Advertisement
ನಾಗದೋಷ ಪರಿಹಾರಾರ್ಥವಾಗಿ ಸರ್ವ ಪ್ರಾಯಶ್ಚಿತ್ತ ಪೂರ್ವಕ ಕ್ಷೇತ್ರದ ನಾಗದೇವರಿಂದ ಅನುಗ್ರಹಿತ ಭಕ್ತ ಕುಟುಂಬದವರಿಂದ ಸಮರ್ಪಿಸಲ್ಪಟ್ಟ ಈ ಮಹಾನ್ ಸೇವೆಯನ್ನು ಗಣೇಶ ಸರಳಾಯರು ವಿಧಿವಿಧಾನ ಪೂರ್ವಕವಾಗಿ ವಿಜೃಂಭಣೆಯಿಂದ ನೆರವೇರಿಸಿದರು.
Related Articles
Advertisement
ಪಂಚವರ್ಣಾತ್ಮಕವಾದ ಆಕರ್ಷಕ ಬೃಹತ್ ನಾಗ ತನುತರ್ಪಣ ಮಂಡಲವನ್ನು ಅಜೆಕಾರು ಮುರಳೀಧರ ಭಟ್ ಅವರು ಆದರ್ಶ ಸಾಮಗ, ಪ್ರಸನ್ನ ಮಾರ್ಪಳ್ಳಿ, ವಿಜಯೇಂದ್ರ ಮೇಲಂಟ ಅವರ ಸಹಕಾರದಿಂದ ಅದ್ಭುತವಾಗಿ ರಚಿಸಿದ್ದರು.
ಸಂಜೆ ನಾಗ ಸಾನ್ನಿಧ್ಯದಲ್ಲಿ ದೇವತಾ ಪ್ರಾರ್ಥನೆಯೊಂದಿಗೆ ಕ್ಷೇತ್ರದ ಉಸ್ತುವಾರಿ ಕುಸುಮಾ ನಾಗರಾಜ್ ದೀಪ ಪ್ರಜ್ವಲಿಸಿ ಪೂಜೆಗೆ ಚಾಲನೆ ನೀಡಿದರು.
ಅನಂತರ ಹಾಲಿಟ್ಟು ಸೇವೆ, ಆಶ್ಲೇಷಾ ಬಲಿ ಸಹಿತ ತನುತರ್ಪಣ ಮಂಡಲ ಸೇವೆ ಸಂಪನ್ನಗೊಂಡಿತು.
ಅನುಕ್ರಮಣಿಕೆಯನ್ನು ಡಾ ಶ್ರೀವತ್ಸ ಉಪಾಧ್ಯಾಯ, ನಾಗ ಸಂದರ್ಶನವನ್ನು ಕಲ್ಲಂಗಳ ರಾಮಚಂದ್ರ ಕುಂಜಿತ್ತಾಯ ನೆರವೇರಿಸಿದರು. ನಾಗೇಂದ್ರ ಕುಡುಪು ಮತ್ತು ಬಳಗದವರಿಂದ ಚೆಂಡೆ ಹಾಗೂ ಉಡಿಕೆ ನಾದ, ಮುರಳೀಧರ ಮುದ್ರಾಡಿ ಮತ್ತು ತಂಡದವರಿಂದ ನಾಗಸ್ವರ ವಾದನ ಸಮರ್ಪಿಸಲ್ಪಟ್ಟಿತು.
ಬ್ರಾಹ್ಮಣ, ಸುವಾಸಿನಿ, ವಟು ಆರಾಧನೆ, ದಂಪತಿ, ಕನ್ನಿಕಾ, ಆಚಾರ್ಯ ಪೂಜೆ ಇತ್ಯಾದಿ ಪೂಜೆ ಮತ್ತು ಆರಾಧನೆಗಳು ಜರಗಿತು.
ಈ ಪೂಜೆಯಲ್ಲಿ ನಾಗ ದೇವರು ಶ್ರೀದೇವಿಯನ್ನು ಭೇಟಿ ಮಾಡುವ ಅವಿಸ್ಮರಣೀಯ ಕ್ಷಣ ರೋಮಾಂಚನಗೊಳಿಸುವಂತಿತ್ತು.