Advertisement

ನಾಯಿ ಹೊಟ್ಟೆಯಿಂದ ಹತ್ತು ಕ್ಯಾನ್ಸರ್‌ ಗಡ್ಡೆ ತೆಗೆದ ವೈದ್ಯರು

12:10 PM Jan 08, 2021 | Team Udayavani |

ಧಾರವಾಡ: ಇಲ್ಲಿನ ಕೃಷಿ ವಿಶ್ವವಿದ್ಯಾಲಯದ ಪಶು ಚಿಕಿತ್ಸಾ ವಿಭಾಗದ ವೈದ್ಯ ಡಾ|ಅನಿಲಕುಮಾರ ಪಾಟೀಲ ಮತ್ತು ತಂಡವು ಕ್ಯಾನ್ಸರ್‌ನಿಂದ ಬಳಲುತ್ತಿದ್ದ ನಾಯಿಯೊಂದಕ್ಕೆ ವಿಶೇಷ ಚಿಕಿತ್ಸೆ ಮಾಡಿ ಅದರ ಹೊಟ್ಟೆಯೊಳಗಿನ ಹತ್ತು ಕ್ಯಾನ್ಸರ್‌ ಗಡ್ಡೆಗಳನ್ನು ಹೊರ ತೆಗೆದಿದ್ದಾರೆ.

Advertisement

ಹುಬ್ಬಳ್ಳಿ ಮೂಲದ ವ್ಯಕ್ತಿಯೊಬ್ಬರಿಗೆ ಸೇರಿದ ಲಾಬೋಡಾರ್‌ ಎಂಬ ನಾಯಿಯೇ ಈ ವಿಶೇಷ ಚಿಕಿತ್ಸೆಗೆ ಒಳಗಾಗಿದ್ದು, ಈ ನಾಯಿಗೆ ಅಬ್ದೋಮಿನಲ್‌ ಟ್ಯೂಮರ್‌ (ಕ್ಯಾನ್ಸರ್‌ ಗಡ್ಡೆ) ಕಾಯಿಲೆಗೆ ತುತ್ತಾಗಿತ್ತು. ಇದೇ ನಾಯಿಗೆ ಒಂದೂವರೆ ವರ್ಷ ಇದ್ದಾಗಲೂ ಸಹ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ನಾಯಿ ಹತ್ತು ದಿನಗಳಿಂದ ಯಾವುದೇ ಆಹಾರ ಸೇವಿಸದೇ ಒದ್ದಾಡುತ್ತಿತ್ತು. ಏನೇ ತಿಂದರೂ ವಾಂತಿ
ಮಾಡಿಕೊಳ್ಳುತ್ತಿತ್ತು. ಈ ಹಿನ್ನೆಲೆಯಲ್ಲಿ ನಾಯಿಯನ್ನು ಡಾ|ಅನಿಲಕುಮಾರರ ಬಳಿ ತರಲಾಗಿತ್ತು. ಗುರುವಾರ ಬೆಳಿಗ್ಗೆ ನಾಯಿಯ ಆರೋಗ್ಯ ತೀವ್ರ ಹದಗೆಟ್ಟ ಹಿನ್ನೆಲೆಯಲ್ಲಿ ಪಶು ವೈದ್ಯಕೀಯ ಚಿಕಿತ್ಸಾಲಯಕ್ಕೆ ತರಲಾಗಿತ್ತು. ಈ ವೇಳೆ ಸೋನೋಗ್ರಾಫಿ ಮಾಡಿ ನೋಡಿದಾಗ ಹೊಟ್ಟೆಯೊಳಗೆ ಗಂಟುಗಳಿರುವುದು ಪತ್ತೆಯಾಗಿದ್ದವು. ಆಗ ಆಸ್ಪತ್ರೆಯಲ್ಲಿದ್ದ ಉಪಕರಣಗಳಲ್ಲೇ ಡಾ| ಅನೀಲ ಕುಮಾರ್‌ ಪಾಟೀಲ ನೇತೃತ್ವದ ತಂಡವು ಸತತ ಮೂರು ಗಂಟೆಗಳ ಕಾಲ ತುರ್ತು ಶಸ್ತ್ರಚಿಕಿತ್ಸೆ ಮಾಡಿದೆ. ಕಾರಣ ನಾಯಿಗಳ ಹೊಟ್ಟೆಯಲ್ಲಿ ಈ ರೀತಿ ಗಡ್ಡೆಗಳು ಬೆಳೆಯುವುದು ಸಾಮಾನ್ಯವಾದರೂ 10 ಗಡ್ಡೆಗಳು ಬೆಳೆಯುವುದು ಅಪರೂಪ.

ಇದನ್ನೂ ಓದಿ:ಮೂರು ಕೃಷಿ ಕಾಯ್ದೆ ರದ್ದುಪಡಿಸುವ ಪ್ರಶ್ನೆಯೇ ಇಲ್ಲ: ರೈತರ ಜತೆಗಿನ ಮಾತುಕತೆಗೆ ಮುನ್ನ ಕೇಂದ್ರ

Advertisement

Udayavani is now on Telegram. Click here to join our channel and stay updated with the latest news.

Next