ನವದೆಹಲಿ: ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವುದಕ್ಕೆ ಭಾರತದಲ್ಲಿ ನಿಷೇಧವಿದೆ. ಆದರೆ ವಿಮಾನನಿಲ್ದಾಣ, ಹೋಟೆಲ್, ರೆಸ್ಟೋರೆಂಟ್‌ಗಳಲ್ಲಿ ಅದಕ್ಕೆಂದೇ ಮೀಸಲಿಟ್ಟಿರುವ ಜಾಗಗಳಲ್ಲಿ ಧೂಮಪಾನ ಮಾಡುವುದಕ್ಕೆ ಅವಕಾಶ ನೀಡಲಾಗಿದೆ. ಈಗ ಅಲ್ಲೂ ಅದನ್ನು ನಿಷೇಧಿಸಬೇಕು.
ಈ ಮೂಲಕ ಭಾರತವನ್ನು ಶೇ.100ರಷ್ಟು ಧೂಮಪಾನಮುಕ್ತ ದೇಶವನ್ನಾಗಿ ಪರಿವರ್ತಿಸಬೇಕೆಂಬ ಮನವಿಯೊಂದು ಧೂಮಪಾನರಹಿತ ದಿನಾಚರಣೆ ಹಿನ್ನೆಲೆಯಲ್ಲಿ ಕೇಳಿಬಂದಿದೆ.
ವೈದ್ಯರು, ಕ್ಯಾನ್ಸರ್ ಬಾಧಿತರು, ರೆಸ್ಟೋರೆಂಟ್‌ಗಳ ಮಾಲಿಕರ ಗುಂಪೊಂದು ಇಂತಹ ಮನವಿ ಮಾಡಿದೆ. ಧೂಮಪಾನದಿಂದ ಕೊರೊನಾ ಹರಡುವಿಕೆ ಹೆಚ್ಚಾಗುತ್ತಿದೆ. ತಂಬಾಕು ಉತ್ಪನ್ನದಿಂದ ಸಿದ್ಧವಾಗುವ ಸಿಗರೆಟ್-ಬೀಡಿಯ ಹೊಗೆ ಶ್ವಾಸಕೋಶವನ್ನು ದುರ್ಬಲಗೊಳಿಸುತ್ತದೆ. ಆಗ ರೋಗ ನಿರೋಧಕ ಶಕ್ತಿ ಕುಗ್ಗುತ್ತದೆ ಎಂದು ಕ್ಯಾನ್ಸರ್ ತಜ್ಞ ಪಂಕಜ್ ಚತುರ್ವೇದಿ ಹೇಳಿದ್ದಾರೆ.
ಇದನ್ನೂ ಓದಿ :ದಿಲ್ಲಿಯಲ್ಲಿ 2048ರ ಒಲಿಂಪಿಕ್ಸ್ : ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯ ಕನಸು
ಅಲ್ಲದೇ ಸಿಗರೆಟನ್ನು ನೇರವಾಗಿ ಸೇದದವರು, ಅನ್ಯರು ಬಿಡುವ ಹೊಗೆಯಿಂದ ಅದರ ಪರಿಣಾಮ ಅನುಭವಿಸುವಂತಾಗಿದೆ. ಇದನ್ನೂ ಸರಿ ಮಾಡುವ ಉದ್ದೇಶವಿದೆ.