ಚನ್ನಪಟ್ಟಣ: ದೇವರಿಗೆ ಗುಡಿ ಕಟ್ಟಿ ಪೂಜೆ ಮಾಡೋದು ಸರ್ವೆ ಸಾಮಾನ್ಯ. ಆದರೆ, ನಂಬಿಕಸ್ಥ ಶ್ವಾನಗಳಿಗೆ ಗುಡಿ ಕಟ್ಟಿಸಿ ಪೂಜೆ ಸಲ್ಲಿಸುವುದು ವಿಶೇಷದಲ್ಲಿ ವಿಶೇಷ.
ಹೌದು.. ಬೊಂಬೆನಗರಿ ಚನ್ನಪಟ್ಟಣ ತಾಲೂಕಿನ ಅಗ್ರಹಾರ ವಳಗೆರೆಹಳ್ಳಿ ಅರ್ಥಾತ್ ಎ.ವಿ.ಹಳ್ಳಿ ಗ್ರಾಮ ದಲ್ಲಿ ದೇವರಿಗೂ ನಾಯಿಗಳಿಗೆ ವಿಶೇಷ ಮೊದಲ ಪೂಜೆ ಮಾಡಲಾಗುತ್ತದೆ. ರಾಜ್ಯದಲ್ಲೂ ಎಲ್ಲೂ ಇಲ್ಲದ ಶ್ವಾನ ದೇಗುಲ ಇಲ್ಲಿದೆ. ಹಾಗೆಯೇ ಈ ಗ್ರಾಮ ದಲ್ಲಿ ದೇವರ ಮೊರೆ ಹೋದರೆ ಇಷ್ಟಾರ್ಥ ಮೊದಲು ಈಡೇರುತ್ತೆ ಎಂಬ ನಂಬಿಕೆ ಕೂಡಯಿದೆ. ಅದರಂತೆ ವರ್ಷಕ್ಕೊಮ್ಮೆ ಈ ಗ್ರಾಮ ದಲ್ಲಿ ನಡೆಯಲಿರುವ ಜಾತ್ರಾ ಮಹೋತ್ಸವಕ್ಕೆ ರಾಜ್ಯದ ವಿವಿಧೆಡೆಯಿಂದ ಸಾವಿರಾರು ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಬರುವ ಭಕ್ತರು ಮೊದಲಿಗೆ ಶ್ವಾನಕ್ಕೆ ನಮಸ್ಕಾರ ಮಾಡಿದ ನಂತರವೇ ಗ್ರಾಮದ ಅಗ್ರದೇವತೆ ವೀರಮಾಸ್ತಿ ಕೆಂಪಮ್ಮ ದೇವರ ದರ್ಶನ ಪಡೆಯುತ್ತಾರೆ. ನಿಯತ್ತಿಗೆ ಮತ್ತೂಂದು ಹೆಸರೇ ಆಗಿರುವ ನಾಯಿ ಗಳಿಗೂ ಈ ಗ್ರಾಮದಲ್ಲಿ ವಿಶೇಷ ಪ್ರಾಧಾನ್ಯತೆ ಸಿಕ್ಕಿರು ವುದು ಮಾದರಿಯಾಗಿದೆ. ಆಗಸ್ಟ್ ಮಧ್ಯ ಮಾಸದಲ್ಲಿ ಆರಂಭವಾಗುವ ಮಕ್ಕೆ ಮಳೆ ಮಧ್ಯ ಪಾದದಲ್ಲಿ ಎ.ವಿ.ಹಳ್ಳಿ ಗ್ರಾಮ ದಲ್ಲಿ ಶ್ವಾನ ದೇವಸ್ಥಾನ ಹಾಗೂ ವೀರಮಾಸ್ತಿ ಕೆಂಪಮ್ಮ ದೇವಿ ಜಾತ್ರಾ ಮಹೋತ್ಸವ ನಡೆಯುತ್ತದೆ. ಈ ಸಾವಿರಾರು ಭಕ್ತರು ರಾಜ್ಯದ ವಿವಿಧ ಮೂಲೆಗಳಿಂದ ಆಗಮಿಸುತ್ತಾರೆ.
ಹಿನ್ನೆಲೆ ಏನು?: ಎ.ವಿ ಹಳ್ಳಿ ಗ್ರಾಮದಲ್ಲಿರುವ ಕೃತಜ್ಞತಾ ಮನೋಭಾವದ ನಾಯಿಗೊಸ್ಕರವೇ ಕಟ್ಟಿರುವ ವಿಶೇಷ ದೇವಸ್ಥಾನ. ನಾಯಿಗಳಿಗಾಗಿಯೇ ಇಲ್ಲಿಯ ಗ್ರಾಮ ಸ್ಥರು ಗುಡಿಯೊಂದನ್ನು ಕಟ್ಟಿಸಿ ಪ್ರತಿದಿನ ವಿಶೇಷ ಪೂಜೆ ನೆರವೇರಿಸಿಕೊಂಡು ಬರುತ್ತಿದ್ದಾರೆ. ಈ ಹಿಂದೆ ಕುರಿಗಳ ರಕ್ಷಣೆಗೆ ಕುರುಬರು ನಾಯಿಗಳನ್ನ ಕರೆದು ಕೊಂಡು ಬರುತ್ತಿದ್ದರು. ಈಗಲೂ ಕೂಡ ಕೆಲ ಗ್ರಾಮೀಣ ಪ್ರದೇಶ ಗಳಲ್ಲಿ ಕಾಣಬಹುದಾಗಿದೆ. ಅದರಂತೆ ಈ ಗ್ರಾಮಕ್ಕೂ ಬಹಳ ವರ್ಷಗಳ ಹಿಂದೆ ಬರಲಾಯಿತು. ಹೀಗೆ ಮಂದೆ ಕುರಿ ಸಾಕಾಣಿಕೆ ವೇಳೆ ಈ ಗ್ರಾಮದಲ್ಲಿ ಬೀಡುಬಿಟ್ಟ ನಾಯಿ ಗಳೆಲ್ಲ ಆಶ್ಚರ್ಯಕರ ರೀತಿಯಲ್ಲಿ ಕಾಣೆಯಾಗು ತ್ತಿದ್ದವು. ನಾಯಿಗಳು ಕಾಣೆಯಾಗು ತ್ತಿರುವುದರ ರಹಸ್ಯ ಬೆನ್ನಟ್ಟಿದ ಇಲ್ಲಿಯ ಶಕ್ತಿ ದೇವತೆ ವೀರಮಾಸ್ತಿ ಕೆಂಪಮ್ಮ ದೇವರ ಮೊರೆ ಹೋದರು. ಈ ವೇಳೆ ದೇವರು ಹೇಳಿ ದಂತೆ ಕಾಡಿ ನಲ್ಲಿರುವ ನನ್ನ ದೇಗುಲಕ್ಕೆ ದ್ವಾರ ಪಾಲಕರ ಅವಶ್ಯಕತೆ ಇದೆ. ಆದ್ದರಿಂದ ನನ್ನ ದೇಗುಲದ ಸಮೀಪ ದಲ್ಲಿ ನಾಯಿ ಗಳಿಗಾಗಿ ಗುಡಿ ಕಟ್ಟಿಸುವಂತೆ ದೇವತೆ ಆಜ್ಞೆ ಮಾಡಿ ದ್ದಳಂತೆ. ಹೀಗಾಗಿ ನಾಯಿಗಳ ಶ್ವಾನ ವಿಗ್ರಹ ಮಾಡಿ ಅಲ್ಲಿಯೇ ಗುಡಿ ಕಟ್ಟಿಸಿ ನಿತ್ಯ ದೇವರು ಮುನ್ನ ಈ ಶ್ವಾನಗಳಿಗೆ ಪೂಜೆ ಸಲ್ಲಿಸಿದ ನಂತರವೇ ಇತರ ದೇವರಿಗೆ ಪೂಜೆ ಮಾಡಲಾಗುತ್ತಿದೆ.
ರಾಜ್ಯದ ವಿವಿಧೆಡೆಯಿಂದ ಸಾವಿರಾರು ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಬರುವ ಭಕ್ತರು ಮೊದಲಿಗೆ ಶ್ವಾನಕ್ಕೆ ನಮಸ್ಕಾರ ಮಾಡಿದ ನಂತರವೇ ವೀರಮಾಸ್ತಿ ಕೆಂಪಮ್ಮ ದೇವರ ದರ್ಶನ ಪಡೆಯುತ್ತಾರೆ. ನಮ್ಮೂರಿನಲ್ಲಿ ಶ್ವಾನ ದೇವರಂತೆಯೇ ಪರಿಗಣಿಸಿ ವಿಶೇಷ ಸ್ಥಾನ ನೀಡಿರುವುದು ನಂಬಿಕೆಗೆ ಮತ್ತೂಂದು ಹೆಸರು ಎಂದು ಕೆರಯಲ್ಪಡುವ ಶ್ವಾನಕ್ಕೆ ಕೊಟ್ಟ ಪ್ರಾಧಾನ್ಯತೆ ತೋರುತ್ತದೆ.
-ಶಿವರಾಜು, ಎ.ವಿ.ಹಳ್ಳಿ ಡೇರಿ ಮುಖ್ಯ ಕಾರ್ಯವಾಹಕ
ಆಗಸ್ಟ್ ಮಧ್ಯ ಮಾಸದಲ್ಲಿ ಆರಂಭವಾಗುವ ಮಕ್ಕೆ ಮಳೆಯ ಮಧ್ಯ ಪಾದದಲ್ಲಿ ಎ.ವಿ.ಹಳ್ಳಿ \ ಗ್ರಾಮದಲ್ಲಿ ಶ್ವಾನ ದೇವಸ್ಥಾನ ಹಾಗೂ ವೀರಮಾಸ್ತಿ ಕೆಂಪಮ್ಮ ದೇವಿ ಜಾತ್ರಾ ಮಹೋತ್ಸವ ನಡೆಯುತ್ತದೆ. ಈ ಸಂದರ್ಭದಲ್ಲಿ ಸಾವಿರಾರು ಭಕ್ತರು ರಾಜ್ಯದ ವಿವಿದ ಮೂಲೆಗಳಿಂದ ಆಗಮಿಸುತ್ತಾರೆ.
-ಶ್ರೀನಿವಾಸ್, ಅರ್ಚಕರು, ಶ್ವಾನ ದೇವಸ್ಥಾನ, ಎ.ವಿ.ಹಳ್ಳಿ