ಹೊಸದಿಲ್ಲಿ: ಮಣಿಪುರವು ತಿಂಗಳುಗಟ್ಟಲೆಯಿಂದ ಹೊತ್ತಿ ಉರಿಯುತ್ತಿರುವಾಗ ಭಾರತದ ಪ್ರಧಾನಿ ಸಂಸತ್ತಿನಲ್ಲಿ ಹಾಸ್ಯ ಚಟಾಕಿ ಹಾರಿಸುವುದು ನಾಚಿಕೆಗೇಡು ಎಂದು ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಹುಲ್ ಗಾಂಧಿ. ಲೋಕಸಭೆಯಲ್ಲಿ ಪ್ರತಿಪಕ್ಷಗಳು ತಮ್ಮ ಸರಕಾರದ ವಿರುದ್ಧ ತಂದ ಅವಿಶ್ವಾಸ ನಿರ್ಣಯಕ್ಕೆ ಪ್ರಧಾನಿ ನೀಡಿದ ಉತ್ತರಕ್ಕಾಗಿ ಕಿಡಿ ಕಾರಿದರು. ‘ತಮ್ಮ ಎರಡು ಗಂಟೆಯ ಭಾಷಣದಲ್ಲಿ ಮಣಿಪುರಕ್ಕೆ ಕೇವಲ ಎರಡು ನಿಮಿಷಗಳನ್ನು ಮೀಸಲಿಟ್ಟರು’ ಎಂದರು.
“ಸಂಸತ್ತಿನ ಮಧ್ಯದಲ್ಲಿ ಕುಳಿತಿರುವ ಪ್ರಧಾನಿ ನಾಚಿಕೆಯಿಲ್ಲದೆ ನಗುತ್ತಿದ್ದರು… ಸಮಸ್ಯೆ ಕಾಂಗ್ರೆಸ್ ಅಥವಾ ನಾನಲ್ಲ, ಸಮಸ್ಯೆ ಮಣಿಪುರದಲ್ಲಿ ಏನು ನಡೆಯುತ್ತಿದೆ ಮತ್ತು ಅದನ್ನು ಏಕೆ ನಿಲ್ಲಿಸಲಾಗುತ್ತಿಲ್ಲ” ಎಂದು ಹೇಳಿದರು.
ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು “ಮಣಿಪುರದಲ್ಲಿ ಭಾರತ ಮಾತೆಯನ್ನು ಕೊಂದಿದ್ದಾರೆ” ಎಂಬ ನನ್ನ ಹೇಳಿಕೆಗಳು ಪೊಳ್ಳು ಮಾತುಗಳಲ್ಲ. ಬಿಜೆಪಿಯಿಂದ ಹಿಂದೂಸ್ಥಾನವನ್ನು ಕೊಲೆ ಮಾಡಲಾಗಿದೆ. ಪ್ರಧಾನಿ ಮಣಿಪುರದಲ್ಲಿ ಉರಿಯುತ್ತಿರುವ ಬೆಂಕಿಯನ್ನು ನಂದಿಸಬಾರದು ಎಂದು ಬದ್ಧರಾಗಿದ್ದಾರೆ. ಸೇನೆಯು 2-3 ದಿನಗಳಲ್ಲಿ ಶಾಂತಿಯನ್ನು ತರಬಹುದು ಆದರೆ ಸರಕಾರ ಅದನ್ನು ನಿಯೋಜಿಸುತ್ತಿಲ್ಲ ಎಂದು ರಾಹುಲ್ ಗಾಂಧಿ ಪುನರುಚ್ಚರಿಸಿದರು.
”ನರೇಂದ್ರ ಮೋದಿ ಜಿಯವರ ಮನಸ್ಸಿನಲ್ಲಿ ಭಾರತದ ಪ್ರಧಾನ ಮಂತ್ರಿಯ ಕೆಲಸ ಏನು ಎಂಬುದರ ಬಗ್ಗೆ ಸಂಪೂರ್ಣ ತಪ್ಪು ತಿಳುವಳಿಕೆ ಇದೆ. ಮೋದಿಯವರು ನಮ್ಮ ಪ್ರತಿನಿಧಿ ಎಂಬುದು ಅರ್ಥವಾಗುತ್ತಿಲ್ಲ. ಪ್ರಧಾನಿ ಕ್ಷುಲ್ಲಕ ರಾಜಕಾರಣಿಯಾಗಿ ಮಾತನಾಡಬಾರದು” ಎಂದರು.
ಮಣಿಪುರ ಸಿಎಂ ಮೂಗಿನ ನೇರದಿಂದ ಸಾವಿರಾರು ಆಯುಧಗಳನ್ನು ಲೂಟಿ ಮಾಡಲಾಗಿದೆ.ಹಾಗಾದರೆ ಅಮಿತ್ ಶಾ ಸಾವಿರಾರು ಆಯುಧಗಳನ್ನು ಲೂಟಿ ಮಾಡಲು ಬಯಸಿದ್ದರೆ? ಹಿಂಸಾಚಾರ ಮುಂದುವರೆಯಬೇಕೆಂದು ಅಮಿತ್ ಶಾ ಬಯಸಿದ್ದಾರಾ? ಎಂದು ಪ್ರಶ್ನಿಸಿದರು.