Advertisement

Actor Jr NTR: ಆಂಧ್ರ, ತೆಲಂಗಾಣ ಪ್ರವಾಹ; 1 ಕೋಟಿ ರೂ. ದೇಣಿಗೆ ನೀಡಿದ ನಟ ಜೂ.ಎನ್‌ ಟಿಆರ್

12:31 PM Sep 03, 2024 | Team Udayavani |

ಆಂಧ್ರಪ್ರದೇಶ: ಭಾರೀ ಮಳೆಯಿಂದ (Heavy Rain) ಪ್ರವಾಹ ಉಂಟಾಗಿ ಹತ್ತಾರು ಸಾವು – ನೋವುಗಳಿಂದ ತತ್ತರಿಸಿರುವ ಆಂಧ್ರ ಪ್ರದೇಶ – ತೆಲಂಗಾಣದ ನೆರವಿಗೆ ಸೆಲೆಬ್ರಿಟಿಗಳು ಕೈಜೋಡಿಸಿದ್ದಾರೆ.

Advertisement

ಕಳೆದ ಕೆಲ ದಿನಗಳಿಂದ ಆಂಧ್ರ ಮತ್ತು ತೆಲಂಗಾಣದಲ್ಲಿ ಭಾರೀ ಮಳೆ ಉಂಟಾಗುತ್ತಿದ್ದು, ಪರಿಣಾಮ ಪ್ರವಾಹ ಹರಿದು ಹಲವು ಮನೆಗಳು ನೀರುಪಾಲಾಗಿದೆ. ನೂರಾರು ಮಂದಿ ದಿಕ್ಕಪಾಲಾಗಿ ಮನೆ- ಮಠ ಕಳೆದುಕೊಂಡು ಬೀದಿಗೆ ಬಂದಿದ್ದಾರೆ.

ಮನೆ ಹಾಗೂ ತನ್ನವರನ್ನು ಕಳೆದುಕೊಂಡಿರುವ ಜನರಿಗೆ ನೆರವಾಗುವ ನಿಟ್ಟಿನಲ್ಲಿ ಹಲವು ಗಣ್ಯರು ಹಣಕಾಸಿನ ಸಹಾಯವನ್ನು ಮಾಡುತ್ತಿದ್ದಾರೆ. ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಆರ್ಥಿಕ ನೆರವನ್ನು ನೀಡುತ್ತಿದ್ದಾರೆ.

“ಇತ್ತೀಚೆಗೆ ಎರಡು ತೆಲುಗು ರಾಜ್ಯಗಳಲ್ಲಿ ಭಾರೀ ಮಳೆಯಿಂದಾಗಿ ಸಂಭವಿಸಿದ ಪ್ರವಾಹದಿಂದ ನಾನು ತೀವ್ರವಾಗಿ ನೊಂದಿದ್ದೇನೆ. ತೆಲುಗು ಜನರು ಈ ವಿಪತ್ತಿನಿಂದ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ. ನನ್ನ ಕಡೆಯಿಂದ ನಾನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ (Chief Minister’s Relief) ತಲಾ 50 ಲಕ್ಷ ರೂ.ಪರಿಹಾರವನ್ನು ನೀಡುತ್ತಿದ್ದೇನೆ” ಎಂದು ನಟ ಜೂ.ಎನ್‌ ಟಿಆರ್‌(Actor Jr NTR) ಅವರು ʼಎಕ್ಸ್ʼ ಖಾತೆಯಲ್ಲಿ ಬರೆದಿದ್ದಾರೆ.

Advertisement

ಇತ್ತ ‘ಕಲ್ಕಿ 2898 ಎ.ಡಿʼ ಸಿನಿಮಾದ ನಿರ್ಮಾಣ ಸಂಸ್ಥೆ ವೈಜಯಂತಿ ಮೂವೀಸ್‌ (Vyjayanthi Movies)  25 ಲಕ್ಷ ರೂ. ಪರಿಹಾರವನ್ನು ಪ್ರವಾಹ ಪೀಡಿತ ರಾಜ್ಯಕ್ಕೆ ನೀಡಿರುವುದಾಗಿ ಸೋಶಿಯಲ್‌ ಮೀಡಿಯಾ ಖಾತೆಯಲ್ಲಿನ ಪೋಸ್ಟ್‌ ಮೂಲಕ ಹೇಳಿದೆ.

ಪ್ರವಾಹದಿಂದಾಗಿ ಇದುವರೆಗೆ ಕನಿಷ್ಠ 19 ಜನರು ಸಾವನ್ನಪ್ಪಿದ್ದು, ಆಂಧ್ರಪ್ರದೇಶ ಮತ್ತು ತೆಲಂಗಾಣದ ವಿವಿಧ ಭಾಗಗಳಿಂದ 17,000 ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.