Advertisement

ವ್ಯಾಪಾರಕ್ಕಾಗಿ ವೈದ್ಯರಿಗೆ ಸಾವಿರ ಕೋಟಿ ಮೌಲ್ಯದ ಉಚಿತ ಉಡುಗೊರೆ!: ಡೋಲೊ ವಿರುದ್ಧ ಆರೋಪ

09:21 PM Aug 18, 2022 | Team Udayavani |

ನವದೆಹಲಿ: ಕೊರೊನಾ ಸಮಯದಲ್ಲಿ ಅತಿ ಹೆಚ್ಚು ಬಳಕೆಯಾದ “ಡೋಲೊ’ ಮಾತ್ರೆಯ ಉತ್ಪಾದಕ ಸಂಸ್ಥೆಯು ತಮ್ಮ ವ್ಯಾಪಾರ ಹೆಚ್ಚಿಸಿಕೊಳ್ಳಲು ವೈದ್ಯರಿಗೆ ಉಚಿತ ಉಡುಗೊರೆಗಳನ್ನು ನೀಡಿದೆ ಎಂದು ವೈದ್ಯಕೀಯ ಮಾರಾಟ ಪ್ರತಿನಿಧಿಗಳ ಸಂಘವು ಸುಪ್ರೀಂ ಕೋರ್ಟ್‌ಗೆ ಹೇಳಿದೆ. ವೈದ್ಯರು ರೋಗಿಗಳಿಗೆ ಡೋಲೊ ಮಾತ್ರೆಯನ್ನೇ ನಿರ್ದೇಶಿಸುವಂತೆ ಮಾಡಲು ಒಟ್ಟು 1000 ಕೋಟಿ ರೂ. ಮೌಲ್ಯದ ಉಚಿತ ಉಡುಗೊರೆಗಳನ್ನು ಸಂಸ್ಥೆ ವೈದ್ಯರಿಗೆ ನೀಡಿದೆ ಎಂದು ಸಂಘವು ದೂರಿದೆ.

Advertisement

ದೇಶದಲ್ಲಿ ಔಷಧಗಳ ಬೆಲೆ ನಿಯಂತ್ರಣ ವಿಚಾರದಲ್ಲಿ ಸಂಘವು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದೆ. ಇದೇ ಸಮಯದಲ್ಲಿ ಔಷಧೀಯ ಸಂಸ್ಥೆಗಳು ವೈದ್ಯರಿಗೆ ಉಚಿತ ಉಡುಗೊರೆಗಳನ್ನು ಲಂಚದ ರೂಪದಲ್ಲಿ ಕೊಡುತ್ತಿವೆ ಎಂದು ಸಂಘ ದೂರಿದ್ದು, ಅದಕ್ಕೆ ಡೋಲೊ ಅನ್ನು ಉದಾಹರಣೆಯಾಗಿ ಕೊಟ್ಟಿದೆ. ಇದೇ ರೀತಿ ಇನ್ನೂ ಅನೇಕ ಸಂಸ್ಥೆಗಳು ಮಾಡುತ್ತಿದ್ದು ಅವುಗಳ ಮೇಲೆ ನಿಯಂತ್ರಣಕ್ಕೆ ಸಂಘ ಕೋರಿದೆ. ಸದ್ಯ ಔಷಧೀಯ ಸಂಸ್ಥೆಗಳಿಗೆ ನಿಯಮಗಳನ್ನು ಮಾಡುವಂತೆ ಕೇಂದ್ರಕ್ಕೆ ಸೂಚಿಸಬೇಕೆಂದು ಕೋರಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ನ್ಯಾಯಾಲಯ ಸರ್ಕಾರಕ್ಕೆ ಸೂಚಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next