Advertisement

ಶ್ರೀನಿವಾಸ್‌ ಕುಚಿಬೋಟ್ಲ ಹತ್ಯೆಗೆ ಟ್ರಂಪ್‌ ತೀವ್ರ ಖಂಡನೆ

09:29 AM Mar 01, 2017 | Team Udayavani |

ವಾಷಿಂಗ್ಟನ್‌ : ಕನ್ಸಾಸ್‌ನಲ್ಲಿ ನಡೆದ ಹೈದರಾಬಾದ್‌ ಮೂಲದ ಇಂಜಿನಿಯರ್‌ ಶ್ರೀನಿವಾಸ್‌ ಕುಚಿಬೋಟ್ಲ ಹತ್ಯೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ತೀವ್ರ ಖಂಡನೆ ವ್ಯಕ್ತ ಪಡಿಸಿದ್ದಾರೆ. 

Advertisement

ಅಧ್ಯಕ್ಷರಾದ ಬಳಿಕ ಇದೇ ಮೊದಲ ಬಾರಿಗೆ ಮಂಗಳವಾರ ರಾತ್ರಿ ಅಮೆರಿಕ ಕಾಂಗ್ರೆಸ್‌ನ ಜಂಟಿ ಅಧಿವೇಶನ ಉದ್ದೇಶಿಸಿ ಅಂತ್ಯಂತ ನಿರೀಕ್ಷಿತ ಭಾಷಣ ಮಾಡಿದ ಟ್ರಂಪ್‌ ‘ಭಾರತೀಯನನ್ನು ಗುಂಡಿಕ್ಕಿ ಹತ್ಯೆಗೈದಿರುವುದು ದೇಶದ ಹಿತಾಸಕ್ತಿಗೆ ಉತ್ತಮವಲ್ಲ’ ಎಂದರು. 

ಕೆಲ ಘಟನೆಗಳನ್ನು ಹೇಳಿ ಫೆಬ್ರವರಿ ತಿಂಗಳು ‘ಕಪ್ಪು ಇತಿಹಾಸದ ತಿಂಗಳು'(Black History Month) ಎಂದು ಭಾಷಣ ಆರಂಭಿಸಿದ ಟ್ರಂಪ್‌ ನಮ್ಮ ದೇಶದಲ್ಲಿ  ನಾಗರಿಕ ಹಕ್ಕುಗಳು ಇನ್ನೂ ಉಳಿದಿದೆ ಎನ್ನುವುದನ್ನು ನೆನಪಿಸಿದ್ದು,ಆ ಕುರಿತಾಗಿ ಕೆಲಸಮಾಡಬೇಕಾಗಿದೆ ಎಂದರು.

ಇದೇ ವೇಳೆ ಅಮೆರಿಕದಲ್ಲಿ ಯಹೂದಿಗಳನ್ನು ಗುರಿಯಾಗಿರಿಸಿಕೊಂಡು ನಡಎಸಲಾಗುತ್ತಿರುವ ಜನಾಂಗೀಯ ದಾಳಿಗಳನ್ನು ತೀವ್ರವಾಗಿ ಖಂಡಿಸಿದರು. 

 ‘ನಾವು ನಮ್ಮ ಮಿತ್ರರು ಮತ್ತು ಮುಸ್ಲಿಂ ರಾಷ್ಟ್ರಗಳ ಸ್ನೇಹಿತರೊಂದಿಗೆ ಸೇರಿ ಐಸಿಸ್‌ ಉಗ್ರ ಸಂಘಟನೆ ಈ ಗೃಹದಲ್ಲೇ ಇಲ್ಲದಂತೆ ಮಾಡುತ್ತೇವೆ’ ಎಂದು ಗುಡುಗಿದರು.

Advertisement

ವಲಸೆ ನಿರ್ಬಂಧ ನಿಯಮಗಳನ್ನು ಸಮರ್ಥಿಸಿಕೊಂಡ ಟ್ರಂಪ್‌ ದೇಶವನ್ನು  ಸುರಕ್ಷಿತವಾಗಿರಿಸಿಕೊಳ್ಳಲು ಇದು ಏಕೈಕ ಮಾರ್ಗವಾಗಿದೆ ಎಂದರು.

ಕನ್ಸಾಸ್‌ನಲ್ಲಿ  ಫೆಬ್ರವರಿ 22 ರ ರಾತ್ರಿ ನಡೆದಿದ್ದ ಶೂಟಿಂಗ್‌ನಲ್ಲಿ 32ರ ಹರೆಯದ ಹೈದರಾಬಾದ್‌ನ ಇಂಜಿನಿಯರ್‌  ಶ್ರೀನಿವಾಸ ಕುಚಿಬೋಟ್ಲ ಅವರನ್ನು ಅಮೆರಿಕ ನೇವಿಯ  ನಿವೃತ್ತ ಸೈನಿಕನೊಬ್ಬ  ಜನಾಂಗೀಯ ದ್ವೇಷದಲ್ಲಿ “ನನ್ನ ದೇಶದಿಂದ ತೊಲಗು’ ಎಂದು ಕಿರುಚಿ  ಗುಂಡಿಕ್ಕಿ ಹತ್ಯೆಗೈದಿದ್ದ, ದಾಳಿಯಲ್ಲಿ ಇನ್ನೋರ್ವ ಭಾರತೀಯ ಇಂಜಿನಿಯರ್‌ ಗಾಯಗೊಂಡಿದ್ದ.

ಶ್ರೀನಿವಾಸ್‌ ನಿಧನಕ್ಕೆ ಅಮೆರಿಕ ಕಾಂಗ್ರೆಸ್‌ನಲ್ಲಿ 1 ನಿಮಿಷಗಳ ಕಾಲ ಮೌನ ಪ್ರಾರ್ಥನೆ ಸಲ್ಲಿಸಲಾಯಿತು. 

Advertisement

Udayavani is now on Telegram. Click here to join our channel and stay updated with the latest news.

Next