Advertisement

ಜಿ.7 ರಾಷ್ಟ್ರಕ್ಕೆ ಭಾರತ ಸೇರ್ಪಡೆಯಾಗಲಿ ; ಅಮೆರಿಕ ಅಧ್ಯಕ್ಷ ಟ್ರಂಪ್‌ ಪ್ರತಿಪಾದನೆ

11:26 AM Jun 01, 2020 | mahesh |

ವಾಷಿಂಗ್ಟನ್: ಜಿ-7 ರಾಷ್ಟ್ರಗಳ ಒಕ್ಕೂಟಕ್ಕೆ ಭಾರತ ಸೇರ್ಪಡೆಯಾಗಬೇಕು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಪ್ರತಿಪಾದಿಸಿದ್ದಾರೆ. ಸದ್ಯ ಇರುವ ಗುಂಪು ಹಾಲಿ ವಿದ್ಯಮಾನಗಳಿಗೆ ಸೂಕ್ತವಾಗಿ ಪ್ರತಿಕ್ರಿಯಿಸುತ್ತಿಲ್ಲ. ಅದನ್ನು ಜಿ-10, ಜಿ-11 ಎಂದು ಬದಲು ಮಾಡಬೇಕು ಮತ್ತು ಭಾರತದ ಜತೆಗೆ ಇನ್ನೂ ಮೂರು ರಾಷ್ಟ್ರಗಳನ್ನು ಗುಂಪಿಗೆ ಸೇರ್ಪಡೆ ಮಾಡಬೇಕು ಎಂದು ಹೇಳಿದ್ದಾರೆ. ಇದರ ಜತೆಗೆ ಕೋವಿಡ್ ಹಿನ್ನೆಲೆಯಲ್ಲಿ ಜೂನ್‌ ಕೊನೆಯ ವಾರದಲ್ಲಿ ನಡೆಯಬೇಕಾಗಿದ್ದ ಜಿ-7 ರಾಷ್ಟ್ರಗಳ ಸಮಾವೇಶವನ್ನು ಸೆಪ್ಟೆಂಬರ್‌ಗೆ ಮುಂದೂಡಿಕೆ ಮಾಡುವುದಾಗಿಯೂ ಘೋಷಣೆ ಮಾಡಿದ್ದಾರೆ ಟ್ರಂಪ್‌. ಜಿ.20 ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಸ್ಥಾನ ಪಡೆದಿದೆ.

Advertisement

ಸೆಪ್ಟಂಬರ್‌ನಲ್ಲಿ ನಡೆಯುವ ಸಮಾವೇಶಕ್ಕೆ ರಷ್ಯಾ, ದಕ್ಷಿಣ ಕೊರಿಯಾ, ಆಸ್ಟ್ರೇಲಿಯಾ ಮತ್ತು ಭಾರತವನ್ನು ಆಹ್ವಾನಿಸುವ ಇರಾದೆಯನ್ನು ಹೊಂದಿದ್ದಾರೆ ಅಮೆರಿಕ ಅಧ್ಯಕ್ಷ. ಇಂಥ ಕ್ರಮದ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚೀನಾವನ್ನು ಹಣೆಯುವ ರಣತಂತ್ರವೂ ಅವರದ್ದಾಗಿದೆ. ಇದರ ಜತೆಗೆ ನ.3ರಂದು ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಎರಡನೇ ಅವಧಿಗೆ ಗೆಲ್ಲುವ ನಿಟ್ಟಿನಲ್ಲಿಯೂ ಕೂಡ ಪ್ರಯತ್ನಗಳನ್ನು ನಡೆಸುತ್ತಿದ್ದಾರೆ.

ಸೆ.15ರಂದು ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನ ಶುರುವಾಗಲಿದೆ. ಅದಕ್ಕಿಂತ ಮೊದಲು ಅಥವಾ ನಂತರದಲ್ಲಿ ಜಿ-7 ರಾಷ್ಟ್ರಗಳ ಸಮ್ಮೇಳನ ನಡೆಯಲಿದೆ ಎಂದು ಟ್ರಂಪ್‌ ಶನಿವಾರ ತಿಳಿಸಿದ್ದಾರೆ. 2014ರಲ್ಲಿ ಉಕ್ರೇನ್‌ನ ಭಾಗವಾಗಿರುವ ಕ್ರೀಮಾವನ್ನು ರಷ್ಯಾ ವಶಪಡಿಸಿಕೊಂಡ ಹಿನ್ನೆಲೆಯಲ್ಲಿ ಜಿ-8 ರಾಷ್ಟ್ರಗಳ ಸಮ್ಮೇಳನಕ್ಕೆ ಆಹ್ವಾನ ನೀಡಲಾಗಿರಲಿಲ್ಲ. ಇದರ ಜತೆಗೆ ಜರ್ಮನಿ ಚಾನ್ಸಲರ್‌ ಏಂಜೆಲಾ ಮರ್ಕೆಲ್‌ ಸೋಂಕಿನ ವಿಚಾರವಾಗಿ ಸೂಕ್ತ ಕ್ರಮಗಳನ್ನು ಘೋಷಣೆ ಮಾಡದ ಹೊರತಾಗಿ ಸಮ್ಮೇಳನದಲ್ಲಿ ಭಾಗವಹಿಸುವು ದಿಲ್ಲವೆಂದು ಈಗಾಗಲೇ ಪ್ರಕಟಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next