Advertisement

ಬೆಳ್ಳಾರೆ ಆಸ್ಪತ್ರೆ ತೆರೆದಿದ್ದರೂ ಕಾಣಿಸದ ವೈದ್ಯರು, ಸಿಬಂದಿ!

01:49 AM Mar 28, 2022 | Team Udayavani |

ಸುಳ್ಯ: ತಾಲೂಕಿನ ಬೆಳ್ಳಾರೆ ಪ್ರಾಥಮಿಕ ಆರೋಗ್ಯ ಕೇಂದ್ರ ರವಿವಾರ ತೆರೆದಿದ್ದರೂ ವೈದ್ಯರು, ಔಷಧ ವಿತರಕರು, ರಿಸೆಪ್ಶನ್‌ ಸಿಬಂದಿ ಸೇರಿದಂತೆ ಯಾವುದೇ ಸಿಬಂದಿ ಇಲ್ಲದೇ ಇದ್ದ ಘಟನೆ ಬೆಳಗ್ಗೆ ನಡೆದಿದ್ದು, ಈ ಬಗೆಗಿನ ವೀಡಿಯೋ ವೈರಲ್‌ ಆಗಿದೆ.

Advertisement

ಬೆಳಗ್ಗೆ 9.15ಕ್ಕೆ ಔಷಧಿಗೆಂದು ರೋಗಿಗಳಿಬ್ಬರು ಆಗಮಿಸಿ ಕಾಯುತ್ತಿದ್ದರು. ಆಗ ಓರ್ವ ಸಿಬಂದಿ ಮಾತ್ರ ಇದ್ದು “ಈಗ ಇನ್ನೊಬ್ಬರು ಬರ್ತಾರೆ’ ಎಂದುಹೇಳಿ ಅವರು ಕೂಡ ಹೋದರು. ಬಳಿಕ ಎಷ್ಟು ಹೋತ್ತಾದರೂ ಯಾರೂ ಆಗಮಿಸಿಲ್ಲ ಎಂದುಔಷಧ ಪಡೆಯಲು ಆಗಮಿಸಿದವರು ಮಾತನಾಡುವುದು ವೀಡಿಯೋದಲ್ಲಿದೆ.

ಇದನ್ನೂ ಓದಿ:ನಿರುದ್ಯೋಗ ಹೋಗಲಾಡಿಸಲು ಉದ್ಯೋಗ ಮೇಳ ಸಹಕಾರಿ: ಸಚಿವ ಎಸ್. ಟಿ. ಸೋಮಶೇಖರ್

ಎಲ್ಲ ಕೊಠಡಿಗಳ ಬಾಗಿಲು ತೆರೆದಿದ್ದವು. ಯಾವ ಕಾರಣಕ್ಕೆ ಎಲ್ಲರೂ ಹೊರಗೆ ತೆರಳಿದ್ದಾರೆ ಎಂದು ತಿಳಿದುಬಂದಿಲ್ಲ. ಘಟನೆಯ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next