Advertisement

ಪಟ್ಟಣದಲ್ಲಿ ನಾಯಿಗಳ ಹಾವಳಿ; ನಲುಗಿದ ಜನ

12:46 PM Nov 05, 2021 | Team Udayavani |

ಗುಡಿಬಂಡೆ: ಇತ್ತೀಚಿಗೆ ಶಿಡ್ಲಘಟ್ಟ ನಗರದಲ್ಲಿ ಬೀದಿ ನಾಯಿ ದಾಳಿಗೆ ಓರ್ವ ವಿದ್ಯಾರ್ಥಿ ಮೃತಪಟ್ಟಿದ್ದ ಘಟನೆ ನಡೆದ ಬೆನ್ನಲ್ಲೇ, ಪಟ್ಟಣದಲ್ಲಿ ಬೀದಿ ನಾಯಿ ಗಳ ಹಾವಳಿಗೆ ಹಲವು ಮಂದಿ ಗಾಯ ಗೊಂಡು ಆಸ್ಪತ್ರೆ ಸೇರು ವಂತಾಗಿದೆ. ವಾಹನ ಸವಾರರು, ಮಹಿಳೆಯರು, ವೃದ್ಧರು, ಮಕ್ಕಳು ತಮ್ಮ ಪ್ರಾಣವನ್ನು ಕೈಯಲ್ಲಿ ಹಿಡಿದುಕೊಂಡು ಓಡಾಡುವ ಪರಿಸ್ಥಿತಿ ಒದಗಿ ಬಂದಿದೆ.

Advertisement

ಪಟ್ಟಣದ ಗುಂಪು ಗುಂಪಾಗಿ ಗಲ್ಲಿ ಗಲ್ಲಿಗಳಲ್ಲಿ ತಿರುಗಾಡುತ್ತಿರುವ ಬೀದಿ ನಾಯಿಗಳು ವಾಹನಗಳು ಬಂದರೆ ಸಾಕು ಸವಾರನ ಮೇಲೆ ದಾಳಿ ಮಾಡುತ್ತವೆ, ಕೆಲ ನಾಯಿಗಳು ಬೈಕ್‌, ಕಾರುಗಳ ಹಿಂದೆ ಕಿ.ಮೀ. ಗಟ್ಟಲೆ ಓಡಿ ಹೋಗುತ್ತವೆ. ಈ ವೇಳೆ ಕೆಲ ವಾಹನ ಸವಾರರು ಭಯಬಿದ್ದು ವಾಹನ ಸ್ಕಿಡ್‌ ಆಗಿ ಅಪಘಾತಕ್ಕೆ ಒಳಗಾದ ಘಟನೆಗಳು ನಡೆದಿವೆ. ನಿದ್ದೆ ಮಾಡಲು ಆಗುತ್ತಿಲ್ಲ: ರಸ್ತೆಯಲ್ಲಿ ಚಿಕ್ಕ ಮಕ್ಕಳು, ವೃದ್ಧರು ಒಬ್ಬಬ್ಬರೋ ತಿರುಗಾಡುವಂತೆಯೇ ಇಲ್ಲ.

ಇದನ್ನೂ ಓದಿ:- ಗೋವಾದ 113 ವರ್ಷದ ಹಿರಿಯಜ್ಜಿ ಇನ್ನಿಲ್ಲ

ಸಂಚಾರ ಮಾಡಲು ಹಿಂದೇಟು ಹಾಕುವಂತಾಗಿದೆ. ರಾತ್ರಿ ವೇಳೆ ಕೆಲ ಕಾಲೋನಿಗಳಲ್ಲಿ ಬೀದಿ ನಾಯಿಗಳು ಬೊಗಳುವುದು, ಕರ್ಕಶ ಧ್ವನಿಯಲ್ಲಿ ಕೂಗುವುದು, ಗುಂಪಾಗಿ ಕಿತ್ತಾಡುವುದು ಮಾಡುತ್ತವೆ. ಇದರಿಂದ ರೋಗಿಗಳು, ವಯಸ್ಸಾದವರು ನೆಮ್ಮದಿಯಾಗಿ ನೆದ್ದೆ ಮಾಡಲು ಆಗುವುದಿಲ್ಲ. ಬೀದಿನಾಯಿಗಳು ಉಪಟಳ ತಾಳದೇ ಜನ ಪರದಾಡುವಂತಾಗಿದೆ. ಒಂದೇ ದಿನ ಐದು ಜನರಿಗೆ ಕಚ್ಚಿದ ನಾಯಿ: ಪಟ್ಟಣ ದಲ್ಲಿ ಹೆಚ್ಚಾಗಿರುವ ನಾಯಿಗಳ ಹಾವಳಿಯಿಂದ ಗುರುವಾರ ಪಟ್ಟಣದಲ್ಲಿ ವಿವಿಧ ಕಡೆಯಲ್ಲಿ ಐದು ಜನರಿಗೆ ಕಚ್ಚಿ ಆಸ್ಪತ್ರೆಗೆ ಸೇರಿಸಿವೆ.

ಮಕ್ಕಳು, ಮಹಿಳೆಯರು, ವೃದ್ಧರು ಎನ್ನದೇ ಮನಬಂದಂತೆ ನಾಯಿಗಳು ದಾಳಿ ಮಾಡುತ್ತಿವೆ. ಹಿಡಿಶಾಪ: ಬೀದಿ ನಾಯಿಗಳ ಹಾವಳಿ ತಪ್ಪಿಸುವಂತೆ ಪಟ್ಟಣ ಪಂಚಾಯಿತಿ ಅ ಕಾರಿಗಳಿಗೆ ಸ್ಥಳೀಯರು ಮನವಿ ಸಲ್ಲಿಸಿದ್ದರೂ ಅಧಿ ಕಾರಿಗಳು ಯಾವುದೇ ಕ್ರಮ ಕೈಗೊಳ್ಳದ ಪರಿಣಾಮ ಸಾರ್ವಜನರು ಹಿಡಿಶಾಪ ಹಾಕುತ್ತಿದ್ದಾರೆ. ಮಕ್ಕಳನ್ನು ಶಾಲೆಗೆ ಬಿಟ್ಟು ಬರಲು ಮಹಿಳೆಯರು ಹೆದರುವಂತಾಗಿದೆ.

Advertisement

ಬೀದಿ ನಾಯಿ ಹೆಚ್ಚಿರುವ ವಾರ್ಡ್‌: ಪಟ್ಟಣದ ಅಂಬೇಡ್ಕರ್‌ ನಗರ, ನಾಯಕರ ಕಾಲೋನಿ, ಒಂದನೇ ವಾರ್ಡ್‌, ಬಸ್‌ ನಿಲ್ದಾಣ, ಇತರೆ ರಸ್ತೆಯಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಹಿಂಡು ಹಿಂಡಾಗಿ ಓಡಾಡುವ ನಾಯಿಗಳು, ಮಕ್ಕಳು, ದೊಡ್ಡವರು ಕೈಯಲ್ಲಿ ತಿಂಡಿಗಳನ್ನು ಹಿಡಿದುಕೊಂಡು ಹೋದರೆ ಸಾಕು ಕಿತ್ತುಕೊಂಡು ಹೋಗುತ್ತವೆ. ನಾಯಿಗಳ ಹಾವಳಿ ತಡೆಯಲು ಕೆಲ ವರ್ಷಗಳ ಹಿಂದೆ ಪಟ್ಟಣ ಪಂಚಾಯಿತಿ ಅಧಿಕಾರಿಗಳು ವಿಷ ಹಾಕಿ ನಾಯಿಗಳನ್ನು ಕೊಂದಿತ್ತು, ಇದರಿಂದ ಕೆಲ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದವು.

ಆದ್ದರಿಂದ ಅಧಿಕಾರಿಗಳ ಬೀದಿ ನಾಯಿಗಳ ನಿಯಂತ್ರ ಣಕ್ಕೆ ಹೋಗುವುದನ್ನು ಕೈಬಿಟ್ಟಿತ್ತು, ಅಲ್ಲಿಂದ ಇಲ್ಲಿಯವರೆಗೆ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಸಂತಾನ ತಡೆ ಚಿಕಿತ್ಸೆ ಮಾಡುವುದರಿಂದ ಬೀದಿ ನಾಯಿಗಳ ಹಾವಳಿ ನಿಯಂತ್ರಣ ಮಾಡಬಹುದು. ಆದರೆ, ಈ ಕಾರ್ಯಕ್ಕೆ ಪಟ್ಟಣ ಪಂಚಾಯಿತಿ ಮುಂದಾಗುತ್ತಿಲ್ಲ. ಇದರಿಂದಾಗಿ ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next