Advertisement

ಕೇದಾರ ಘಾಟ್ ನದಿ ತೀರದಲ್ಲಿ ಕೋವಿಡ್ ಸಂತ್ರಸ್ತರ ಶವ ತಿನ್ನುತ್ತಿರುವ ನಾಯಿಗಳು; ವಿಡಿಯೋ ವೈರಲ್

03:14 PM Jun 01, 2021 | Team Udayavani |

ನವದೆಹಲಿ: ಉತ್ತರಾಖಂಡದ ಉತ್ತರಕಾಶಿಯ ಕೇದಾರ್ ಘಾಟ್ ನದಿ ತೀರದ ಪ್ರದೇಶದಲ್ಲಿ ಶಂಕಿತ ಕೋವಿಡ್ 19 ಸಂತ್ರಸ್ತರ ಶವಗಳನ್ನು ನಾಯಿಗಳು ತಿನ್ನುತ್ತಿರುವ ಆಘಾತಕಾರಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವುದಾಗಿ ವರದಿ ತಿಳಿಸಿದೆ.

Advertisement

ಇದನ್ನೂ ಓದಿ:ನಾಯಕತ್ವ ಬದಲಾವಣೆ ಬಗ್ಗೆ ಚರ್ಚೆ ಮಾಡಿದವರನ್ನು ಸಂಪುಟದಿಂದ ವಜಾ ಮಾಡಿ : ರೇಣುಕಾಚಾರ್ಯ

ಈ ಅನಾಥ ಶವಗಳನ್ನು ಸಮರ್ಪಕವಾಗಿ ವಿಲೇವಾರಿ ಮಾಡಲು ಸೂಕ್ತ ವ್ಯವಸ್ಥೆ ಮಾಡುವಂತೆ ಜಿಲ್ಲೆಯ ಅಧಿಕಾರಿಗಳಲ್ಲಿ ಸ್ಥಳೀಯ ನಿವಾಸಿಗಳು ಮನವಿ ಮಾಡಿಕೊಂಡಿದ್ದು, ಗಂಗಾನದಿಯ ಉಪನದಿಗಳಲ್ಲಿ ಮೃತದೇಹಗಳನ್ನು ಎಸೆದಿರುವ ಸಾಧ್ಯತೆ ಇದ್ದಿರುವುದಾಗಿ ತಿಳಿಸಿದ್ದಾರೆ.

ಕಳೆದ ಕೆಲವು ದಿನಗಳ ಕಾಲ ಭಾರೀ ಮಳೆಯಾದ ನಂತರ ನದಿ ತೀರದ ಮರಳಿನಲ್ಲಿ ಸಿಲುಕಿಕೊಂಡಿದ್ದ ಶವಗಳು ದಡಕ್ಕೆ ಬಂದು ಬಿದ್ದ ಪರಿಣಾಮ ವಾಸನೆಯಿಂದ ಆಕರ್ಷಿತವಾದ ನಾಯಿಗಳು ದೇಹಗಳನ್ನು ತಿನ್ನಲು ಆರಂಭಿಸಿವೆ ಎಂದು ಸ್ಥಳೀಯರು ಈ ಸಂದರ್ಭದಲ್ಲಿ ದೂರಿದ್ದಾರೆ.

Advertisement

ಇತ್ತೀಚೆಗೆ ಉತ್ತರಪ್ರದೇಶ ಮತ್ತು ಬಿಹಾರದ ನದಿಗಳಲ್ಲಿ ನೂರಾರು ಕೋವಿಡ್ ಸಂತ್ರಸ್ತರ ಶವಗಳು ತೇಲಿ ಬಂದಿತ್ತು. ಶವ ಸಂಸ್ಕಾರದ ಸ್ಥಳದ ಕೊರತೆ ಭಯ, ಕಟ್ಟಿಗೆ, ಅಂತ್ಯಕ್ರಿಯೆ ವೆಚ್ಚಗಳ ಕಾರಣದಿಂದಾಗಿ ಕೋವಿಡ್ ನಿಂದ ಸಾವನ್ನಪ್ಪಿದವರ ಶವಗಳನ್ನು ಸಂಬಂಧಿಕರು ನದಿಗೆ ಎಸೆದಿರಬಹುದು ಎಂದು ಶಂಕಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next