Advertisement

Crime: ಸೈನೈಡ್ ಮಿಶ್ರಿತ ಜ್ಯೂಸ್‌ ನೀಡಿ ಚಿನ್ನಾಭರಣ ಲೂಟಿ; ಲೇಡಿ ಗ್ಯಾಂಗ್‌ ಅರೆಸ್ಟ್

02:46 PM Sep 07, 2024 | Team Udayavani |

ಆಂಧ್ರ ಪ್ರದೇಶ: ಅಪರಿಚಿತರೊಂದಿಗೆ ಸ್ನೇಹ ಬೆಳೆಸಿಕೊಂಡು ಅವರ ಚಿನ್ನಾಭರಣ, ನಗದು ಹಾಗೂ ಅಮೂಲ್ಯ ವಸ್ತುಗಳನ್ನು ಲೂಟಿ ಮಾಡುತ್ತಿದ್ದ ಖತರ್‌ ನಾಕ್‌ ಮಹಿಳಾ ಗ್ಯಾಂಗ್‌ ಪೊಲೀಸರ ಬಲೆಗೆ ಬಿದ್ದಿದೆ.

Advertisement

ಆರೋಪಿಗಳಾದ ಮುನಗಪ್ಪ ರಜಿನಿ (40), ಮಡಿಯಾಲ ವೆಂಕಟೇಶ್ವರಿ (32), ಗುಲ್ರ ರಮಣಮ್ಮ (60) ಅವರನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ. ಆಂಧ್ರಪ್ರದೇಶದ ತೆನಾಲಿ ಜಿಲ್ಲೆಯಲ್ಲಿ ಸಕ್ರಿಯವಾಗಿದ್ದ ಈ ಖತರ್‌ ನಾಕ್‌ ಮಹಿಳೆಯರನ್ನು ಪೊಲೀಸರು ಬಂಧಿಸಿದ್ದಾರೆ.

ಸ್ನೇಹ ಬೆಳೆಸಿ ಸೈನೈಡ್ ಮಿಶ್ರಿತ ಪಾನೀಯ ನೀಡುತ್ತಿದ್ದರು.. ಅಪರಿಚಿತರೊಂದಿಗೆ ಆತ್ಮೀಯರಾಗುವಂತೆ ಮಾತು ಬೆಳೆಸಿಕೊಂಡು ಅವರಿಗೆ ಕುಡಿಯಲು ಜ್ಯೂಸ್‌ ನೀಡುತ್ತಿದ್ದರು. ಈ ಪಾನೀಯದಲ್ಲಿ ಸೈನೈಡ್ ಬೆರೆಸಿ ನೀಡುತ್ತಿದ್ದರು. ಇದನ್ನು ಕುಡಿದ ಕೂಡಲೇ ಪ್ರಾಣ ಕಳೆದುಕೊಳ್ಳುತ್ತಾರೆ. ಆ ಬಳಿಕ ಅವರ ಮೈ ಮೇಲಿದ್ದ ಚಿನ್ನಾಭರಣ, ಬ್ಯಾಗ್‌ನಲ್ಲಿದ ನಗು ಹಾಗೂ ಇತರೆ ಬೆಲೆಬಾಳುವ ವಸ್ತುಗಳನ್ನು ಕದ್ದು ಈ ಗ್ಯಾಂಗ್‌ ಪರಾರಿ ಆಗುತ್ತಿತ್ತು.

ಘಟನೆ ಬೆಳಕಿಗೆ ಬಂದದ್ದು ಹೇಗೆ?: ಇದೇ ವರ್ಷದ ಜೂನ್‌ ತಿಂಗಳಿನಲ್ಲಿ ನಾಗೂರ್ ಬಿ ಎಂಬ ಮಹಿಳೆಗೆ ಸೈನೈಡ್ ಮಿಶ್ರಿತ ಪಾನೀಯ ನೀಡಿದ್ದರು. ಮಹಿಳೆ ಈ ಪಾನೀಯವನ್ನು ಕುಡಿದ ಕೂಡಲೇ ಮೃತಪಟ್ಟಿದ್ದಾರೆ. ಈ “ಸರಣಿ ಹಂತಕರು” ಇತರ ಇಬ್ಬರನ್ನು ಕೊಲ್ಲಲು ಪ್ರಯತ್ನಿಸಿದೆ ಆದರೆ ಅವರು ಬದುಕುಳಿದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಗ್ಯಾಂಗ್‌ ಯಾರ ಬಳಿ ಬೆಲೆಬಾಳುವ ಚಿನ್ನಾಭರಣಗಳಿರುತ್ತದೋ ಅಂಥವರನ್ನೇ ಗುರಿಯಾಗಿಸಿಕೊಂಡು ಕೃತ್ಯವೆಸಯುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

Advertisement

ಈ ಗ್ಯಾಂಗ್‌ ನಾಲ್ವರ ಕೊಲೆಯಲ್ಲಿ ಭಾಗಿಯಾಗಿದ್ದು, ನಾಗೂರ್ ಬಿ ಎನ್ನುವ ಮಹಿಳೆಯ ಕೊಲೆ ಪ್ರಕರಣವನ್ನು ಕೈಗೆತ್ತಿಕೊಂಡ ಪೊಲೀಸರು ತನಿಖೆ ನಡೆಸಿ ಕೃತ್ಯವನ್ನು ಬಯಲು ಮಾಡಿದ್ದಾರೆ.

ಪ್ರಮುಖ ಆರೋಪಿ ಆಗಿರುವ ವೆಂಕಟೇಶ್ವರಿ ಈ ಹಿಂದೆ ನಾಲ್ಕು ವರ್ಷಗಳ ಕಾಲ ಸ್ವಯಂಸೇವಕಿಯಾಗಿ ಕೆಲಸ ಮಾಡಿದ್ದು, ಕಾಂಬೋಡಿಯಾಗೆ ತೆರಳಿ, ಅಲ್ಲಿ ಸೈಬರ್ ಅಪರಾಧಗಳಲ್ಲಿ ಭಾಗಿಯಾಗಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರು ಆರೋಪಿಗಳಿಂದ ಸೈನೈಡ್ ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ ಮತ್ತು ಅವರಿಗೆ ಸೈನೈಡ್ ಪೂರೈಸಿದ ವ್ಯಕ್ತಿಯನ್ನು ಸಹ ಬಂಧಿಸಿದ್ದಾರೆ.

ಮಹಿಳೆಯರು ತಮ್ಮ ಅಪರಾಧವನ್ನು ಒಪ್ಪಿಕೊಂಡಿದ್ದಾರೆ ಮತ್ತು ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಬಂಧಿಸಲಾಗಿದೆ ಎಂದು ಗುಂಟೂರು ಪೊಲೀಸ್ ಅಧೀಕ್ಷಕ ಸತೀಶ್ ಕುಮಾರ್ ಹೇಳಿದ್ದಾರೆ.

ಅಪರಿಚಿತರೊಂದಿಗೆ ಸುಲಭವಾಗಿ ಸ್ನೇಹ ಬೆಳೆಸಬೇಡಿ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.