ಉಡುಪಿ: ಪರ್ಕಳ ಭವಾನಿ ಬಿಲ್ಡರ್ ವತಿಯಿಂದ ಎಂಜಿಎಂನಿಂದ ದೊಡ್ಡಣಗುಡ್ಡೆಗೆ ಸಾಗುವ ಮುಖ್ಯರಸ್ತೆಯ ಕಾನೂನು ಕಾಲೇಜು ಬಳಿಯಲ್ಲಿ ನೂತನವಾಗಿ ನಿರ್ಮಾಣಗೊಂಡ 1 ಬಿಎಚ್‌ಕೆ ಮತ್ತು 2 ಬಿಎಚ್‌ಕೆ ಫ್ಲ್ಯಾಟ್‌ಗಳಿರುವ “ಭವಾನಿ ರೆಸಿಡೆನ್ಸಿ” ವಸತಿ ಸಮುಚ್ಚಯವು ಮಾ. 31ರ ಪೂರ್ವಾಹ್ನ 9.15ಕ್ಕೆ ಉದ್ಘಾಟನೆಗೊಳ್ಳಲಿದೆ.
ಕಟಪಾಡಿ ಶ್ರೀ ಆನೆಗುಂದಿ ಸಂಸ್ಥಾನ ಸರಸ್ವತಿ ಪೀಠದ ಶ್ರೀ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮೀಜಿಯವರು ದೀಪ ಪ್ರಜ್ವಲಿಸಿ ಆಶೀರ್ವಚನ ನೀಡಲಿದ್ದಾರೆ. ಮುಖ್ಯ ಅತಿಥಿಯಾಗಿ ಮಾಂಡವಿ ಬಿಲ್ಡರ್ನ ಅಧ್ಯಕ್ಷ ಡಾ| ಜೆರ್ರಿ ವಿನ್ಸೆಂಟ್ ಡಯಾಸ್ ಭಾಗವಹಿಸುವರು.
ಸಮುಚ್ಚಯವು ನಿರಂತರ ನೀರು ಸರಬರಾಜು, ಎಸ್‌ಟಿಪಿ ಸೌಲಭ್ಯ, ವಿಶಾಲವಾದ ಪ್ರವೇಶದ್ವಾರ, ಸೆಕ್ಯುರಿಟಿ ಗಾರ್ಡ್ಸ್ ನೊಂದಿಗೆ ಸಿಸಿ ಟಿವಿ ಮೊನಿಟರಿಂಗ್ ಸೌಲಭ್ಯಗಳನ್ನು ಹೊಂದಿದ್ದು ಜನವಸತಿ ಪ್ರದೇಶದಲ್ಲಿ ವಾಸ್ತವ್ಯಕ್ಕೆ ಯೋಗ್ಯವಾಗಿದೆ. ಎಲ್ಲ ಅಪಾರ್ಟ್‌ಮೆಂಟ್ ಗಳಿಗೂ ರೆಟಿಕ್ಯುಲೇಟೆಡ್ ಗ್ಯಾಸ್ ಕನೆಕ್ಷನ್, 8 ಮಂದಿ ಸಾಮರ್ಥ್ಯದ 1 ಆಟೋಮ್ಯಾಟಿಕ್ ಇಲೆವೇಟರ್, ಪಂಪ್ಸ್, ಸಾಮಾನ್ಯ ಲೈಟ್ಸ್‌ಗೆ ಜನರೇಟರ್ ಬ್ಯಾಕ್‌ಅಪ್ ಒದಗಿಸಲಾಗಿದೆ.
ರೇರಾ ಸಂಸ್ಥೆಯಿಂದ ಪ್ರಮಾಣಿಕರಿಸಲ್ಪಟ್ಟ ಸಂಸ್ಥೆಯಿಂದ ನಿರ್ಮಿಸಲ್ಪಟ್ಟ ಸಮುಚ್ಚಯದಲ್ಲಿರುವ ಫ್ಲ್ಯಾಟ್‌ಗಳು ಗ್ರಾಹಕರ ಕೈಗೆಟಕುವ ದರದಲ್ಲಿ ದೊರೆಯಲಿವೆ. ಮಾಹಿತಿ ಮತ್ತು ಬುಕ್ಕಿಂಗ್‌ಗಾಗಿ ಕಲ್ಸಂಕ ಗುಂಡಿಬೈಲು ಮುಖ್ಯರಸ್ತೆಯಲ್ಲಿರುವ ಭವಾನಿ ರೆಡ್ ಕೋರಲ್ ಬಿಲ್ಡಿಂಗ್‌ನ 2ನೇ ಮಹಡಿಯಲ್ಲಿರುವ ಸಂಸ್ಥೆಯ ಕಚೇರಿ ಅಥವಾ ವೆಬ್‌ಸೈಟ್: //www.bhavanibuilders.in ಅನ್ನು ಸಂಪರ್ಕಿಸಲು ಸಂಸ್ಥೆಯ ಪ್ರವರ್ತಕ ರಾದ ನಾರಾಯಣ ಆಚಾರ್, ಪುನೀತ್ ಕುಮಾರ್ ತಿಳಿಸಿದ್ದಾರೆ.