Advertisement

ಡೊಂಬಿವಲಿ ಜಗಜ್ಯೋತಿ ಕಲಾವೃಂದದಿಂದ ತಾಳಮದ್ದಳೆ

04:12 PM Sep 12, 2017 | Team Udayavani |

ಡೊಂಬಿವಲಿ: ಮರಾಠಿ ಮಣ್ಣಿನಲ್ಲಿ ತುಳು- ಕನ್ನಡ ಸಂಸ್ಕೃತಿಯನ್ನು ಉಳಿಸಿ- ಬೆಳೆಸುತ್ತಿರುವ ಡೊಂಬಿವಲಿಯ ಜಗಜ್ಯೋತಿ  ಕಲಾವೃಂದದ ಕಾರ್ಯ ಪ್ರಶಂಸನೀಯ. ಕಲೆ, ಸಾಹಿತ್ಯ, ಸಂಸ್ಕೃತಿ, ಸಂಸ್ಕಾರಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುತ್ತಿರುವ ಕಲಾವೃಂದದ ಕಾರ್ಯ ಇತರ ಸಂಸ್ಥೆಗಳಿಗೆ ಮಾದರಿಯಾಗಿದೆ  ಎಂದು ಡೊಂಬಿವಲಿ ಕರ್ನಾಟಕ ಸಂಘದ ಕಾರ್ಯಾಧ್ಯಕ್ಷ ಇಂದ್ರಾಳಿ ದಿವಾಕರ ಶೆಟ್ಟಿ ಅವರು ನುಡಿದರು.

Advertisement

ಜಗಜೊjéàತಿ ಕಲಾವೃಂದ ಡೊಂಬಿವಲಿ ವತಿಯಿಂದ ಸೆ. 10 ರಂದು ಬೆಳಗ್ಗೆ ಡೊಂಬಿವಲಿ ಪೂರ್ವದ ಠಾಕೂರ್‌ ಸಭಾಗೃಹದಲ್ಲಿ ಆಯೋಜಿಸಲಾಗಿದ್ದ ಯಕ್ಷಗಾನ ತಾಳಮದ್ದಳೆ ಮತ್ತು ಸಮ್ಮಾನ ಸಮಾರಂಭವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಅವರು, ರಜತ ಮಹೋತ್ಸವದಿಂದ ಸುವರ್ಣ ಮಹೋತ್ಸವದತ್ತ ದಾಪುಗಾಲು ಹಾಕುತ್ತಿರುವ ಡೊಂಬಿವಲಿ ಜಗಜ್ಯೋತಿ ಕಲಾ ವೃಂದದ ಸಾಮಾಜಿಕ ಕಳಕಳಿ ಅಭಿನಂದನೀಯವಾಗಿದ್ದು, ಊರಿನ ಕಲಾವಿದರನ್ನು, ಸಾಹಿತಿಗಳನ್ನು ಮುಂಬಯಿ ಮಹಾನಗರಕ್ಕೆ ಆಹ್ವಾನಿಸಿ ಅವರಿಗೆ ವೇದಿಕೆಯನ್ನು ಕಲ್ಪಿಸಿಕೊಡುತ್ತಿದೆ. ಆರ್ಥಿಕ ಬಿಕ್ಕಟ್ಟಿನಲ್ಲಿರುವ ತುಳು ಮಕ್ಕಳ ಶಿಕ್ಷಣ ನೀಡುವ ಸಹಾಯ ಮೆಚ್ಚುವಂಥದ್ದಾಗಿದೆ. ಸಮಾಜದ ಕಾರ್ಯವನ್ನು ಪವಿತ್ರ ಕಾರ್ಯವೆಂದು ನಂಬಿ ಸಮಾಜ ಸೇವೆಯಲ್ಲಿ ತೊಡಗಿರುವ ತುಳು-ಕನ್ನಡಿಗರ ಈ ಜಗಜ್ಯೋತಿ ಕಲಾವೃಂದವು ಮುಂಬಯಿಯಷ್ಟೇ ಅಲ್ಲ, ಮಹಾರಾಷ್ಟ್ರದಲ್ಲಿಯೂ ಬೆಳಗುವಂತಾಗಲಿ ಎಂದು ನುಡಿದು ಶುಭಹಾರೈಸಿದರು.

ಇದೇ ಸಂದರ್ಭದಲ್ಲಿ ಬಿಲ್ಲವರ ಅಸೋಸಿಯೇಶನ್‌ ಸಂಚಾಲಿತ ಗುರುನಾರಾಯಣ ಯಕ್ಷಗಾನ ಮಂಡಳಿ ಸಾಂತಾಕ್ರೂಜ್‌ ಇದರ ಹಿರಿಯ ಕಲಾವಿದ ರಾಮಚಂದ್ರ ಸಾಲ್ಯಾನ್‌ ಅವರನ್ನು ಗಣ್ಯರ ಸಮ್ಮುಖದಲ್ಲಿ ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆ, ಸಮ್ಮಾನ ಪತ್ರವನ್ನಿತ್ತು ಸಮ್ಮಾನಿಸಲಾಯಿತು.

ಸಮ್ಮಾನ ಸ್ವೀಕರಿಸಿ ಮಾತನಾಡಿದ ರಾಮಚಂದ್ರ ಸಾಲ್ಯಾನ್‌ ಅವರು, ಡೊಂಬಿವಲಿಯ ಜಗಜ್ಯೋತಿ ಕಲಾವೃಂದದ ಈ ಸಮ್ಮಾನ ನನ್ನ ಜೀವನದ ಅವಿಸ್ಮರಣೀಯ ಘಳಿಗೆಯಾಗಿದೆ. ಈ ಸಮ್ಮಾನವನ್ನು ನನ್ನ ಹೆತ್ತವರಿಗೆ ಅರ್ಪಿಸುತ್ತಿದ್ದೇನೆ. ನನ್ನ ಜೀವನದಲ್ಲಿ ಎದುರಾಗಿದ್ದ ಹಲವಾರು ಎಡರು- ತೊಡರುಗಳನ್ನು ಎದು ರಿಸಲು ಧೈರ್ಯತುಂಬಿ, ನನ್ನನ್ನು ಓರ್ವ ಕಲಾವಿದನನ್ನಾಗಿ ರೂಪಿಸಿದ ಹಿರಿಯ ಕಲಾವಿದರುಗಳಾದ ಪ್ರಕಾಶ್‌ ಪಣಿಯೂರು, ಟಿ. ಆರ್‌. ಶೆಟ್ಟಿ, ಕೆ. ಎಂ. ಕೋಟ್ಯಾನ್‌ ಅವರ ಸಹಾಯ, ಸಹಕಾರವನ್ನು ಮರೆಯಲು ಸಾಧ್ಯವಿಲ್ಲ. ಜಗಜ್ಯೋತಿ ಸಂಸ್ಥೆಯ ಅಭಿವೃದ್ಧಿಗೆ ತನ್ನ ಸಹಕಾರ, ಪ್ರೋತ್ಸಾಹ ಸದಾಯಿದೆ ಎಂದರು.

ಸಮಾರಂಭದಲ್ಲಿ ಆರ್ಥಿಕವಾಗಿ ಹಿಂದುಳಿದ ತುಳು-ಕನ್ನಡಿಗ ಪ್ರತಿಭಾವಂತ ವಿದ್ಯಾರ್ಥಿಗಳನ್ನು ವಿದ್ಯಾರ್ಥಿ ವೇತನವನ್ನಿತ್ತು ಗೌರವಿಸಲಾಯಿತು. ವೇದಿಕೆಯಲ್ಲಿ ಉದ್ಯಮಿ ಗಣೇಶ್‌ ಶೆಟ್ಟಿ ಐಕಳ, ಶೇಖರ ಶೆಟ್ಟಿ, ಬಂಟರ ಸಂಘ ಡೊಂಬಿವಲಿ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ರಾಜೀವ ಭಂಡಾರಿ, ಪ್ರಭಾಕರ ಶೆಟ್ಟಿ, ಅಶೋಕ್‌ ಡಿ. ಶೆಟ್ಟಿ, ಜಗನ್ನಾಥ ಕಾಂಚನ್‌, ಸನತ್‌ ಕುಮಾರ್‌ ಜೈನ್‌, ರವಿ ಸನಿಲ್‌ ಹಾಗೂ ಜಗಜ್ಯೋತಿ ಕಲಾವೃಂದದ ಪದಾಧಿಕಾರಿಗಳಾದ ಅಧ್ಯಕ್ಷ ವಸಂತ ಸುವರ್ಣ, ಉಪಾಧ್ಯಕ್ಷ ರಮೇಶ್‌ ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಸಂತೋಷ್‌ ಶೆಟ್ಟಿ, ಕೋಶಾಧಿಕಾರಿ ಚಂದ್ರ ನಾಯಕ್‌, ಸದಸ್ಯರಾದ ಬಾಬು ಮೊಗವೀರ, ರಾಜು ಸುವರ್ಣ, ತಾರಾನಾಥ ಅಮೀನ್‌, ಸದಾಶಿವ ಶ್ರೀಯಾನ್‌, ಸುಕುಮಾರ್‌ ಎನ್‌. ಶೆಟ್ಟಿ, ಸುರೇಂದ್ರ ನಾಯ್ಕ ಉಪಸ್ಥಿತರಿದ್ದರು. ವಸಂತ ಸುವರ್ಣ ಸ್ವಾಗತಿಸಿದರು. ಸುಕುಮಾರಿ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಸನತ್‌ಕುಮಾರ್‌ ಜೈನ್‌ ಅತಿಥಿಗಳನ್ನು ಪರಿಚಯಿಸಿದರು. ಸಂತೋಷ್‌ ಶೆಟ್ಟಿ ವಂದಿಸಿದರು. ಇದೇ ಸಂದರ್ಭದಲ್ಲಿ ಊರಿನ ಯಕ್ಷಕಲಾ ಕಟೀಲು ಸಂಸ್ಥೆಯ ಕಲಾವಿದರಿಂದ ಭೀಷ್ಮ ವಿಜಯ ತಾಳಮದ್ದಳೆ ನಡೆಯಿತು.

Advertisement

ಹಿಮ್ಮೇಳದಲ್ಲಿ ಭಾಗವತರಾಗಿ ಕು| ಅಮೃತಾ ಅಡಿಗ, ಪ್ರಫುಲ್ಲಚಂದ್ರ ಭಟ್‌ ನೆಲ್ಯಾಡಿ, ಚೆಂಡೆ-ಮದ್ದಳೆಯಲ್ಲಿ ಗಣೇಶ್‌ ಮಯ್ಯ ವರ್ಕಾಡಿ, ಸತ್ಯನಾರಾಯಣ ಅಡಿಗ, ಮುಮ್ಮೇಳದಲ್ಲಿ ಸುಣ್ಣಂಬಳ ವಿಶ್ವೇಶ್ವರ ಭಟ್‌, ಜಬ್ಟಾರ್‌ ಸಮೋ ಸಂಪಾಜೆ, ರಾಧಾಕೃಷ್ಣ ಕಲ್ಚಾರ್‌, ಗಣೇಶ್‌ ಶೆಟ್ಟಿ ಕನ್ನಡಿಕಟ್ಟೆ, ಎಂ. ಕೆ. ರಮೇಶ್‌ ಆಚಾರ್ಯ, ವಿನಯ್‌ ಆಚಾರ್ಯ ಹೊಸಬೆಟ್ಟು ಹಾಗೂ ಅತಿಥಿ ಭಾಗವತರಾಗಿ ಪೊಲ್ಯ ಲಕ್ಷ್ಮೀನಾರಾಯಣ ಶೆಟ್ಟಿ ಅವರು ಸಹಕರಿಸಿದರು. ಸಂಸ್ಥೆಯ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. 

ಚಿತ್ರ-ವರದಿ : ಗುರುರಾಜ ಪೋತನೀಸ.

Advertisement

Udayavani is now on Telegram. Click here to join our channel and stay updated with the latest news.

Next