ಹೊನ್ನಾಳಿ: ದೇಶೀಯ ಆಟಗಳಾದ ಕಬ್ಬಡಿ, ಖೋ-ಖೋ, ಹಾಕಿ ಸೇರಿದಂತೆ ನಮ್ಮ ಎಲ್ಲ ಕೀಡೆಗಳಿಗೆ ಪ್ರೋತ್ಸಾಹ ಅಗತ್ಯ ಎಂದು ಮಾಜಿ ಸಚಿ ಎಂ.ಪಿ. ರೇಣುಕಾಚಾರ್ಯ ಹೇಳಿದರು.
ದೀನ್‌ದಯಾಳ ಉಪಾಧ್ಯಾಯ ಅವರ ಜನ್ಮ ಶತಾಬ್ದಿ ನಿಮಿತ್ತ ಬಿಜೆಪಿ ತಾಲೂಕು ಯುವ ಮೋರ್ಚಾ ವತಿಯಿಂದ ಪಟ್ಟಣದ ಕನಕರಂಗ ಮಂದಿರದಲ್ಲಿ ಹಮಿಕೊಂಡಿದ್ದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ಉದ್ಘಾಟಿಸಿ ಅವರು ಮಾತನಾಡಿದರು.
ಒಂದು ಕಾಲದಲ್ಲಿ ನಮ್ಮ ದೇಶದ ಆಟಗಳು ಉತ್ತುಂಗ ಸ್ಥಾನದಲ್ಲಿ ಇದ್ದು, ಇಂದು ಅವುಗಳು ಕಣ್ಮರೆಯಾಗಿ ವಿದೇಶಿ ಆಟಗಳಿಗೆ ಮೊರೆ ಹೊಗಿರುವುದು ದುರದೃಷ್ಟಕರ. ಯುವಕರು ಭವ್ಯ ಭಾರತದ ಕ್ರೀಡೆಗಳತ್ತ ಗಮನ ಹರಿಸುವುದು ಅವಶ್ಯಕವಾಗಿದೆ ಎಂದರು.
ದೀನ್‌ದಯಾಳ ಉಪಾಧ್ಯಾಯರ ಅಪ್ಪಟ ದೇಶಪ್ರೇಮಿ ಅವರು ಕಟ್ಟಿ ಬೆಳೆಸಿದ ಪಕ್ಷ ಬಿಜೆಪಿಯಿಂದ ಅಟಲ್ ಬಿಹಾರಿ ವಾಜಪೇಯಿ, ನರೇಂದ್ರಮೋದಿ ಅವರುಗಳಂತಹ ಮಹಾನ್ ವ್ಯಕ್ತಿಗಳು ಜನಿಸಿ ದೇಶದ ಪ್ರಧಾನಿಯಾಗಿ ಹೊರ ಹೊಮ್ಮಿದ್ದಾರೆ ಎಂದು ಹೇಳಿದರು.
ಬಿಜೆಪಿ ತಾಲೂಕು ಯುವಮೋರ್ಚಾ ದೀನದಯಾಳ ಉಪಾಧ್ಯಾಯರ ಜನ್ಮ ಶತಾಬ್ದಿ ಆಚರಣೆ ಅಂಗವಾಗಿ ಕಬಡ್ಡಿ ಪಂದ್ಯಾವಳಿಯನ್ನು ಆಯೋಜಿಸಿರುವುದು ಶ್ಲಾಘನೀಯ ಕಾರ್ಯ ಎಂದು ಹೇಳಿದರು. ಬಿಜೆಪಿ ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ಪಿ.ಸಿ. ಶ್ರೀನಿವಾಸ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಪ್ರಕಾಶ್ ಅಣಬೇರ್, ದಾವಣಗೆರೆ ದಕ್ಷಿಣ ಯುವಮೋರ್ಚಾ ಅಧ್ಯಕ್ಷ ಶಿವನಗೌಡ ಪಾಟೀಲ್,
ತಾಲೂಕು ಯುವಮೋರ್ಚಾ ಅಧ್ಯಕ್ಷ ಸಿ.ಆರ್. ಶಿವಾನಂದ್, ತಾಪಂ ಅಧ್ಯಕ್ಷೆ ಸುಲೋಚನಮ್ಮ ಪಾಲಾಕ್ಷಪ್ಪ, ಜಿಪಂ ಸದಸ್ಯರಾದ ಎಂ.ಆರ್. ಮಹೇಶ್, ಸುರೇಂದ್ರನಾಯ್ಕ, ತಾಪಂ ಸದಸ್ಯರಾದ ಕೆ.ಎಲ್. ರಂಗಪ್ಪ, ಮರಿಕನ್ನಪ್ಪ, ಶಾಂತರಾಜ್ ಪಾಟೀಲ್, ಪಾಲಾಕ್ಷಪ್ಪ, ಪ್ರೇಮಕುಮಾರ್‌ಬಂಡಿಗಡಿ ಇತರರು ಇದ್ದರು.