Advertisement

Doddanagudde ಕ್ಷೇತ್ರ ; ಪರಿವಾರ ದೇವರುಗಳಿಗೆ ಸ್ನಪನ ಕಲಶ ಅಭಿಷೇಕ ಸಂಪನ್ನ

05:33 PM May 22, 2024 | Team Udayavani |

ಉಡುಪಿ: ದೊಡ್ಡನಗುಡ್ಡೆಯ ಶ್ರೀಚಕ್ರ ಪೀಠ ಸುರ ಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದ 18ನೇ ಪ್ರತಿಷ್ಠ ವರ್ಧಂತಿ ಮಹೋತ್ಸವದ ಪ್ರಯುಕ್ತ ಆದ್ಯ ಗಣಪತಿ ಯಾಗ ಸಪರಿವಾರ ದೇವರುಗಳಿಗೆ ಪ್ರಧಾನ ಯಾಗ ಸ್ನಪನ ಕಲಶಾಭಿಷೇಕ ಪ್ರಸನ್ನ ಪೂಜೆ ಮಹಾಪೂಜೆ ಹಾಗೂ ಮಹಾ ಅನ್ನ ಸಂತರ್ಪಣೆ ನೆರವೇರಿತು.

Advertisement

ಕ್ಷೇತ್ರದ ಧರ್ಮದ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ಶ್ರೀ ಗಣೇಶ್ ಸರಳಾಯ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು.

ವೇದಮೂರ್ತಿ ಕೊಲಕಾಡಿ ವಾದಿರಾಜ ಉಪಾಧ್ಯಾಯ ಅವರು ದಕ್ಷಿಣ ಭಾರತದಲ್ಲಿ ಅತಿ ಎತ್ತರವಾದ ಮೇರು ಶ್ರೀಯಂತ್ರಕ್ಕೆ ಶ್ರೀ ವಿದ್ಯಾ ಮಂತ್ರ ಹೋಮ ಸಹಿತ  ಕಳಶಾಭಿಷೇಕ ನೆರವೇರಿಸಿದರು.

ಅದ್ವಿತ, ಮಾನಸಿ, ಶ್ವೇತಾ ಶ್ರುತಿ ಅವರಿಂದ ಕ್ಷೇತ್ರದ ವಿಶೇಷ ಸೇವೆಯಾದ ನೃತ್ಯ ಸೇವೆ ನೆರವೇರಿತು.

ಕ್ಷೇತ್ರದ ನವ  ಶಕ್ತಿ, ವೇದಿಕೆಯಲ್ಲಿ ಶ್ರೀ ಮಾತಾ ಭಜನಾ ಮಂಡಳಿ ಪರಂಪಳ್ಳಿ ಭಜನೆ ಸಂಕೇತನೇ ನೆರವೇರಿ, ರಾತ್ರಿ ಮಹಾಪೂಜೆ ಹಾಗೂ ಮಹಾಪ್ರಸಾದ ವಿತರಣೆಯಾಯಿತು ಎಂದು ಕ್ಷೇತ್ರ ಉಸ್ತುವಾರಿ ಕುಸುಮ ನಾಗರಾಜ್ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next