Advertisement
ಉಭಯ ದೇಶಗಳು ಈಗಾಗಲೇ 3,488 ಕಿ.ಮೀ. ದೂರದ ಗಡಿ ಪ್ರದೇಶದಲ್ಲಿ ಹದ್ದಿನ ಕಣ್ಣಿಟ್ಟಿದ್ದು, ಭದ್ರತೆಯನ್ನೂ ಹೆಚ್ಚಿಸಿಕೊಂಡಿದೆ. ಸಿಕ್ಕಿಂ, ಅರುಣಾಚಲ ಪ್ರದೇಶ, ಜಮ್ಮು ಕಾಶ್ಮೀರ, ಹಿಮಾಚಲ ಪ್ರದೇಶ ಹಾಗೂ ಉತ್ತರಾಖಂಡಗಳ ಗಡಿಯಲ್ಲಿ ಈಗಾಗಲೇ ಸೇನಾ ನಿಯೋಜನೆ ಮಾಡಿಕೊಳ್ಳಲಾಗಿದೆ. ಡೋಕ್ಲಾಂ ಹಾಗೂ ಪ್ಲಟೆಯುವಿನಲ್ಲಿ ಸಾವಿರಾರು ಸೈನಿಕರ ನಿಯೋಜನೆ ಆಗಿದ್ದು, ಉಭಯ ದೇಶಗಳು ತೊಡೆತಟ್ಟಿ ಯುದ್ಧದ ಮಾತುಗಳನ್ನಾಡಿಕೊಳ್ಳುತ್ತಿವೆ. ಚೀನಾದ ಅತಿರೇಕತನ ಭಾರತೀಯರನ್ನು ಸಿಡಿದೇಳುವಂತೆ ಮಾಡಿದೆ.
Related Articles
ಗಡಿಯಲ್ಲಿ ಯುದ್ಧ ಪರಿಸ್ಥಿತಿ ಇರುವ ಹಿನ್ನೆಲೆಯಲ್ಲಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಶುಕ್ರವಾರ ಭೂತಾನ್‌ನ ವಿದೇಶಾಂಗ ಪ್ರತಿನಿಧಿ ಡಾಮೊcà ದಾರ್ಜಿ ಅವರನ್ನು ಭೇಟಿ ಮಾಡಿ, ದ್ವಿಪಕ್ಷೀಯ ಒಪ್ಪಂದಕ್ಕೆ ಸಂಬಂಧಿಸಿ ಕಾಠ್ಮಂಡುವಿನಲ್ಲಿ ಮಾತುಕತೆ ನಡೆಸಿದ್ದಾರೆ. ಬಂಗಾಳ ಕೊಲ್ಲಿ ಉಪಕ್ರಮ ಶಕ್ತಿ ಬಹು-ವಲಯ ತಾಂತ್ರಿಕ ಮತ್ತು ಆರ್ಥಿಕ ಸಹಕಾರ (ಬಿಮ್‌ಸ್ಟೆಕ್) ಒಕ್ಕೂಟ ರಾಷ್ಟ್ರಗಳ ಸಚಿವರುಗಳ ಶೃಂಗದಲ್ಲಿ ಪಾಲ್ಗೊಂಡಿದ್ದ ವೇಳೆ ಮಾತುಕತೆ ನಡೆದಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಟ್ವೀಟ್ ಮಾಡಿದ್ದಾರೆ. ಆದರೆ ಸಭೆಯಲ್ಲಿ ಏನೆಲ್ಲಾ ಮಾತುಕತೆಗಳು ನಡೆದಿವೆ ಎನ್ನುವ ಬಗ್ಗೆ ಅಧಿಕೃತ ಮಾಹಿತಿ ಇಲ್ಲ. ಮೂಲಗಳ ಪ್ರಕಾರ ಸಿಕ್ಕಿಂ ವಿವಾದಕ್ಕೆ ಸಂಬಂಧಿಸಿ ಮಾತುಕತೆ ನಡೆದಿದೆ ಎಂದು ಹೇಳಲಾಗಿದೆ.
Advertisement
ಹಿಂದೂ ಮಹಾಸಾಗರ ಭದ್ರತೆಗೆಭಾರತ-ಚೀನಾ ಕೈಜೋಡಿಸಬೇಕು
ಯುಲಿನ್: ಇಷ್ಟೆಲ್ಲಾ ಬೆಳವಣಿಗೆಗಳ ನಡುವೆಯೂ ಚೀನಾ ನೌಕಾ ದಳ, ಹಿಂದೂ ಮಹಾಸಾಗರದ ಭದ್ರತಾ ನಿರ್ವಹಣೆಗೆ ಸಂಬಂಧಿಸಿದಂತೆ ಭಾರತದೊಂದಿಗೆ ಕೈಜೋಡಿಸಲು ಬಯಸಿದೆ. ಹಿಂಬದಿ ಬಾಗಿಲಲ್ಲಿ ಬಂದು ಭಾರತದ ಕದ ತಟ್ಟುತ್ತಿರುವುದು ಸಹಜವಾಗಿಯೇ ಕುತೂಹಲ ಕೆರಳಿಸುವಂತೆ ಮಾಡಿದೆ. ಹಿಂದೂ ಮಹಾಸಾಗರ ಅಂತಾರಾಷ್ಟ್ರೀಯ ಸಮುದಾಯಕ್ಕೆ ಸೇರಲ್ಪಡುವ ಪ್ರದೇಶವಾಗಿದೆ ಎಂದು ಹೇಳಿಕೊಂಡಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಚೀನಾದ ವಿಶೇಷ ಭದ್ರತಾ ದಳದ ಪ್ರಧಾನ ಕಚೇರಿ ಪ್ರಭಾರಿ ಮುಖ್ಯಸ್ಥ ಪ್ರಧಾನಿ ಕ್ಯಾಪ್ಟನ್ ಲಿಯಾಂಗ್ ಟಿಯಾಂಜುನ್, “”ಹಿಂದೂ ಮಹಾಸಾಗರದ ಭದ್ರತೆ ದೃಷ್ಟಿಯಿಂದ ಭಾರತ ಮತ್ತು ಚೀನಾಗಳ ಜಂಟಿ ಸೇವೆ ಬಹಳ ಮುಖ್ಯ. ಇದು ನನ್ನ ವೈಯಕ್ತಿಕವಾದ ಅಭಿಪ್ರಾಯ” ಎಂದು ಹೇಳಿದ್ದಾರೆ. ಯಥಾಸ್ಥಿತಿ ಕಾಪಾಡಿ: ಡಾಮಿನಿಕ್
“ಭಾರತ-ಚೀನಾ ನಡುವಿನ ಡೋಕ್ಲಾಂ ಪ್ಲಟೆಯು ಗಡಿ ವಿವಾದದ ಬೆಳವಣಿಗೆಗಳನ್ನು ಬ್ರಿಟನ್ ಗಮನಿಸುತ್ತ ಬಂದಿದೆ. ಉಭಯ ರಾಷ್ಟ್ರಗಳು ಶಾಂತಿಯಿಂದ ವಿವಾದ ಬಗೆಹರಿಸಿಕೊಳ್ಳಬೇಕಿದೆ. ಇದಕ್ಕಾಗಿ ಯಥಾಸ್ಥಿತಿ ಕಾಪಾಡಿಕೊಂಡು ಹೋಗುವುದು ಸೂಕ್ತ’ ಎಂದು ಬ್ರಿಟಿಷ್ ಡೆಪ್ಯುಟಿ ಹೈ ಕಮಿಷನರ್ ಡಾಮಿನಿಕ್ ಮೆಕ್‌ಅಲಿಸ್ಟರ್ ಹೇಳಿದ್ದಾರೆ. ಶುಕ್ರವಾರ ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಉಭಯ ರಾಷ್ಟ್ರಗಳು ಈ ನಿಟ್ಟಿನಲ್ಲಿ ಯೋಚಿಸುವುದು ಒಳಿತು ಎಂದಿದ್ದಾರೆ. ಚೀನಾ ಲೈಟ್‌ಗಳಿಗೆ ನಿಷೇಧ
ವೃಂದಾವನ ದೇಗುಲದಲ್ಲಿ ನಡೆಯುವ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮಕ್ಕೆ ಚೀನಾ ಉತ್ಪಾದನೆಯ ಯಾವುದೇ ವಸ್ತುಗಳನ್ನೂ ಬಳಸದೇ ಇರಲು ನಿರ್ಧರಿಸಲಾಗಿದೆ. ಬೆಳಕಿನ ಅಲಂಕಾರಗಳಿಗೆ ಬಳಸಲಾಗುತ್ತಿದ್ದ ಚೀನಾದ ಯಾವುದೇ ವಸ್ತುಗಳನ್ನೂ ಬಳಸಬಾರದು ಎಂದು ಮಥುರಾದ ಶ್ರೀಕೃಷ್ಣ ಜನ್ಮಸ್ಥಾನ ಸೇವಾ ಸಂಸ್ಥಾನದ ಕಾರ್ಯದರ್ಶಿ ಕಪಿಲ್ ಶರ್ಮ ತಿಳಿಸಿದ್ದಾರೆ. ಆಗಸ್ಟ್ 14ರಂದು ಶ್ರೀಕೃಷ್ಣ ಜನ್ಮಾಷ್ಟಮಿ ಆಚರಿಸಲಾಗುತ್ತಿದ್ದು, ಜನರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಲು ಈಗಾಗಲೇ ತಿಳಿಸಲಾಗಿದೆ ಎಂದಿ ಹೇಳಿದ್ದಾರೆ.