Advertisement
ಐದು ಡಯೋಗ್ನೋಸ್ಟಿಕ್ ಕೇಂದ್ರಗಳಲ್ಲಿ ಈ ರೀತಿಯಾಗಿ ತಲಾ 200 ಕೋಟಿ ರೂ. ಗಿಂತ ಹೆಚ್ಚು ಹಣ ಕೈ ಬದಲಾಗಿರುವ ಅಂದಾಜು ಮಾಡಿರುವ ಐಟಿ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ. ವೈದ್ಯರು ಡಯೋಗ್ನೊàಸ್ಟಿಕ್ ಕೇಂದ್ರಗಳಿಗೆ ಶಿಫಾರಸು ಮಾಡುವ ಪ್ರತಿ ರೋಗಿಗಳ ತಪಾಸಣೆಗೆ ಇಂತಿಷ್ಟು ಪ್ರಮಾಣದ ಕಮೀಷನ್ ಪಡೆದಿರುವುದು ಹಾಗೂ ಅದನ್ನೂ ನಗದು ಮೂಲಕವೇ ನೀಡಿರುವುದು. ಆ ಕಮೀಷನ್ ಪ್ರಮಾಣ ಪ್ರತಿ ಪರೀಕ್ಷಾ ಶುಲ್ಕದ ಶೇ.20 ರಿಂದ 35 ರಷ್ಟು ಇರುವುದು ಕಂಡು ಬಂದಿದೆ. ಜತೆಗೆ ವೈದ್ಯರಿಗೆ ಲಕೋಟೆಯಲ್ಲಿ ನಗದು ರೂಪದಲ್ಲಿ ಹಣ ನೀಡಲಾಗುತ್ತಿದ್ದ ಬಗ್ಗೆಯೂ ಅಧಿಕಾರಿಗಳು ಕೆಲವೊಂದು ಮಾಹಿತಿ ಕಲೆ ಹಾಕಿದ್ದಾರೆ.ಈ ಕುರಿತು ಅಧಿಕೃತ ಪತ್ರಿಕಾ ಪ್ರಕಟಣೆ ಸಹ ಬಿಡುಗಡೆ ಮಾಡಿರುವ ಆದಾಯ ತೆರಿಗೆ ಇಲಾಖೆ,ಈ ಮುಂಚೆ ಡಯೋಗ್ನೋಸ್ಟಿಕ್ ಕೇಂದ್ರಗಳ ಅಘೋಷಿತ ಆದಾಯ ಪ್ರಮಾಣ 100 ಕೋಟಿ ರೂ. ಎಂದು ಅಂದಾಜಿಸಲಾಗಿತ್ತಾದರೂ ಇದೀಗ ಪ್ರತಿ ಕೇಂದ್ರದ ಇಂತಹ ಶಿಫಾರಸು ಶುಲ್ಕದ ವಹಿವಾಟು 200 ಕೋಟಿ ರೂ. ಮೀರಿರಬಹುದು ಎಂಬ ಲೆಕ್ಕ ದೊರೆತಿದೆ ಎಂದು ಹೇಳಿದೆ.
Related Articles
ಇತ್ತೀಚೆಗೆ ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಗಳು, ಡಯೋಗ್ನೋಸ್ಟಿಕ್ ಕೇಂದ್ರಗಳು ಹಾಗೂ ಇತರೆ ಕೆಲ ವೈದ್ಯರು ಸೇರಿದಂತೆ ರಾಜ್ಯದ 29 ಕಡೆಗಳಲ್ಲಿ ದಾಳಿ ನಡೆಸಲಾಗಿತ್ತು. 250ಕ್ಕೂ ಅಧಿಕ ಮಂದಿ ಐಟಿ ಅಧಿಕಾರಿಗಳು 2 ಐವಿಎಫ್ ಕ್ಲಿನಿಕ್, ಇಬ್ಬರು ವೈದ್ಯರ ನಿವಾಸ, 5 ಡಯೋಗ್ನೋಸ್ಟಿಕ್ ಸೆಂಟರ್‌ಗಳ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ದಾಖಲೆ ಇಲ್ಲದ 1.40 ಕೋಟಿಗೂ ಅಧಿಕ ನಗದು, 3.5 ಕೆ.ಜಿ ಚಿನ್ನಾಭರಣ, ವಿದೇಶಿ ನೋಟುಗಳು, ವಿದೇಶಿ ಬ್ಯಾಂಕ್‌ಗಳಲ್ಲಿ ಕೋಟ್ಯಂತರ ರೂ. ಹಣ ಠೇವಣಿ ಇಟ್ಟಿರುವ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿತ್ತು.ಆಗ 100 ಕೋಟಿ ರೂ.ಗೂ ಅಧಿಕ ಅಘೋಷಿತ ಆದಾಯದ ಅಂದಾಜು ಮಾಡಲಾಗಿತ್ತು.
Advertisement
ಹಣ ಹೇಗೆ ಸಂದಾಯ?ಕೆಲ ಲ್ಯಾಬ್‌ಗಳು ಕಮಿಷನ್ ಏಜೆಂಟ್‌ಗಳನ್ನು ನೇಮಕ ಮಾಡಿಕೊಂಡಿದ್ದು, ವೈದ್ಯರಿಗೆ ಮುಚ್ಚಿದ ಲಕೋಟೆಯಲ್ಲಿ ಹಣ ತಲುಪಿಸುತ್ತಿದ್ದರು. ಈ ಲಕೋಟೆಯಲ್ಲಿ ಸಣ್ಣದೊಂದು ಚೀಟಿ ಇರುತ್ತಿತ್ತು. ಈ ಚೀಟಿಯಲ್ಲಿ ವೈದ್ಯರು ಕಳುಹಿಸಿಕೊಟ್ಟ ರೋಗಿಗಳ ಹೆಸರು, ಅವರಿಗೆ ಮಾಡಿದ ಪರೀಕ್ಷೆ, ಆ ಪರೀಕ್ಷೆಗ ತಗುಲಿದ ವೆಚ್ಚ. ಕೊನೆಗೆ ವೈದ್ಯರ ಕಮಿಷನ್ ಎಷ್ಟು ಎಂಬುದನ್ನು ಸ್ಪಷ್ಟವಾಗಿ ಉಲ್ಲೇಖೀಸಲಾಗುತ್ತಿತ್ತು. ಈ ಮೂಲಕ ವೈದ್ಯರಿಗೆ ತಮ್ಮ ಕಮಿಷನ್ ಎಷ್ಟು ಎಂಬುದು ತಿಳಿಯುತ್ತಿತ್ತು. ಒಂದು ವೇಳೆ ಹಣದಲ್ಲಿ ಕಡಿಮೆಯಾದರೆ ಲಕೋಟೆಯನ್ನೇ ವಾಪಸ್ ಕಳುಹಿಸುತ್ತಿದ್ದರು ಎನ್ನಲಾಗಿದೆ.