Advertisement

ಕಚ್ಚಾ ತೈಲ ದರ ಪಾತಾಳಕ್ಕೆ ! ಲಾಕ್‌ಡೌನ್‌ ತೆರವು ದೊಡ್ಡಣ್ಣನ ಗೊಂದಲ

06:36 PM Apr 21, 2020 | sudhir |

ನ್ಯೂಯಾರ್ಕ್‌: ಅಮೆರಿಕದಲ್ಲಿ ಲಾಕ್‌ಡೌನ್‌ ಅನ್ನು ಕೊನೆಗೊಳಿಸುವ ಡೊನಾಲ್ಡ್‌ ಟ್ರಂಪ್‌ ಅವರ ನಿರ್ಧಾರಗಳ ಕುರಿತ ಮಾತುಗಳು ಕೇಳಿಬರುತ್ತಿದ್ದಂತೆ ಸ್ಥಳೀಯ ಸರಕಾರಗಳು ಆಕ್ಷೇಪಗಳನ್ನು ಎತ್ತಿವೆ.

Advertisement

ವಿಶ್ವ ಆರ್ಥಿಕತೆಯನ್ನು ಸ್ಥಗಿತಗೊಳಿಸಿದ ಕೋವಿಡ್‌-19 ಸಾಂಕ್ರಾಮಿಕದಿಂದಾಗಿ ಮಾರುಕಟ್ಟೆಗೆ ಪೂರೈಕೆಯ ಹೆಚ್ಚಳ, ಶೇಖರಣಾ ಸಾಮರ್ಥ್ಯದ ಸ್ಯಾಚುರೇಶನ್‌ ಮತ್ತು ಬೇಡಿಕೆಗಳು ಕಡಿಮೆಗೊಂಡ ಪರಿಣಾಮ ತೈಲ ಬೆಲೆಗಳು 21 ವರ್ಷಗಳ ಬಳಿಕ ಕನಿಷ್ಠ ಮಟ್ಟಕ್ಕೆ ಇಳಿದಿವೆ.

ಶೇ. 20ರಷ್ಟು ಕುಸಿತ
ಜತೆಗೆ ಟ್ರಂಪ್‌ ಆಡಳಿತ ಆರ್ಥಿಕ ವ್ಯವಹಾರಕ್ಕೆ ಶಕ್ತಿ ತುಂಬಲು ಲಾಕ್‌ಡೌನ್‌ ತೆರವು ಮಾಡುವ ಭರವಸೆಯ ಬಗ್ಗೆ ಅನುಮಾನಗಳು ಹೆಚ್ಚಾಗಿದ್ದರಿಂದ ತೈಲ ಬೆಲೆಗಳು ಕುಸಿಯಲು ಕಾರಣ. ಯುಎಸ್‌ ಕಚ್ಚಾ ತೈಲದ ಬೆಲೆ ಸೋಮವಾರದ ಆರಂಭಿಕ ವಹಿವಾಟಿನಲ್ಲಿ ಸುಮಾರು ಶೇ. 20ರಷ್ಟು ಕುಸಿದಿದೆ. ಇದು 1999ರ ಬಳಿಕ ಅತ್ಯಂತ ಕಡಿಮೆ ದಾಖಲಾದ ಮೊತ್ತವಾಗಿದೆ.

ಬೇಡಿಕೆ ಇಲ್ಲವಾದ ಪರಿಣಾಮ ದಾಸ್ತಾನು ಹೆಚ್ಚುತ್ತಿದೆ. ಅಮೆರಿಕದಲ್ಲಿ ಲಾಕ್‌ಡೌನ್‌ ಸಡಿಲಗೊಳಿಸಿ ವಾಹನ ಸಂಚಾರ ಮತ್ತು ವ್ಯವಹಾರಗಳ ಮೇಲಿನ ನಿರ್ಬಂಧಗಳನ್ನು ತೆಗೆದುಹಾಕಲು ಅಮೆರಿಕ ಅಧ್ಯಕ್ಷ ಮತ್ತು ರಾಜ್ಯ ಗವರ್ನರ್‌ಗಳ ನಡುವೆ ಹೆಚ್ಚುತ್ತಿರುವ ಭಿನ್ನಾಭಿಪ್ರಾಯದಿಂದಾಗಿ ಈ ಬೆಳವಣಿಗೆಗಳು ಸಂಭವಿಸಿವೆ.

ಇಂಧನಗಳ ಬೇಡಿಕೆಯ ಪಾಲು ಪ್ರಮುಖ
ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದರೂ ದೇಶದ ಕೆಲವು ಭಾಗಗಳಿಗೆ ವ್ಯಾಪಾರಕ್ಕಾಗಿ ಅವಕಾಶಗಳನ್ನು ನೀಡಲಾಗುವ ಸಾಧ್ಯತೆ ಇದೆ ಎಂದಿದ್ದರು ಟ್ರಂಪ್‌. ಆದರೆ ಅಧ್ಯಕ್ಷರ ಈ ಹೇಳಿಕೆಗಳಿಗೆ ರಾಜ್ಯಗಳ ಗವರ್ನರ್‌ಗಳು ಆಕ್ರೋಶದ ಉತ್ತರ ನೀಡಿದ್ದಾರೆ. ತೈಲ ಬೆಲೆಯಲ್ಲಿ ಭಾರೀ ಕುಸಿತದ ಹೊರತಾಗಿಯೂ – ಜಾಗತಿಕ ಆರ್ಥಿಕತೆಯ ಭವಿಷ್ಯ ಮಾತ್ರ ತೈಲದ ಮೇಲೆ ನಿಂತಿದೆ. ಆರ್ಥಿಕತೆಯು ಶೀಘ್ರದÇÉೇ ಸಹಜ ಸ್ಥಿತಿಗೆ ಬರಲು ಇಂಧನಗಳ ಬೇಡಿಕೆಯ ಪಾಲು ಪ್ರಮುಖ.

Advertisement

ಜರ್ಮನಿಯಲ್ಲಿನ ಸ್ಥಳೀಯ ಸರಕಾರಗಳು ಕೋವಿಡ್‌-19 ವೈರಸ್‌ ನಿಯಂತ್ರಣದಲ್ಲಿದೆ ಎಂದು ಘೋಷಿಸಿದ ಬಳಿಕ ಸಣ್ಣ ಅಂಗಡಿಗಳನ್ನು ಸೋಮವಾರ ಮತ್ತೆ ತೆರೆಯಲಾಗಿದೆ. ನ್ಯೂಜಿಲೆಂಡ್‌ ಪ್ರಧಾನಿ ಜಸಿಂಡಾ ಅರ್ಡೆನೆರ್‌ ಅವರು ಲಾಕ್‌ಡೌನ್‌ ಸಡಿಲಗೊಳಿಸುವ ಸೂಚನೆ ನೀಡಿದ್ದಾರೆ. ಆಸ್ಟ್ರೇಲಿಯಾದ ಸಿಡ್ನಿಯ ಕೆಲವು ಕಡಲ ತೀರಗಳ ದೇಶವು ದೈನಂದಿನ ಜೀವನವನ್ನು ಸಾಮಾನ್ಯಗೊಳಿಸುವತ್ತ ಸಾಗುತ್ತಿದೆ. ಈಗಾಗಲೇ ಕೆಲವು ಅಂಗಡಿಗಳನ್ನು ತೆರೆಯಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next