ.