Advertisement
17 ಸಾವಿರದಷ್ಟು ಇಳಿಕೆಕಳೆದ ವರ್ಷ ಇದೇ ಅವಧಿಯಲ್ಲಿ 2,80,091 ವಾಹನಗಳು ಮಾರಾಟ ಆಗಿದ್ದು, ಈ ವರ್ಷ 2,62,714 ಯೂನಿಟ್‌ಗಳಷ್ಟು ಮಾರಾಟವಾಗಿದೆ. ಅಂದರೆ ಇದರ ಪ್ರಮಾಣದಲ್ಲಿ 17,377ರಷ್ಟು ಇಳಿಕೆಯಾಗಿದೆ.
ಕಾರುಗಳ ಮಾರಾಟದಲ್ಲಿ ಶೇ.8.1ರಷ್ಟು ಮಾರಾಟ ಕುಸಿದಿದೆ. ಕಳೆದ ವರ್ಷ ಜನವರಿ ತಿಂಗಳಲ್ಲಿ 1,79,324 ಯೂನಿಟ್ ಗಳು ಮಾರಾಟ ಆಗಿತ್ತು. ಆದರೆ ಈ ಬಾರಿ 1,64,793 ಯೂನಿಟ್‌ಗಳಷ್ಟು ಸೇಲ್ ಆಗಿವೆ ಎಂದು ಸಿಯಾಮ್ ಇತ್ತೀಚಿನ ದತ್ತಾಂಶಗಳ ಮೂಲಕ ತಿಳಿಸಿದೆ. ದ್ವಿಚಕ್ರ ವಾಹನಗಳ ಮಾರಾಟದಲ್ಲೂ ಹಿನ್ನಡೆ
ಮೋಟಾರ್ ಸೈಕಲ್ ಬೆಳವಣಿಗೆ ದರ ಸಹ ಶೇ.15.17ರಷ್ಟು ಇಳಿಕೆಯಾಗಿದೆ. ಈ ವರ್ಷ 8,71,886 ವಾಹನಗಳು ಮಾರಾಟ ಆಗಿವೆ. ಕಳೆದ ವರ್ಷದ ಇದೇ ಅವಧಿಯಲ್ಲಿ 10,27,766 ವಾಹನಗಳು ಮಾರಾಟ ಆಗಿತ್ತು. ಇದರೊಂದಿಗೆ ದ್ವಿಚಕ್ರ ವಾಹನ ಮಾರಾಟವು ಶೇ.16.06ರಷ್ಟು ಕುಸಿತ ಕಂಡಿದೆ. ಈ ಹಿಂದಿನ ವರ್ಷದಲ್ಲಿ 15,97,528 ಯೂನಿಟ್‌ಗಳಿಗೆ ಪ್ರತಿಯಾಗಿ 13,41,005 ವಾಹನಗಳು ಮಾರಾಟ ಆಗಿವೆ ಎಂದು ವರದಿ ತಿಳಿಸಿದೆ. ವಾಣಿಜ್ಯ ವಾಹನಗಳ ಮಾರಾಟದಲ್ಲಿ ಶೇ.14.04ರಷ್ಟು ಕುಸಿತ ಕಂಡು ಬಂದಿದೆ. 75,289 ಯೂನಿಟ್‌ಗಳು ಮಾರಾಟ ಆಗಿವೆ ಎಂದು ಸಿಯಾಮ್ ತಿಳಿಸಿದೆ.