Advertisement

ಕೇಂದ್ರದ ತಾರತಮ್ಯ ಸಹಿಸಲ್ಲ: ಸತೀಶ

04:54 PM Apr 28, 2020 | Suhan S |

ಚಿಕ್ಕೋಡಿ: ಕೇಂದ್ರ ಸರ್ಕಾರವು ರಾಜ್ಯಕ್ಕೆ ಮಾಡುವ ತಾರತಮ್ಯವನ್ನು ಕಾಂಗ್ರೆಸ್‌ ಪಕ್ಷ ಸಹಿಸುವುದಿಲ್ಲ. ಕೋವಿಡ್ 19  ಹಿನ್ನೆಲೆಯಲ್ಲಿ ದೇಣಿಗೆ ರೂಪದಲ್ಲಿ ಕೇಂದ್ರಕ್ಕೆ ಸಲ್ಲಿಕೆಯಾಗಿದ್ದ 10 ಸಾವಿರ ಕೋಟಿ ರೂ. ಗಳಲ್ಲಿ ರಾಜ್ಯಕ್ಕೆ 500 ಕೋಟಿ ರೂ. ನೀಡಿದರೇ ಸಹಾಯವಾಗುತ್ತಿತ್ತು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ಕೇಂದ್ರ ಸರ್ಕಾರ ವಿರುದ್ಧ ಹರಿಹಾಯ್ದರು.

Advertisement

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರಕ್ಕೆ ದೇಣಿಗೆ ರೂಪದಲ್ಲಿ ಸಂಗ್ರಹವಾದ 10 ಸಾವಿರ ಕೋಟಿ ರೂ. ಗಳಲ್ಲಿ ರಾಜ್ಯಕ್ಕೆ 500 ಕೋಟಿ ನೀಡಿದ್ದರೇ ರೈತರ ಬೆಳೆಹಾನಿ, ಮಾಸ್ಕ್, ಸ್ಯಾನಿಟೈಸರ್‌ ಮುಂತಾದ ಸಮಸ್ಯೆಗಳನ್ನು ಬಗೆಹರಿಸಬಹುದಿತ್ತು ಎಂದರು. ಕೋವಿಡ್ 19  ಮುನ್ನೇಚ್ಚರಿಕೆ ಕ್ರಮವಾಗಿ ಬೇರೆ ಕಡೆ ಹೊಲಿಕೆ ಮಾಡಿದರೇ ನಮ್ಮ ರಾಜ್ಯ ಪರವಾಗಿಲ್ಲ. ಆದರೆ ಕೊರೊನಾದಲ್ಲಿ ರೈತರು ಸಾಕಷ್ಟು ತರಕಾರಿ, ವಿವಿಧ ಹಣ್ಣು-ಹಂಪಲಗಳಿಗೆ ಹಾನಿಯುಂಟಾಗಿದೆ. ಕೂಡಲೇ ಸರ್ಕಾರ ಹಾನಿ ನಷ್ಟ ಭರಿಸಬೇಕು. ರೈತರಿಗೆ ಆತ್ಮಸ್ಥೈರ್ಯ ತುಂಬಬೇಕು. ರೈತರ ವಿವಿಧ ಬೆಳೆಗಳಿಗೆ ಮಾರಾಟ ಮಾಡಲು ಅನುಕೂಲ ಕಲ್ಪಿಸಬೇಕು ಎಂದರು.

ಲಾಕ್‌ಡೌನ್‌ನಿಂದ ರೈತರಿಗೆ, ಸಾರ್ವಜನಿಕರಿಗೆ ಆದ ಸಮಸ್ಯೆ ಕುರಿತು ಕೆಪಿಸಿಸಿ ಅಭಿಪ್ರಾಯ ಸಂಗ್ರಹ ಮಾಡಲು ಸೂಚಿಸಿದೆ. ಇದರಿಂದ ರಾಜ್ಯದ ಎಲ್ಲ ಜಿಲ್ಲೆಗಳಿಗೆ ಭೇಟಿ ನೀಡಿ ಕೊರೊನಾ ಹೆಚ್ಚಿರುವ ಪ್ರದೇಶಗಳಿಗೆ ಖುದ್ದಾಗಿ ಭೇಟಿ ನೀಡಿ ಅಲ್ಲಿಯ ಸ್ಥಿತಿಗತಿ ಕುರಿತು ಕೆಪಿಸಿಸಿ ಅಧ್ಯಕ್ಷರಿಗೆ ವರದಿ ನೀಡಲಾಗುತ್ತದೆ. ಕೋವಿಡ್ 19   ನಿಯಂತ್ರಿಸಲು ಸರ್ಕಾರ ಮತ್ತು ಜಿಲ್ಲಾಡಳಿತಕ್ಕೆ ಕಾಂಗ್ರೆಸ್‌ ಪಕ್ಷ ಸಂಪೂರ್ಣ ಸಹಕಾರ ನೀಡಲಿದೆ ಎಂದರು.

ಶಾಸಕ ಗಣೇಶ ಹುಕ್ಕೇರಿ, ಜಿಲ್ಲಾಧ್ಯಕ್ಷ ಲಕ್ಷ್ಮಣರಾವ ಚಿಂಗಳೆ, ಮಾಜಿ ಶಾಸಕ ವೀರಕುಮಾರ ಪಾಟೀಲ, ಕಾಕಾಸಾಹೇಬ ಪಾಟೀಲ, ಮಹಾವೀರ ಮೋಹಿತೆ, ಎಚ್‌.ಎಸ್‌. ನಸಲಾಪೂರೆ, ಸಾಭೀರ ಜಮಾದಾರ, ಮುದ್ದಸರ ಜಮಾದಾರ, ಗುಲಾಬ ಬಾಗವಾನ, ಮಹಾದೇವ ಕವಲಾಪುರೆ, ಅನಿಲ ಪಾಟೀಲ ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next