Advertisement

Yogi ‘ಬಟೇಂಗೆ’ಹೇಳಿಕೆ ಒಪ್ಪಲ್ಲ ಎಂದ ಅಜಿತ್‌: ಮಹಾಯುತೀಲಿ ಬಿರುಕು?

01:09 AM Nov 09, 2024 | Team Udayavani |

ಬುಲ್‌ಡಾಣಾ: ಯೋಗಿ ಆದಿತ್ಯನಾಥ್‌ ಅವರ “ಬಟೇಂಗೆ ತೋ ಕಟೇಂಗೆ’ (ಒಂದಾಗಿ ಇರದಿದ್ದರೆ, ಛಿದ್ರವಾಗುತ್ತೇವೆ) ಎಂಬ ಘೋಷಣೆಯನ್ನು, ಮಹಾ ರಾಷ್ಟ್ರ ಡಿಸಿಎಂ ಅಜಿತ್‌ ಪವಾರ್‌ ತಿರಸ್ಕರಿಸಿದ್ದಾರೆ. ಈ ಮೂಲಕ ಆಡಳಿತಾರೂಢ ಮಹಾಯುತಿ ಮೈತ್ರಿಕೂ ಟದಲ್ಲಿ ಒಗ್ಗಟ್ಟಿಲ್ಲ ಎಂಬುದು ಸಾಬೀತಾಗಿದೆ ಎಂದು ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್‌ ಠಾಕ್ರೆ ಹೇಳಿದ್ದಾರೆ. ಬುಲ್‌ಡಾಣಾದಲ್ಲಿ ಚುನಾವಣ ರ್ಯಾಲಿ ಉದ್ದೇಶಿಸಿ ಮಾತನಾಡಿದ ಠಾಕ್ರೆ, ಅಜಿತ್‌ರ ನಿಲುವಿನಿಂದ ಮಹಾಯುತಿಯಲ್ಲಿ ಒಗ್ಗಟ್ಟಿಲ್ಲ ಎಂದು ಜಗಜ್ಜಾಹೀರಾಗಿದೆ ಎಂದರು. ಮಹಾರಾಷ್ಟ್ರದ ರ‍್ಯಾಲಿ ಗಳಲ್ಲಿ ಆದಿತ್ಯನಾಥ್‌ರ ಘೋಷಣೆಯನ್ನು ವಿರೋಧಿ ಸಿದ್ದ ಅಜಿತ್‌, ಜನ ಇಂತಹ ಹೇಳಿಕೆಗಳನ್ನು ಇಷ್ಟಪ ಡುವುದಿಲ್ಲ. ಕೋಮು ಸೌಹಾರ್ದತೆಯನ್ನು ಕಾಯ್ದು ಕೊಳ್ಳಲು ಇಲ್ಲಿನ ಜನರು ಶ್ರಮಿಸಿದ್ದಾರೆ ಎಂದಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next