Advertisement

ಡೊಕ್ಲಾಮ್‌ನಂತಹ ಘಟನೆಗಳು ಇನ್ನಷ್ಟು ಹೆಚ್ಚಾಗಬಹುದು 

12:41 PM Aug 27, 2017 | Team Udayavani |

ಹೊಸದಿಲ್ಲಿ : ಭಾರತ ಮತ್ತು ಚೀನಾ ನಡುವಿನ ಗಡಿ ವಿವಾದಕ್ಕೆ ಕಾರಣವಾಗಿರುವ ಡೊಕ್ಲಾಮ್‌ನಂತಹ ಘಟನೆಗಳು ಇನ್ನಷ್ಟು ಹೆಚ್ಚಬಹುದು ಎಂದು ಸೇನಾ ಮುಖ್ಯಸ್ಥ ಜನರಲ್‌ ಬಿಪಿನ್‌ ರಾವತ್‌ ಹೇಳಿದ್ದಾರೆ.

Advertisement

ಭಾರತದ ಭೌಗೋಳಿಕತೆಯ ಪ್ರಸ್ತುತ ಕಾರ್ಯತಂತ್ರದ ಸವಾಲುಗಳ ಕುರಿತು ಬಿ.ಸಿ. ಜೋಷಿ ಸ್ಮಾರಕ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಜ.ಬಿಪಿನ್‌ ರಾವತ್‌ ‘ಚೀನಾ ಸದ್ಯ ಸ್ಥಿತಿಯನ್ನು ಬದಲಾಯಿಸಲು ಪ್ರಯತ್ನ ಪಡುತ್ತಿದೆ. ನಾವು ಈ ಬಗ್ಗೆ ಚಿಂತಿಸಬೇಕಾದ ಅಗತ್ಯ ಇದೆ. ಮುಂದಿನ ದಿನಗಳಲ್ಲಿ ಚೀನಾದ ಯತ್ನ ಇನ್ನಷ್ಟು ಹೆಚ್ಚಬಹುದು ಎಂದಿದ್ದಾರೆ. 

ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ರಾವತ್‌ ‘ನಾವು ಧೈರ್ಯಗುಂದಬಾರದು.ನಾವೀಗ ಈ ಸಮಸ್ಯೆ ಪರಿಹರಿಸಬಹುದು ಎಂದು ಹೇಳಬಹುದು, ಆದರೆ ನಮ್ಮ ಪಡೆಗಳು ಗಡಿಯಲ್ಲಿ ಮತ್ತೆ ಡೊಕ್ಲಾಮ್‌ನಂತೆ ಬೇರೆ  ಕಡೆಯಲ್ಲಿ ನಡೆಯುವುದಿಲ್ಲ ಎಂದು ಸುಮ್ಮನಿರಬಾರದು. ಗಡಿಯಲ್ಲಿ ಸರ್ವ ಸನ್ನದ್ಧವಾಗಿರುವುದು ಸದ್ಯ ಅಗತ್ಯವಾಗಿದೆ. ನಿಮ್ಮ ಕಾವಲನ್ನು ಯಾವುದೇ ಕಾರಣಕ್ಕೂ ಸಡಿಲ ಮಾಡಬೇಡಿ  ಎನ್ನುವುದು ನಾನು ಸೇನೆಗೆ ನೀಡುವ ಸಂದೇಶ’ ಎಂದರು. 

ಡೋಕ್ಲಾಂ ವಿವಾದ ಜೀವಂತವಾಗಿರುವ ಹಿನ್ನೆಲೆಯಲ್ಲಿ ಚೀನ ಭಾರತದ ವಿರುದ್ಧ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಗಡಿಯ ವಿವಿಧ ಭಾಗಗಳಲ್ಲಿ ಒಳನುಗ್ಗುವ, ಪ್ರದೇಶಗಳನ್ನು ವಶಪಡಿಸಿಕೊಳ್ಳುವ ಯತ್ನಗಳನ್ನು ಮಾಡುವ ಸಾಧ್ಯತೆ ಇದೆ ಎಂದು ಈಗಾಗಲೆ ಗುಪ್ತಚರ ಇಲಾಖೆಗಳು ಎಚ್ಚರಿಕೆ ನೀಡಿವೆ. ಇತ್ತೀಚೆಗೆ ಲಡಾಖ್‌ನ ಪೆನುಗಾಂಗ್‌ ಸರೋವರ ಪ್ರದೇಶ ದಲ್ಲೂ ಚೀನ ಇಂತಹುದೇ ಯತ್ನ ನಡೆಸಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next