Advertisement
ಜ. 26 ರಂದು ಸ್ಥಳೀಯ ಡೊಂಬಿವಲಿ ಕರ್ನಾಟಕ ಸಂಘದ ಮಹಿಳಾ ವಿಭಾಗದವರು ಡೊಂಬಿವಲಿ ಪೂರ್ವದ ರೋಟರಿ ಕ್ಲಬ್ ಸಭಾಗೃಹದಲ್ಲಿ ಆಯೋಜಿಸಿದ್ದ ಅರಸಿನ ಕುಂಕುಮ ಮತ್ತು ಸ್ನೇಹ ಸಮ್ಮಿಲನದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದ ಅವರು, ಇಂದಿನ ಮಕ್ಕಳು ಭಗವದ್ಗೀತೆಯನ್ನು ಓದಿ ಅರ್ಥೈಸಿಕೊಂಡರೆ ಸಮಾಜದಲ್ಲಿ ವಿವಾಹ ವಿಚ್ಛೇದನ, ಆತ್ಮಹತ್ಯೆಗಳಂತಹ ಘಟನೆಗಳು ಎದುರಾಗುವುದಿಲ್ಲ. ಇಂದಿನ ಶಾಲೆಗಳು ಕಾರ್ಖಾನೆಗಳಾಗಿದ್ದು, ಅವು ಮಕ್ಕಳನ್ನು ಹಣಗಳಿಸುವ ಯಂತ್ರಗಳನ್ನಾಗಿ ಪರಿವರ್ತಿಸುತ್ತಿವೆ. ಇದಕ್ಕೆ ಅರ್ಧದಷ್ಟು ಹೊಣೆ ಪಾಲಕರದ್ದಾಗಿದೆ. ನಾವು ನಮ್ಮ ಹಿರಿಯರು ನಮಗೆ ನೀಡಿದ ಸಂಸ್ಕಾರ ಹಾಗೂ ಸನ್ಮಾರ್ಗವನ್ನು ನಮ್ಮ ಮಕ್ಕಳಿಗೆ ಪರಿಚಯಿಸುವಲ್ಲಿ ವಿಫಲರಾಗಿವುದೇ ಇದಕ್ಕೆ ಕಾರಣವಾಗಿದೆ. ಡೊಂಬಿವಲಿ ಕರ್ನಾಟಕ ಸಂಘದ ಐದು ದಶಕಗಳ ಕಾರ್ಯ ಅಭಿನಂದನೀಯವಾಗಿದೆ ಎಂದು ನುಡಿದರು.
Related Articles
Advertisement
ಪ್ರಾಸ್ತಾವಿಕವಾಗಿ ಮಾತನಾಡಿದ ಡೊಂಬಿವಲಿ ಕರ್ನಾಟಕ ಸಂಘದ ಕಾರ್ಯಾಧ್ಯಕ್ಷ ಸುಕುಮಾರ್ ಎನ್. ಶೆಟ್ಟಿ ಅವರು ಸಂಘದ ಸಿದ್ಧಿ-ಸಾಧನೆಗಳನ್ನು ವಿವರಿಸಿದರು. ಸಮಾರಂಭದಲ್ಲಿ ವೈವಾಹಿಕ ಜೀವನದ ಸುವರ್ಣ ಮಹೋತ್ಸವವನ್ನು ಆಚರಿಸಿದ ಗುರುರಾಜ ಮತ್ತು ವಿಜಯಲಕ್ಷಿ¾à ಕುಲಕರ್ಣಿ, ಭಾಸ್ಕರ ಮತ್ತು ಯಮುನಾ ಪಾಟೀಲ್, ವಿಠuಲ್ ಮತ್ತು ಮೀನಾಕ್ಷೀ ಶೆಟ್ಟಿ, ವಸಂತ ಮತ್ತು ವಸುಧಾ ಕುಲಕರ್ಣಿ ದಂಪತಿಗಳನ್ನು ಮಹಿಳಾ ವಿಭಾಗದ ವತಿಯಿಂದ ಸಮ್ಮಾನಿಸಲಾಯಿತು.
ಸಮ್ಮಾನಿತರು ಮಾತನಾಡಿ ಕೃತಜ್ಞತೆ ಸಲ್ಲಿಸಿದರು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ಮಹಿಳಾ ವಿಭಾಗದಿಂದ ವಿವಿಧ ವಿನೋದಾವಳಿಗಳು ಮತ್ತು ನೃತ್ಯ ವಿದ್ಯಾಲಯದ ಶೈಲಜಾ ಮದುಸೂಧನ್ ತಂಡದಿಂದ ಭಸ್ಮಾಸುರ ಮೋಹಿನಿ ನೃತ್ಯ ರೂಪಕ ನಡೆಯಿತು. ಶೈಲಜಾ ಮಧುಸೂದನ್ ಅವರನ್ನು ಗೌರವಿಸಲಾಯಿತು. ವಿದ್ಯಾ ಆಲಗೂರ, ಮಾಧುರಿಕಾ ಬಂಗೇರಾ, ಮಧುಸೂದನ್ ರಾವ್ ಕಾರ್ಯಕ್ರಮ ನಿರ್ವಹಿಸಿದರು. ಪದ್ಮಪ್ರಿಯಾ ಬಲ್ಲಾಳ್, ಗೀತಾ ಕೋಟೆಕಾರ್, ಪುಷ್ಪಲತಾ ಶೆಟ್ಟಿ, ಶೋಭಾ ರೈ, ಸುಮಿತ್ರಾ ಭಟ್ ಅವರು ಅತಿಥಿಗಳನ್ನು ಪರಿಚಯಿಸಿದರು. ಪದ್ಮಾ ಅವರು ವಂದಿಸಿದರು.
ವೇದಿಕೆಯಲ್ಲಿ ಇಂದ್ರಾಳಿ ದಿವಾಕರ ಶೆಟ್ಟಿ, ಸುರೇಂದ್ರ ಕುಮಾರ್ ಹೆಗೆr, ವಿನೋದಿನಿ ಹೆಗ್ಡೆ, ಮಮತಾ ಗುಜರನ್, ದೇವದಾಸ್ ಕುಲಾಲ್, ಲೋಕನಾಥ ಶೆಟ್ಟಿ, ಯೋಗಿನಿ ಶೆಟ್ಟಿ, ಮಾಧುರಿಕಾ ಬಂಗೇರ, ಆಶಾ ಶೆಟ್ಟಿ, ವಿದ್ಯಾ ಆಲಗೂರ ಮೊದಲಾದವರು ಉಪಸ್ಥಿತರಿದ್ದರು. ಚಂಚಲಾ ಸಾಲ್ಯಾನ್, ಪರಿಮಳಾ ಕುಲಕರ್ಣಿ, ಕಾಂತಿಲಾಲ್ ಪಾಟೀಲ್, ರಮೇಶ್ ಸುವರ್ಣ, ಗೀತಾ ಕೋಟೆಕಾರ್, ಸಹಕರಿಸಿದರು. ಪ್ರಭಾಕರ ಶೆಟ್ಟಿ, ನ್ಯಾಯವಾದಿ ಆರ್. ಎಂ. ಭಂಡಾರಿ, ಎಸ್. ಎನ್. ಸೋಮಾ, ಡಾ| ವಿ. ಎಂ. ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ನೆಟ್ಟ ಸಸಿ ಬೆಳೆದು ಉತ್ತಮ ಫಲ ನೀಡಬೇಕಾದರೆ ನಾವು ಸಸಿಯನ್ನು ಉತ್ತಮ ರೀತಿಯಿಂದ ಬೆಳೆಸಬೇಕು. ಆಗ ಮಾತ್ರ ಉತ್ತಮ ಫಲ ನೀಡುತ್ತದೆ. ಅದಕ್ಕೆ ನಮ್ಮ ಡೊಂಬಿವಲಿ ಕರ್ನಾಟಕ ಸಂಘವೇ ಸಾಕ್ಷಿಯಾಗಿದೆ. ಮಹಿಳೆಯರು ಸುಸಂಸ್ಕೃತರಾಗಿ ಸಾಧನೆಯ ಶಿಖರವನ್ನು ಏರಬೇಕು. ಆದರೆ ನಮ್ಮ ಸನಾತನ ಧರ್ಮ ಸಂಸ್ಕೃತಿಗೆ ಧಕ್ಕೆ ತರುವ ಕೆಲಸ ಮಾಡಬಾರದು. ಮಹಿಳಾ ವಿಭಾಗದ ಕಾರ್ಯವೈಖರಿ ಅಭಿನಂದನೀಯವಾಗಿದೆ. ಮಹಿಳಾ ವಿಭಾಗದ ಪ್ರತಿಯೊಂದು ಕಾರ್ಯಕ್ರಮಗಳಿಗೆ ಸಂಘದ ಸಹಕಾರ, ಪ್ರೋತ್ಸಾಹ ಸದಾಯಿದೆ.– ಇಂದ್ರಾಳಿ ದಿವಾಕರ ಶೆಟ್ಟಿ,
ಅಧ್ಯಕ್ಷರು, ಡೊಂಬಿವಲಿ ಕರ್ನಾಟಕ ಸಂಘ ಡೊಂಬಿವಲಿ ಕರ್ನಾಟಕ ಸಂಘ ಮಹಿಳಾ ವಿಭಾಗ ಸ್ನೇಹ ಸಮ್ಮಿಲನ
ಅರಸಿನ ಕುಂಕುಮ ಡೊಂಬಿವಲಿ: ಅರಸಿನ ಕುಂಕುಮ ನಮ್ಮ ಸನಾತನ ಭಾರತೀಯ ಸಂಸ್ಕೃತಿಯ ಪ್ರತೀಕವಾಗಿದ್ದು, ಅದಕ್ಕೆ ವೈಜ್ಞಾನಿಕ ಹಿನ್ನೆಲೆಯೂ ಇದೆ ಎಂದು ಮಹಾರಾಷ್ಟ್ರ ಕನ್ನಡಿಗ ಕಲಾವಿದರ ಪರಿಷತ್ತು ಮಹಾರಾಷ್ಟ್ರ ಅಧ್ಯಕ್ಷ ಡಾ| ಸುರೇಂದ್ರ ಕುಮಾರ್ ಹೆಗ್ಡೆ ಅವರು ನುಡಿದರು. ಜ. 26 ರಂದು ಸ್ಥಳೀಯ ಡೊಂಬಿವಲಿ ಕರ್ನಾಟಕ ಸಂಘದ ಮಹಿಳಾ ವಿಭಾಗದವರು ಡೊಂಬಿವಲಿ ಪೂರ್ವದ ರೋಟರಿ ಕ್ಲಬ್ ಸಭಾಗೃಹದಲ್ಲಿ ಆಯೋಜಿಸಿದ್ದ ಅರಸಿನ ಕುಂಕುಮ ಮತ್ತು ಸ್ನೇಹ ಸಮ್ಮಿಲನದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದ ಅವರು, ಇಂದಿನ ಮಕ್ಕಳು ಭಗವದ್ಗೀತೆಯನ್ನು ಓದಿ ಅರ್ಥೈಸಿಕೊಂಡರೆ ಸಮಾಜದಲ್ಲಿ ವಿವಾಹ ವಿಚ್ಛೇದನ, ಆತ್ಮಹತ್ಯೆಗಳಂತಹ ಘಟನೆಗಳು ಎದುರಾಗುವುದಿಲ್ಲ. ಇಂದಿನ ಶಾಲೆಗಳು ಕಾರ್ಖಾನೆಗಳಾಗಿದ್ದು, ಅವು ಮಕ್ಕಳನ್ನು ಹಣಗಳಿಸುವ ಯಂತ್ರಗಳನ್ನಾಗಿ ಪರಿವರ್ತಿಸುತ್ತಿವೆ. ಇದಕ್ಕೆ ಅರ್ಧದಷ್ಟು ಹೊಣೆ ಪಾಲಕರದ್ದಾಗಿದೆ. ನಾವು ನಮ್ಮ ಹಿರಿಯರು ನಮಗೆ ನೀಡಿದ ಸಂಸ್ಕಾರ ಹಾಗೂ ಸನ್ಮಾರ್ಗವನ್ನು ನಮ್ಮ ಮಕ್ಕಳಿಗೆ ಪರಿಚಯಿಸುವಲ್ಲಿ ವಿಫಲರಾಗಿವುದೇ ಇದಕ್ಕೆ ಕಾರಣವಾಗಿದೆ. ಡೊಂಬಿವಲಿ ಕರ್ನಾಟಕ ಸಂಘದ ಐದು ದಶಕಗಳ ಕಾರ್ಯ ಅಭಿನಂದನೀಯವಾಗಿದೆ ಎಂದು ನುಡಿದರು. ಇನ್ನೋರ್ವ ವಿಶೇಷ ಅತಿಥಿಯಾಗಿ ಆಗಮಿಸಿ ವಿನೋದಿನಿ ಎಸ್. ಹೆಗಡೆ ಅವರು ಮಾತನಾಡಿ, ಉತ್ತರಾಯಣ ಕಾಲದಲ್ಲಿ ಮಾಡಿದ ಅರಿಸಿನ ಕುಂಕುಮ ಕಾರ್ಯಕ್ರಮಕ್ಕೆ ಅತ್ಯಂತ ಮಹತ್ವವಿದ್ದು ಅದು ನಮ್ಮ ಧಾರ್ಮಿಕ, ಸಂಸ್ಕೃತಿ ಹಾಗೂ ಸೌಭಾಗ್ಯದ ಪ್ರತೀಕವಾಗಿದೆ. ನಮ್ಮ ಸನಾತನ ಧರ್ಮ ಸಂಸ್ಕೃತಿಯನ್ನು ಉಳಿಸಿ-ಬೆಳೆಸುವಲ್ಲಿ ಡೊಂಬಿವಲಿ ಕರ್ನಾಟಕ ಸಂಘದ ಕಾರ್ಯ ಅಭಿನಂದನೀಯವಾಗಿದೆ ಎಂದು ನುಡಿದರು. ಗೌರವ ಅತಿಥಿಯಾಗಿ ಪಾಲ್ಗೊಂಡ ಕುಲಾಲ ಸಂಘ ಮುಂಬಯಿ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷ ಮಮತಾ ಗುಜರಾನ್ ಮಾತನಾಡಿ, ಎಂಭತ್ತರ ದಶಕದಲ್ಲಿ ಅಂದಿನ ಮಕ್ಕಳಿಗೆ ಪಠ್ಯೇತರ ಚಟುವಟಿಕೆಗಳಿಗೆ ಪ್ರೋತ್ಸಾಹ ದೊರೆಯುತ್ತಿರಲಿಲ್ಲ. ಆದರೆ ಇಂದು ಕಾಲ ಬದಲಾಗಿದೆ. ಪಾಲಕರು ಮಕ್ಕಳಿಗೆ ಪಠ್ಯೇತರ ಚಟುವಟಿಕೆಗಳಿಗೂ ಪ್ರೋತ್ಸಾಹ ನೀಡುತ್ತಿದ್ದು, ಸ್ವಾಗತಾರ್ಹ. ಮಕ್ಕಳು ಮೊಬೈಲ್‌ನ್ನು ಹಿತಮಿತವಾಗಿ ಬಳಸಬೇಕು ಎಂದು ನುಡಿದು ಸಂಘದ ಕಾರ್ಯವೈಖರಿಯನ್ನು ಶ್ಲಾಘಿಸಿದರು. ಇದೇ ಸಮಯದಲ್ಲಿ ಗಣ್ಯರನ್ನು ಶಾಲು ಹೊದೆಸಿ, ಫಲಪುಷ್ಪ ಹಾಗೂ ಸ್ಮರಣಿಕೆಯನ್ನಿತ್ತು ಸಂಘದ ಪದಾಧಿಕಾರಿಗಳು ಸಮ್ಮಾನಿಸಿದರು. ಡೊಂಬಿವಲಿ ಕರ್ನಾಟಕ ಸಂಘದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಷ್ಮಾ ಡಿ. ಶೆಟ್ಟಿ ಸ್ವಾಗತಿಸಿ ಕಾರ್ಯಕಾರಿಣಿ ಸಮಿತಿಯ ಸಹಕಾರದಿಂದ ಮಹಿಳಾ ವಿಭಾಗ ಕಳೆದ ಅನೇಕ ವರ್ಷಗಳಿಂದ ಕನ್ನಡ ಸಂಸ್ಕೃತಿ, ಕಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದು, ಮುಂಬರುವ ದಿನಗಳಲ್ಲಿ ತಮ್ಮೆಲ್ಲರ ಸಹಕಾರದಿಂದ ಇನ್ನಷ್ಟು ಹೆಚ್ಚಿನ ಕಾರ್ಯಕ್ರಮಗಳನ್ನು ನಡೆಸುವುದಾಗಿ ತಿಳಿಸಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಡೊಂಬಿವಲಿ ಕರ್ನಾಟಕ ಸಂಘದ ಕಾರ್ಯಾಧ್ಯಕ್ಷ ಸುಕುಮಾರ್ ಎನ್. ಶೆಟ್ಟಿ ಅವರು ಸಂಘದ ಸಿದ್ಧಿ-ಸಾಧನೆಗಳನ್ನು ವಿವರಿಸಿದರು. ಸಮಾರಂಭದಲ್ಲಿ ವೈವಾಹಿಕ ಜೀವನದ ಸುವರ್ಣ ಮಹೋತ್ಸವವನ್ನು ಆಚರಿಸಿದ ಗುರುರಾಜ ಮತ್ತು ವಿಜಯಲಕ್ಷಿ¾à ಕುಲಕರ್ಣಿ, ಭಾಸ್ಕರ ಮತ್ತು ಯಮುನಾ ಪಾಟೀಲ್, ವಿಠuಲ್ ಮತ್ತು ಮೀನಾಕ್ಷೀ ಶೆಟ್ಟಿ, ವಸಂತ ಮತ್ತು ವಸುಧಾ ಕುಲಕರ್ಣಿ ದಂಪತಿಗಳನ್ನು ಮಹಿಳಾ ವಿಭಾಗದ ವತಿಯಿಂದ ಸಮ್ಮಾನಿಸಲಾಯಿತು. ಸಮ್ಮಾನಿತರು ಮಾತನಾಡಿ ಕೃತಜ್ಞತೆ ಸಲ್ಲಿಸಿದರು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ಮಹಿಳಾ ವಿಭಾಗದಿಂದ ವಿವಿಧ ವಿನೋದಾವಳಿಗಳು ಮತ್ತು ನೃತ್ಯ ವಿದ್ಯಾಲಯದ ಶೈಲಜಾ ಮದುಸೂಧನ್ ತಂಡದಿಂದ ಭಸ್ಮಾಸುರ ಮೋಹಿನಿ ನೃತ್ಯ ರೂಪಕ ನಡೆಯಿತು. ಶೈಲಜಾ ಮಧುಸೂದನ್ ಅವರನ್ನು ಗೌರವಿಸಲಾಯಿತು. ವಿದ್ಯಾ ಆಲಗೂರ, ಮಾಧುರಿಕಾ ಬಂಗೇರಾ, ಮಧುಸೂದನ್ ರಾವ್ ಕಾರ್ಯಕ್ರಮ ನಿರ್ವಹಿಸಿದರು. ಪದ್ಮಪ್ರಿಯಾ ಬಲ್ಲಾಳ್, ಗೀತಾ ಕೋಟೆಕಾರ್, ಪುಷ್ಪಲತಾ ಶೆಟ್ಟಿ, ಶೋಭಾ ರೈ, ಸುಮಿತ್ರಾ ಭಟ್ ಅವರು ಅತಿಥಿಗಳನ್ನು ಪರಿಚಯಿಸಿದರು. ಪದ್ಮಾ ಅವರು ವಂದಿಸಿದರು. ವೇದಿಕೆಯಲ್ಲಿ ಇಂದ್ರಾಳಿ ದಿವಾಕರ ಶೆಟ್ಟಿ, ಸುರೇಂದ್ರ ಕುಮಾರ್ ಹೆಗೆr, ವಿನೋದಿನಿ ಹೆಗ್ಡೆ, ಮಮತಾ ಗುಜರನ್, ದೇವದಾಸ್ ಕುಲಾಲ್, ಲೋಕನಾಥ ಶೆಟ್ಟಿ, ಯೋಗಿನಿ ಶೆಟ್ಟಿ, ಮಾಧುರಿಕಾ ಬಂಗೇರ, ಆಶಾ ಶೆಟ್ಟಿ, ವಿದ್ಯಾ ಆಲಗೂರ ಮೊದಲಾದವರು ಉಪಸ್ಥಿತರಿದ್ದರು. ಚಂಚಲಾ ಸಾಲ್ಯಾನ್, ಪರಿಮಳಾ ಕುಲಕರ್ಣಿ, ಕಾಂತಿಲಾಲ್ ಪಾಟೀಲ್, ರಮೇಶ್ ಸುವರ್ಣ, ಗೀತಾ ಕೋಟೆಕಾರ್, ಸಹಕರಿಸಿದರು. ಪ್ರಭಾಕರ ಶೆಟ್ಟಿ, ನ್ಯಾಯವಾದಿ ಆರ್. ಎಂ. ಭಂಡಾರಿ, ಎಸ್. ಎನ್. ಸೋಮಾ, ಡಾ| ವಿ. ಎಂ. ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ನೆಟ್ಟ ಸಸಿ ಬೆಳೆದು ಉತ್ತಮ ಫಲ ನೀಡಬೇಕಾದರೆ ನಾವು ಸಸಿಯನ್ನು ಉತ್ತಮ ರೀತಿಯಿಂದ ಬೆಳೆಸಬೇಕು. ಆಗ ಮಾತ್ರ ಉತ್ತಮ ಫಲ ನೀಡುತ್ತದೆ. ಅದಕ್ಕೆ ನಮ್ಮ ಡೊಂಬಿವಲಿ ಕರ್ನಾಟಕ ಸಂಘವೇ ಸಾಕ್ಷಿಯಾಗಿದೆ. ಮಹಿಳೆಯರು ಸುಸಂಸ್ಕೃತರಾಗಿ ಸಾಧನೆಯ ಶಿಖರವನ್ನು ಏರಬೇಕು. ಆದರೆ ನಮ್ಮ ಸನಾತನ ಧರ್ಮ ಸಂಸ್ಕೃತಿಗೆ ಧಕ್ಕೆ ತರುವ ಕೆಲಸ ಮಾಡಬಾರದು. ಮಹಿಳಾ ವಿಭಾಗದ ಕಾರ್ಯವೈಖರಿ ಅಭಿನಂದನೀಯವಾಗಿದೆ. ಮಹಿಳಾ ವಿಭಾಗದ ಪ್ರತಿಯೊಂದು ಕಾರ್ಯಕ್ರಮಗಳಿಗೆ ಸಂಘದ ಸಹಕಾರ, ಪ್ರೋತ್ಸಾಹ ಸದಾಯಿದೆ.
– ಇಂದ್ರಾಳಿ ದಿವಾಕರ ಶೆಟ್ಟಿ,
ಅಧ್ಯಕ್ಷರು, ಡೊಂಬಿವಲಿ ಕರ್ನಾಟಕ ಸಂಘ ಚಿತ್ರ-ವರದಿ ಗುರುರಾಜ ಪೋತನೀಸ್