Advertisement
ಹಿಂದಿನ ಲೆಕ್ಕಾಚಾರದ ಪ್ರಕಾರ ಅಂತರ ವಲಯ ಟಿ20 ಕೂಟವನ್ನು ಜ.21ರಿಂದ 29ರವರೆಗೆ ಇಟ್ಟುಕೊಳ್ಳಲಾಗಿತ್ತು. ಅದು ಜ.8ರಿಂದ 16ರವರೆಗೆ ನಡೆಯಲಿದೆ. ಮತ್ತೂಂದು ಪ್ರಮುಖ ಸೈಯದ್ ಮುಷ್ತಾಕ್ ಅಲಿ ಕೂಟ ಫೆ.4ರಿಂದ 10ರವರೆಗೆ ನಡೆಯಬೇಕಿತ್ತು. ಅದೀಗ ಜ.21ರಿಂದ 27ರವರೆಗೆ ನಡೆಯಲಿದೆ. ಇಷ್ಟು ಮಾತ್ರವಲ್ಲ 50 ಓವರ್‌ಗಳ ವಿಜಯ್ ಹಜಾರೆ ಕೂಟದ ದಿನಾಂಕವೂ ಬದಲಾಗಿದೆ.ಲೀಗ್ ಹಂತದ ಪಂದ್ಯಗಳು ಹಿಂದಿನ ಫೆ.16ರಿಂದ 25ರ ಬದಲು ಫೆ.5ರಿಂದ 14ರವರೆಗೆ ನಡೆಯಲಿದೆ. ಈ ಕೂಟದ ನಾಕೌಟ್ ಹಂತದ ಪಂದ್ಯಗಳು ಫೆ.21ರಿಂದ 26ರವರೆಗೆ ನಡೆಯಲಿವೆ.
ಉಳಿಸಿಕೊಳ್ಳಬೇಕಾದ ಆಟಗಾರರ ಪಟ್ಟಿ ಕೊಡಲು ಐಪಿಎಲ್ ಫ್ರಾಂಚೈಸಿಗಳಿಗೆ ಬಿಸಿಸಿಐ ಜ.4ರ ಗಡುವು ನೀಡಿದೆ. ಇದರ ಮಧ್ಯೆ ಕೋಲ್ಕತಾ ನೈಟ್ ರೈಡರ್ಸ್ ತಂಡದ ನಾಯಕ ಗೌತಮ್ ಗಂಭೀರ್ ಯಾವುದೇ ಫ್ರಾಂಚೈಸಿಗಳ ಪರ ಆಡುವುದಾಗಿ ತಿಳಿಸಿದ್ದಾರೆ. ತಾನಿನ್ನೂ ಮಾಲಿಕರೊಂದಿಗೆ ನನ್ನ ಭವಿಷ್ಯದ ಬಗ್ಗೆ ಚರ್ಚಿಸಿಲ್ಲ, ಅಗತ್ಯ ಬಂದರೆ ಯಾವುದೇ ತಂಡಗಳ ಪರವೂ ಆಡಲು ಸಿದ್ಧನಿದ್ದೇನೆ. ಪ್ರದರ್ಶನ ನೀಡುವುದಷ್ಟೇ ನನ್ನ ಕೆಲಸ ಎಂದಿದ್ದಾರೆ. ಅವರ ಈ ಹೇಳಿಕೆ ಪರಿಗಣಿಸಿದರೆ, ಕೋಲ್ಕತಾ ಫ್ರಾಂಚೈಸಿ ಗಂಭೀರ್‌ರನ್ನು ಬಿಟ್ಟು ಕೊಡುವ ಸುಳಿವು ನೀಡಿದೆಯೇ? ಎಂಬ ಪ್ರಶ್ನೆ ಉದ್ಭವಿಸಿದೆ.