Advertisement

ದೊಡ್ಡಬಳ್ಳಾಪುರ: ವಾಡಿಕೆಗಿಂತ ದುಪ್ಪಟ್ಟು ಮಳೆ

01:35 PM Oct 15, 2022 | Team Udayavani |

ದೊಡ್ಡಬಳ್ಳಾಪುರ: ಒಂದು ವಾರದಿಂದ ತಾಲೂಕಿನಲ್ಲಿ ಸುರಿಯುತ್ತಿರುವ ಮಳೆಯಿಂದ ಅಕ್ಟೋಬರ್‌ ತಿಂಗಳ ವಾಡಿಕೆ ಮಳೆಯ ಪ್ರಮಾಣ ಮೀರಿದ್ದು, ವಾಡಿಕೆಗಿಂತ ದುಪ್ಪಟ್ಟು ಮಳೆಯಾಗಿದೆ.

Advertisement

ಗುರುವಾರ ಒಂದೇ ದಿನ ರಾತ್ರಿ ಸರಾಸರಿ 87.8 ಮಿ.ಮೀ. ಮಳೆ ಬಿದ್ದಿದ್ದು, ದೊಡ್ಡಬೆಳವಂಗಲದಲ್ಲಿ ಹೆಚ್ಚು ಅಂದರೆ 124.5ಮಿ.ಮೀ. ಮಳೆ ಬಿದ್ದಿದೆ. ಉಳಿದಂತೆ ಕಸಬಾ ಹೋಬಳಿಯಲ್ಲಿ 47ಮಿ.ಮೀ, ಮಳೆ ಬಿದ್ದಿದೆ. ಬಿ ದ್ದಿದೆ. ತೂಬಗೆರೆ ಹೋಬಳಿಯಲ್ಲಿ 65ಮಿ.ಮೀ., ಮಧುರೆ ಹೋಬಳಿ 98.3ಮಿ.ಮೀ., ಸಾಸಲು ಹೋಬಳಿ 105ಮಿ.ಮೀ. ಮಳೆ ಬಿದ್ದಿದೆ.

ಕೃಷಿ ಇಲಾಖೆ ಅಂಕಿ-ಅಂಶ: ಕೃಷಿ ಇಲಾಖೆ ಅಂಕಿ- ಅಂಶದಂತೆ ಜನವರಿಯಿಂದ ಅಕ್ಟೋಬರ್‌ ತಿಂಗಳ ಅಂತ್ಯಕ್ಕೆ ವಾಡಿಕೆ ಮಳೆ 691 ಮಿ.ಮೀ. ಆಗಬೇಕಿದ್ದು, 1,387 ಮಿ.ಮೀ. ಮಳೆ ಬಿದ್ದಿದೆ. ತಾಲೂಕಿನ ಐದು ಹೋಬಳಿಗಳ ಪೈಕಿ ಹೆಚ್ಚಿನ ಮಳೆ ಈ ಬಾರಿ ಮಧುರೆ ಹೋಬಳಿಯಲ್ಲಿ 1,457ಮಿ.ಮೀ ಮಳೆ ಬಿದ್ದಿದೆ.

ಉಳಿದಂತೆ ಕಸಬಾ ಹೋಬಳಿಯಲ್ಲಿ 1,296ಮಿ. ಮೀ. ಮಳೆ ಬಿದ್ದಿದೆ. ದೊಡ್ಡಬೆಳವಂಗಲ 1,422ಮಿ. ಮೀ. ಬಿದ್ದಿದೆ. ತೂಬಗೆರೆ ಹೋಬಳಿಯಲ್ಲಿ 1,355ಮಿ.ಮೀ., ಸಾಸಲು ಹೋಬಳಿ 1315ಮಿ. ಮೀ. ಮಳೆ ಬಿದ್ದಿದೆ. ಕಳೆದ ವರ್ಷ ಅಕ್ಟೋಬರ್‌ ಅಂತ್ಯಕ್ಕೆ 1,053 ಮಿ.ಮೀ. ಮಳೆಯಾಗಿತ್ತು. ತಾಲೂಕಿನಲ್ಲಿ ಆಗಸ್ಟ್‌ ನಂತರದಿಂದ ಹೆಚ್ಚಾಗಿ ಮಳೆ ಬಿದ್ದಿರುವುದರಿಂದ ಹಲವಾರು ಕೆರೆಗಳು ತುಂಬಿದ್ದು, ನಗರದ ನಾಗರಕೆರೆ ವಾರದಿಂದೀಚೆಗೆ ಎರಡನೇ ಬಾರಿ ತುಂಬಿ ಹರಿಯುತ್ತಿದೆ.

ಸ್ಥಳಕ್ಕೆ ಶಾಸಕ ವೆಂಕಟರಮಣಯ್ಯ ಭೇಟಿ: ತಾಲೂಕಿ ನಲ್ಲಿ ಕಳೆದ ಕೆಲ ದಿನಗಳಿಂದ ಭಾರೀ ಮಳೆಯಾಗುತ್ತಿದೆ. ಅ.17ರಂದು ಮಾಕಳಿ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮ ಅಯೋಜನೆ ಮಾಡಲಾ ಗಿದ್ದು, ತಹಶೀಲ್ದಾರ್‌ ಮೋಹನಕುಮಾರಿ ಗ್ರಾಮ ವಾಸ್ತವ್ಯ ಮಾಡಲಿದ್ದರು. ಆದರೀಗ ಸಂಪರ್ಕ ಸೇತುವೆ ಕೊಚ್ಚಿ ಹೋಗಿರುವುದರಿಂದ ಸೇತುವೆ ಕೊಚ್ಚಿ ಹೋಗಿ ರುವ ವಿಷಯ ತಿಳಿದ ಶಾಸಕ ಟಿ.ವೆಂಕಟರಮಣಯ್ಯ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಗ್ರಾಮಸ್ಥರು ಸೇತುವೆ ನಿರ್ಮಿಸಿ ಕೇವಲ ಎರಡು ವರ್ಷ ಮಾತ್ರವಾಗಿದ್ದು, ಅಷ್ಟರಲ್ಲೇ ಕೊಚ್ಚಿ ಹೋಗಿದೆ ಎಂದು ದೂರಿದರು.

Advertisement

ಸ್ಥಳದಲ್ಲಿ ಪಿಡಿಒ ನಾಗರಾಜ್‌ ಸೇರಿದಂತೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸ್ಥಳೀಯ ಮುಖಂಡರು ಇದ್ದರು.

ಕೊಚ್ಚಿ ಹೋದ ಸಂಪರ್ಕ ಸೇತುವೆ: ಗುರುವಾರ ರಾತ್ರಿ ಸುರಿದ ಬಾರಿ ಮಳೆಗೆ ತಾಲೂಕಿನ ಮಾಕಳಿ ಗ್ರಾಮಕ್ಕೆ ಸಂಪರ್ಕಿಸುವ ಸೇತುವೆ ಕೊಚ್ಚಿ ಹೋಗಿದ್ದು, ಗ್ರಾಮ ಸ್ಥರು ಎತ್ತಿನಹೊಳೆ ಪೈಪ್‌ ಮೂಲಕ ಸಾಗುವ ಅನಿವಾರ್ಯತೆ ಎದುರಾಗಿದೆ. ಮಾಕಳಿ ಗ್ರಾಮದ ಸಂಪರ್ಕ ಸೇತುವೆ ಕೊಚ್ಚಿ ಹೋಗಿದ್ದು, ಅನೇಕ ಗ್ರಾಮಗಳ ಜಮೀನುಗಳಿಗೆ ನೀರು ನುಗ್ಗಿ ಬೆಳೆಗಳು ಹಾನಿಯಾಗಿದೆ. ಅ.17ರಂದು ಮಾಕಳಿ ಗ್ರಾಮದಲ್ಲಿ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಅಂಗವಾಗಿ ತಹಶೀಲ್ದಾರ್‌ ಮೋಹ ನಕುಮಾರಿ ಗ್ರಾಮವಾಸ್ತವ್ಯ ನಿಗದಿಯಾಗಿತ್ತು. ಆದರೆ, ತಹಶೀಲ್ದಾರ್‌ ಗ್ರಾಮಕ್ಕೆ ಬರುವ ಮುನ್ನವೇ ಸೇತುವೆ ಕೊಚ್ಚಿ ಹೋಗಿದೆ.

ಶೇ.101.8 ಗುರಿ ಮುಟ್ಟಿದ ಬಿತ್ತನೆ : ರಾಗಿ 16,122 ಹೆಕ್ಟೇರ್‌, ಮುಸುಕಿನಜೋಳ 7,350 ಹೆಕ್ಟೇರ್‌, ಭತ್ತ 10 ಹೆಕ್ಟೇರ್‌, ತೃಣಧಾನ್ಯ 22 ಹೆಕ್ಟೇರ್‌, ಮೇವಿನ ಜೋಳ 1,150ಹೆಕ್ಟೇರ್‌, ಪಾಪ್‌ಕಾರ್ನ್ 150 ಹೆಕ್ಟೇರ್‌ ಸೇರಿ ಏಕದಳ 24,854 ಹೆಕ್ಟೇರ್‌ಗಳಾಗಿದ್ದು, 25,198 ಹೆಕ್ಟೇರ್‌ ಗುರಿ ಮುಟ್ಟಿದೆ. ತೊಗರಿ 360 ಹೆಕ್ಟೇರ್‌, ಹುರುಳಿ 170 ಹೆಕ್ಟೇರ್‌, ಅವರೆ 275 ಹೆಕ್ಟೇರ್‌, ಅಲಸಂದೆ 20 ಹೆಕ್ಟೇರ್‌ ಸೇರಿ ದ್ವಿದಳ ಧಾನ್ಯಗಳು ಒಟ್ಟು 830 ಹೆಕ್ಟೇರ್‌, ನೆಲಗಡಲೆ 100 ಹೆಕ್ಟೇರ್‌, ಎಳ್ಳು 5 ಹೆಕ್ಟೇರ್‌, ಹರಳು 75, ಹುಚ್ಚೆಳ್ಳು 20 ಹೆಕ್ಟೇರ್‌, ಸಾಸಿವೆ 50 ಹೆಕ್ಟೇರ್‌, ಎಣ್ಣೆ ಕಾಳುಗಳು ಸೇರಿ 250 ಹೆಕ್ಟೇರ್‌ ಸೇರಿ ಎಲ್ಲಾ ಬೆಳೆಗಳನ್ನು 25,934 ಹೆಕ್ಟೇರ್‌ಗಳಲ್ಲಿ ಬಿತ್ತನೆ ಗುರಿ ಹೊಂದಲಾ ಗಿದ್ದು, ಇದರಲ್ಲಿ 26,400 ಹೆಕ್ಟೇರ್‌ ಗುರಿ ಮುಟ್ಟಿದೆ. ಒಟ್ಟು ಎಲ್ಲಾ ಬೆಳೆಗಳ ಗುರಿ 25,934 ಹೆಕ್ಟೇರ್‌ಗಳಾಗಿದು , 26,400 ಹೆಕ್ಟೇರ್‌ ಗುರಿ ಮುಟ್ಟುವ ಮೂಲಕ ಶೇ.101.8 ಬಿತ್ತನೆ ಗುರಿ ಮಟ್ಟಿದೆ.

-ಡಿ.ಶ್ರೀಕಾಂತ

Advertisement

Udayavani is now on Telegram. Click here to join our channel and stay updated with the latest news.

Next