Advertisement

ದೇಶದ ಬಗ್ಗೆ ಕಾಳಜಿ ಹೊಂದದ ಜನರಿಂದ ಏನನ್ನೂ ನಿರೀಕ್ಷಿಸಬೇಡಿ: ವಿಪಕ್ಷಗಳ ವಿರುದ್ಧ ಪ್ರಧಾನಿ

05:00 PM Aug 19, 2022 | Team Udayavani |

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ (ಆಗಸ್ಟ್ 19) ಪಣಜಿಯಲ್ಲಿನ ಹರ್ ಘರ್ ಜಲ್ ಉತ್ಸವ ವರ್ಚುವಲ್ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ವೇಳೆ ವಿರೋಧ ಪಕ್ಷಗಳ ವಿರುದ್ಧ ಕಿಡಿಕಾರಿದ್ದು, ದೇಶದ ಬಗ್ಗೆ ಕಾಳಜಿ ಹೊಂದದ ಜನರು, ರಾಷ್ಟ್ರ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಅಸಡ್ಡೆ ಹೊಂದಿರುತ್ತಾರೆ ಎಂದು ಟೀಕಿಸಿದರು.

Advertisement

ಇದನ್ನೂ ಓದಿ:ಬಾಂಗ್ಲಾದೇಶದ ಟಿ 20 ತಂಡಕ್ಕೆ ಕೋಚ್ ಆಗಿ ಭಾರತದ ಶ್ರೀಧರನ್ ಶ್ರೀರಾಮ್

ಈ ಸಂದರ್ಭದಲ್ಲಿ ತಮ್ಮ ಎನ್ ಡಿಎ ಸರ್ಕಾರ ಕಳೆದ 8 ವರ್ಷಗಳಲ್ಲಿನ ಸಾಧನೆ ಬಗ್ಗೆ ವಿವರಿಸುತ್ತಾ, ಜಲ್ ಜೀವನ್ ಮಿಷನ್ ಯೋಜನೆಯಡಿ ಕಳೆದ ಮೂರು ವರ್ಷಗಳಲ್ಲಿ ನಮ್ಮ ಸರ್ಕಾರ ಗ್ರಾಮೀಣ ಪ್ರದೇಶದ ಏಳು ಕೋಟಿ ಕುಟುಂಬಗಳಿಗೆ ಕೊಳವೆ ನೀರಿನ ಸಂಪರ್ಕವನ್ನು ಒದಗಿಸಿದೆ. ಇದರಿಂದಾಗಿ ಈವರೆಗೆ ಹಳ್ಳಿಗಳಲ್ಲಿ ಹತ್ತು ಕೋಟಿ ಕೊಳವೆ ನೀರಿನ ಸಂಪರ್ಕ ನೀಡಲು ಸಾಧ್ಯವಾಗಿದ್ದು, ಇದೊಂದು ಮೈಲಿಗಲ್ಲಾಗಿದೆ ಎಂದು ಪ್ರಧಾನಿ ಹೇಳಿದರು.

ಒಂದು ಸರ್ಕಾರ ರಚಿಸಲು ಇಷ್ಟೊಂದು ಶ್ರಮದ ಅಗತ್ಯವಿಲ್ಲ, ಆದರೆ ದೇಶವನ್ನು ಕಟ್ಟಲು ಕಠಿಣ ಶ್ರಮದ ಅಗತ್ಯವಿದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದು, ನಾವು (ಬಿಜೆಪಿ ಸರ್ಕಾರ) ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವ ಮಾರ್ಗವನ್ನು ಆಯ್ಕೆ ಮಾಡಿಕೊಂಡಿದ್ದೇವೆ. ಈ ನಿಟ್ಟಿನಲ್ಲಿ ನಾವು ದೇಶದ ಪ್ರಸ್ತುತ ಮತ್ತು ಭವಿಷ್ಯದ ಸಮಸ್ಯೆಗಳನ್ನು ಪರಿಹರಿಸುವ ಕೆಲಸವನ್ನು ಮುಂದುವರಿಸುತ್ತಿದ್ದೇವೆ ಎಂದರು.

ಈ ವೇಳೆ ವಿರೋಧ ಪಕ್ಷದ ವಿರುದ್ಧ ವಾಗ್ದಾಳಿ ಮುಂದುವರಿಸಿದ ಪ್ರಧಾನಿ ಮೋದಿ, ದೇಶದ ಜನರ ಬಗ್ಗೆ ಕಾಳಜಿ ಹೊಂದದವರು, ಇಂತಹ ಸಮಸ್ಯೆಗಳ ಬಗ್ಗೆ ಯಾವುದೇ ಕಾಳಜಿ ಅಥವಾ ಆಸಕ್ತಿ ತೋರಿಸುವುದಿಲ್ಲ. ಅವರು ಉಚಿತ ನೀರು ಕೊಡುತ್ತೇವೆ ಎಂಬ ದೊಡ್ಡ ಭರವಸೆ ನೀಡಬಹುದು, ಆದರೆ ಅವರು ದೇಶದ ದೂರದೃಷ್ಟಿಯೊಂದಿಗೆ ಎಂದಿಗೂ ಕಾರ್ಯನಿರ್ವಹಿಸುವುದಿಲ್ಲ ಎಂದು ದೂರಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next