ಈ ಅಮಾನವೀಯ ಘಟನೆ ನಡೆದಿರುವುದು ರಾಜಸ್ಥಾನದ ಜೋಧ್‌ಪುರದ ಉಮೈದ್ ಆಸ್ಪತ್ರೆಯಲ್ಲಿ. ಕ್ಷುಲ್ಲಕ ವಿಷಯಕ್ಕೆ ಜಗಳ ಆರಂಭಿಸಿದ ವೈದ್ಯರಿಬ್ಬರು ಎದುರಿರುವ ಜವಾಬ್ದಾರಿಯನ್ನು ಮರೆತ ಪರಿಣಾಮ ಈ ಅಚಾತುರ್ಯ ನಡೆದಿದೆ. ಮಗುವಿನ ಹೃದಯ ಬಡಿತ ಕ್ಷೀಣಿಸುತ್ತಿದ್ದ ಕಾರಣ ತುರ್ತು ಶಸ್ತ್ರಚಿಕಿತ್ಸೆ ನಡೆಸಿ ಪ್ರಸವ ಮಾಡಿ ಸಬೇಕಿತ್ತು. ಆದರೆ ಪ್ರಸೂತಿ ತಜ್ಞ ಅಶೋಕ್ ನೈನಾವಾಲ್ ಮತ್ತು ಅರಿವಳಿಕೆ ತಜ್ಞರು ಎಂ.ಎಲ್. ತಕ್ ಅವರ ಬಳಿ ಶಸ್ತ್ರಚಿಕಿತ್ಸೆಗೆ ಕರೆತರುವ ಮುನ್ನ ಆಕೆ ಏನಾದರೂ ತಿಂದಿದ್ದರೇ ಎಂದು ಕೇಳಿದ್ದರು.
Advertisement
ಇದು ಇಬ್ಬರು ವೈದ್ಯರ ನಡುವಿನ ಘರ್ಷ ಣೆಗೆ ನಾಂದಿಯಾಯಿತು. ಅದನ್ನು ಕೊಠಡಿ ಯಲ್ಲಿದ್ದ ಮತ್ತೂಬ್ಬ ವೈದ್ಯ ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದಾರೆ. ಮೊಬೈಲ್‌ನಲ್ಲಿ ಸೆರೆಯಾದ ದೃಶ್ಯಾವಳಿಯಲ್ಲಿ ವೈದ್ಯರಿಬ್ಬರೂ ಪರಸ್ಪರ ಹೆಸರನ್ನು ಕರೆದುಕೊಂಡು, ಕೈಕೈ ಮಿಲಾಯಿ ಸಿದರು. ಬಳಿಯಲ್ಲೇ ಇದ್ದ ನರ್ಸ್ ಮತ್ತು ಕಿರಿಯ ವೈದ್ಯರು ಜಗಳ ನಿಲ್ಲಿಸಿ ಶಸ್ತ್ರ ಚಿಕಿತ್ಸೆ ಮುಂದುವರಿಸಲು ಸಲಹೆ ಮಾಡಿ ದರು. ಆದರೆ ವಿಳಂಬವಾದ್ದರಿಂದ ಮಗು ಜನಿಸಿ ದರೂ ಕೆಲವೇ ಕ್ಷಣಗಳಲ್ಲಿ ಅಸುನೀಗಿತು. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ವೈದ್ಯರನ್ನು ಅಮಾನತು ಮಾಡಲಾಗಿದ್ದು, ಬೇಜವಾಬ್ದಾರಿಯಿಂದ ಉಂಟಾದ ಪ್ರಕರಣ ಅಲ್ಲ ಎಂದು ಆಡಳಿತ ಮಂಡಳಿ ತಿಳಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಸು ದಾಖಲಿಸಲಾಗಿದೆ.