Advertisement

Gold ಸ್ವಲ್ಪದರಲ್ಲೇ ತಪ್ಪಿತು ; ಮುಂದಿನ ಸಲ ಚಿನ್ನದ ಗುರಿ: ನೀರಜ್‌ ಚೋಪ್ರಾ

12:30 AM May 12, 2024 | Team Udayavani |

ದೋಹಾ: ಈ ಸೀಸನ್‌ನ ಮೊದಲ ಡೈಮಂಡ್‌ ಲೀಗ್‌ನಲ್ಲಿ ಸ್ವಲ್ಪದ ರಲ್ಲೇ ಬಂಗಾರದ ಪದಕ ತಪ್ಪಿಸಿಕೊಂಡ ಒಲಿಂಪಿಕ್‌ ಚಾಂಪಿಯನ್‌ ಜಾವೆಲಿನ್‌ ತ್ರೋವರ್‌ ನೀರಜ್‌ ಚೋಪ್ರಾ, ಮುಂದಿನ ಲೀಗ್‌ನಲ್ಲಿ ಚಿನ್ನ ಗೆಲ್ಲುವ ಭರವಸೆ ವ್ಯಕ್ತಪಡಿಸಿದ್ದಾರೆ.

Advertisement

ಶುಕ್ರವಾರ ರಾತ್ರಿ ದೋಹಾದಲ್ಲಿ ನಡೆದ ಡೈಮಂಡ್‌ ಲೀಗ್‌ ಸ್ಪರ್ಧೆಯ ಕೊನೆಯ ಸುತ್ತಿನಲ್ಲಿ 88.36 ಮೀ. ಸಾಧನೆಯೊಂದಿಗೆ ನೀರಜ್‌ ಚೋಪ್ರಾ ದ್ವಿತೀಯ ಸ್ಥಾನಿಯಾದರು. ಇವರಿಗಿಂತ ಬರೀ 2 ಸೆಂ.ಮೀ. ದೂರದ ಸಾಧನೆಗೈದ ಜೆಕ್‌ ಗಣರಾಜ್ಯದ ಜಾಕುಬ್‌ ವಾಲೆªಶ್‌ ಬಂಗಾರ ಗೆದ್ದರು (88.38 ಮೀ.).

“ನನ್ನ ಪಾಲಿನ ಈ ಬಾರಿಯ ದೊಡ್ಡ ಹಾಗೂ ಮುಖ್ಯ ಸ್ಪರ್ಧೆಯೆಂದರೆ ಪ್ಯಾರಿಸ್‌ ಒಲಿಂಪಿಕ್ಸ್‌. ಡೈಮಂಡ್‌ ಲೀಗ್‌ ಕೂಡ ಪ್ರಮುಖವಾದುದೇ. ಇದು ಪ್ರಸಕ್ತ ಸೀಸನ್‌ನ ಮೊದಲ ಸ್ಪರ್ಧೆ ಆಗಿತ್ತು. ಸ್ವಲ್ಲದರಲ್ಲೇ ಪ್ರಥಮ ಸ್ಥಾನ ತಪ್ಪಿತು. ಮುಂದಿನ ಸಲ ಖಂಡಿತ ಚಿನ್ನ ಗೆಲ್ಲುವ ನಂಬಿಕೆ ಇದೆ’ ಎಂಬುದಾಗಿ ನೀರಜ್‌ ಚೋಪ್ರಾ ಹೇಳಿದರು.
“ಕತಾರ್‌ನಲ್ಲಿ ಭಾರತೀಯರು ನೀಡಿದ ಪ್ರೋತ್ಸಾಹವನ್ನು ಎಂದೂ ಮರೆಯಲಾರೆ. ಇವರಿಗೆ ಕೃತಜ್ಞತೆ ಸಲ್ಲಿಸಲು ನನ್ನಲ್ಲಿ ಪದಗಳಿಲ್ಲ’ ಎಂದರು.

ಮುಂದಿನ ಡೈಮಂಡ್‌ ಲೀಗ್‌ ಸ್ಪರ್ಧೆ ಜುಲೈ 7ರಂದು ಪ್ಯಾರಿಸ್‌ನಲ್ಲಿ ನಡೆಯಲಿದೆ. ಅಗ್ರ 6 ಮಂದಿ ಸ್ಪರ್ಧಿಗಳು ಡೈಮಂಡ್‌ ಲೀಗ್‌ ಫೈನಲ್‌ನಲ್ಲಿ ಸ್ಪರ್ಧಿಸಲಿದ್ದಾರೆ. ಇದು ಸೆ. 13 ಮತ್ತು 14ರಂದು ಬ್ರುಸೆಲ್ಸ್‌ನಲ್ಲಿ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next