Advertisement

Viral Video: ಮೆದುಳಿನ ಸರ್ಜರಿ ನಡೆಸುವ ವೇಳೆ ಜೂ.ಎನ್‌ ಟಿಆರ್‌ ಸಿನಿಮಾ ವೀಕ್ಷಿಸಿದ ರೋಗಿ.!

04:28 PM Sep 18, 2024 | Team Udayavani |

ಹೈದರಾಬಾದ್:‌ ರೋಗಿಯೊಬ್ಬರು ಆಸ್ಪತ್ರೆಯಲ್ಲಿ ಬೆಡ್‌ನಲ್ಲಿ ಮಲಗಿಕೊಂಡು ಸಿನಿಮಾ ನೋಡುತ್ತಿರುವ ವೇಳೆಯೇ ವೈದ್ಯರು ಯಶಸ್ವಿಯಾಗಿ ಮೆದುಳಿನ ಶಸ್ತ್ರ ಚಿಕಿತ್ಸೆ ನಡೆಸಿರುವ ಘಟನೆ ಆಂಧ್ರ ಪ್ರದೇಶದಲ್ಲಿ ನಡೆದಿದೆ.

Advertisement

ಆಂಧ್ರಪ್ರದೇಶದ ಕಾಕಿನಾಡದಲ್ಲಿರುವ ಸರ್ಕಾರಿ ಜನರಲ್ ಆಸ್ಪತ್ರೆಯ ವೈದ್ಯರ ತಂಡವು ರೋಗಿಯೊಬ್ಬರ ಮೆದುಳಿನ ಶಸ್ತ್ರಚಿಕಿತ್ಸೆಯನ್ನು ನಡೆಸಿ ಯಶಸ್ವಿಯಾಗಿದೆ.

ಕೊತಪಲ್ಲಿಯ ಎ ಅನಂತಲಕ್ಷ್ಮಿ ಅವರಿಗೆ ತಮ್ಮ ಕೈಕಾಲುಗಳಲ್ಲಿ ಮರಗಟ್ಟುವಿಕೆ ಮತ್ತು ನಿರಂತರ ತಲೆನೋವಿನಂತಹ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆ ಆಸ್ಪತ್ರೆಯಲ್ಲಿ ಪರೀಕ್ಷಿಸಿದಾಗ ಅವರ ಮೆದುಳಿನ ಎಡಭಾಗದಲ್ಲಿ 3.3 x 2.7 ಸೆಂ.ಮೀ ಗಡ್ಡೆಯಿರುವುದು ಪತ್ತೆಯಾಗಿತ್ತು. ಖಾಸಗಿ ಆಸ್ಪತ್ರೆಗಳಲ್ಲಿ ಹೆಚ್ಚಿನ ಚಿಕಿತ್ಸಾ ವೆಚ್ಚದ ಕಾರಣ ಅವರು ಶಸ್ತ್ರಚಿಕಿತ್ಸೆಗೆ ಸರ್ಕಾರಿ ಆಸ್ಪತ್ರೆಯನ್ನು ಆಯ್ಕೆ ಮಾಡಿಕೊಂಡು ಶಸ್ತ್ರ ಚಿಕಿತ್ಸೆ ಮಾಡಿಸಲು ಮುಂದಾಗುತ್ತಾರೆ.

ಈ ಮೆದುಳಿನ ಶಸ್ತ್ರ ಚಿಕಿತ್ಸೆಗೆ ʼಅವೇಕ್ ಕ್ರಾನಿಯೊಟಮಿ’(Awake craniotomy) ಅಥವಾ ʼಅವೇಕ್ ಬ್ರೈನ್ ಸರ್ಜರಿʼ(Awake Brain Surgery) ಎಂದೂ ಕರೆಯುತ್ತಾರೆ. ಈ ಶಸ್ತ್ರ ಚಿಕಿತ್ಸಾ ವಿಧಾನದಲ್ಲಿ ರೋಗಿಯು ಎಚ್ಚರವಾಗಿರಬೇಕಾಗುತ್ತದೆ. ಮೆದುಳಿನ ನರಗಳಿಗೆ ಯಾವುದೇ ರೀತಿಯ ಹಾನಿಯಾಗದಂತೆ ಎಚ್ಚರಿಕೆಯಿಂದ ಈ ಸರ್ಜರಿಯನ್ನು ನಡೆಸಬೇಕಾಗುತ್ತದೆ. ಆಗಾಗ ರೋಗಿಯ ಬಳಿ ಶಸ್ತ್ರಚಿಕಿತ್ಸಾ ತಂಡ ಸಂವಹನ ನಡೆಸಬೇಕಾಗುತ್ತದೆ.

Advertisement

ಹೀಗಾಗಿ ರೋಗಿ ಎಚ್ಚರದಿಂದ ಇರಬೇಕಾಗುವ ಹಿನ್ನೆಲೆಯಲ್ಲಿ, ಅನಂತಲಕ್ಷ್ಮಿ ಸರ್ಜರಿ ನಡೆಸುವಾಗ ಎಚ್ಚರದಿಂದ ಇದ್ದು ತನ್ನ ನೆಚ್ಚಿನ ಹೀರೋ ಜೂ.ಎನ್‌ ಟಿಆರ್‌ ಅವರ ʼಅಧುರ್ಸ್‌ʼ ಸಿನಿಮಾವನ್ನು ನೋಡಿದ್ದಾರೆ.

ಮೂರು ಗಂಟೆಗಳ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ಪೂರ್ಣಗೊಂಡಿದೆ. ಸ್ವಲ್ಪ ಸಮಯದ ನಂತರ ರೋಗಿಯು ಎದ್ದು ಉಪಹಾರ ಸೇವಿಸಲು ಸಾಧ್ಯವಾಯಿತು. ವರದಿಗಳ ಪ್ರಕಾರ, ಅವರು ಚೇತರಿಸಿಕೊಳ್ಳುತ್ತಿದ್ದಾರೆ ಮತ್ತು ಐದು ದಿನಗಳಲ್ಲಿ ಡಿಸ್ಚಾರ್ಜ್ ಆಗುವ ನಿರೀಕ್ಷೆಯಿದೆ.

ಸದ್ಯ ಅವರು ಸಿನಿಮಾ ವೀಕ್ಷಿಸುತ್ತಿರುವ ವಿಡಿಯೋ ವೈರಲ್‌ ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next