Advertisement

ವೈದ್ಯಕೀಯ ಸಿಬ್ಬಂದಿ ಪರಿಶ್ರಮಕ್ಕೆ ಸಿಕ್ಕ ಫಲ

06:09 PM May 02, 2020 | Suhan S |

ಗದಗ: ಜಿಲ್ಲೆಯ ಐವರಿಗೆ ಸೋಂಕು ಹರಿಡಿರುವುದು ಸಹಜವಾಗಿಯೇ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಈ ನಡುವೆ ಮಹಿಳೆಯೊಬ್ಬರು ಕೋವಿಡ್ 19 ವಿರುದ್ಧದ ಹೋರಾಟದಲ್ಲಿ ಜಯ ಸಾಧಿಸಿ, ಶುಕ್ರವಾರ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈ ಬೆಳವಣಿಗೆ ಇತರೆ ರೋಗಿಗಳ ಆತ್ಮಸ್ಥೈರ್ಯ ಹೆಚ್ಚಿಸುವುದರೊಂದಿಗೆ ಜಿಲ್ಲಾಡಳಿತಕ್ಕೆ ಚೈತನ್ಯ ನೀಡಿದೆ.

Advertisement

ಜಿಲ್ಲೆಯಲ್ಲಿ ಏ. 7ರಂದು ವೃದ್ಧೆ ವೈರಸ್‌ ಇರುವುದು ದೃಢಪಟ್ಟ ಮೂರೇ ದಿನಗಳಲ್ಲಿ ಅವರು ಮೃತಪಟ್ಟರು. ಇದರಿಂದ ಜಿಲ್ಲೆಯಲ್ಲಿ ಆತಂಕದ ಛಾಯೆ ಆವರಿಸಿತ್ತು. ಬಳಿಕ ಏ. 16ರಂದು ದ್ವಿತೀಯ ಪ್ರಕರಣ (ಪಿ-304) ದೃಢಪಟ್ಟಿತ್ತು. ನಂತರ 25 ದಿನಗಳಲ್ಲಿ ಐವರಿಗೆ ಸೋಂಕು ಹರಡಿತ್ತು. ದಿನಗಳೆದಂತೆ ಸೋಂಕಿತರ ಸಂಖ್ಯೆ ಹೆಚ್ಚಾಗಿದ್ದು ಸಾರ್ವಜನಿಕರಲ್ಲಿ ಭಯದ ವಾತಾವರಣ ಸೃಷ್ಟಿಸಿತ್ತು. ಆದರೆ ಶುಕ್ರವಾರ 59 ವರ್ಷ ಮಹಿಳೆ(ಪಿ-304) ಕೋವಿಡ್ 19  ವಿರುದ್ಧ ಗೆದ್ದು, ಆಸ್ಪತ್ರೆಯಿಂದ ಹೊರಬಂದಿರುವುದು ಸಾರ್ವಜನಿಕರಲ್ಲಿ ಸಂತಸ ತಂದಿದೆ.

ವೈದ್ಯರ ಪರಿಶ್ರಮಕ್ಕೆ ಸಿಕ್ಕ ಫಲ: ಇಲ್ಲಿನ ಆಯುಷ್‌ ಆಸ್ಪತ್ರೆಯ ನೂತನ ಕಟ್ಟಡವನ್ನು ಸಂಪೂರ್ಣವಾಗಿ ಕೋವಿಡ್‌-19 ರೋಗಿಗಳಿಗೆ ಮೀಸಲಿಡಲಾಗಿದೆ. ಅದರಲ್ಲಿ ಮೊದಲ ಮಹಡಿಯನ್ನು ಸೋಂಕಿತರಿಗೆ, ಎರಡನೇ ಮಹಡಿಯನ್ನು ಪರೀಕ್ಷಾ ವರದಿಗಾಗಿ ನಿರೀಕ್ಷಿತರಿಗೆ ಹಾಗೂ ಮೂರನೇ ಮಹಡಿಯನ್ನು ಸೋಂಕಿತರೊಂದಿಗೆ ದ್ವಿತೀಯ ಸಂಪರ್ಕದಲ್ಲಿರುವವರಿಗೆ ಮೀಸಲಿಡಲಾಗಿದೆ. ಪ್ರತಿ 6 ಗಂಟೆಯ ಶಿಫ್ಟ್‌ನಂತೆ ದಿನಕ್ಕೆ ನಾಲ್ವರು ವೈದ್ಯರು ಪ್ರತಿ ವಾರ್ಡ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಪ್ರತಿ ಅರ್ಧ ಗಂಟೆಗೊಮ್ಮೆ ರೋಗಿಯ ಸ್ಥಿತಿಗತಿ ದಾಖಲಿಸಲಾಗುತ್ತದೆ. ಈ ಮೂಲಕ ರೋಗಿ ಬಗ್ಗೆ ತೀವ್ರ ನಿಗಾ ವಹಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಈ ಮೂಲಕ ರೋಗಿಗಳನ್ನು ಗುಣಪಡಿಸಲು ಇಲ್ಲಿನ ಜಿಮ್ಸ್‌ ವೈದ್ಯರು ಯುದ್ಧೋಪಾದಿಯಲ್ಲಿ ವೈದ್ಯಕೀಯ ಸೇವೆ ಒದಗಿಸುತ್ತಿದ್ದಾರೆ. ಹೀಗಾಗಿ ಸೋಂಕಿತ ಮಹಿಳೆ ಆಸ್ಪತ್ರೆಗೆ ದಾಖಲಾದ 15 ದಿನಗಳಲ್ಲಿ ಆರೋಗ್ಯವಂತರಾಗಿ ಮನೆಗೆ ಮರಳಿದ್ದಾರೆ. ವೈದ್ಯರು ಹಾಗೂ ಸಿಬ್ಬಂದಿ ಶ್ರಮಕ್ಕೆ ಫಲ ಸಿಕ್ಕಿದೆ ಎಂಬುದು ಜಿಮ್ಸ್‌ನ ಹಿರಿಯ ವೈದ್ಯರ ಸಾರ್ಥಕ ನುಡಿ.

ಕೋವಿಡ್ 19  ಸೋಂಕಿನಿಂದ ಬಳಲುತ್ತಿದ್ದ ಮಹಿಳೆ ಗುಣಮುಖರಾಗಿದ್ದಾರೆ. ಇದು, ಜಿಮ್ಸ್‌ ವೈದ್ಯಕೀಯ ಸಿಬ್ಬಂದಿಯಲ್ಲಿ ಹೊಸ ಉತ್ಸಾಹ ಮೂಡಿಸಿದೆ. ಜೊತೆಗೆ ಜಿಲ್ಲಾಧಿಕಾರಿ, ಸಚಿವರು, ಶಾಸಕರು ನಿರಂತರ ರೋಗಿಗಳ ಆರೋಗ್ಯದ ಬಗ್ಗೆ ವಿಚಾರಿಸುವುದರೊಂದಿಗೆ ಅಗತ್ಯ ಸಹಕಾರ ನೀಡಿರುವುದೇ ಇದಕ್ಕೆ ಕಾರಣ. ಜೊತೆಗೆ ಇನ್ನಿಬ್ಬರು ಕೊರೊನಾ ಸೋಂಕಿತರಲ್ಲಿ ಆರೋಗ್ಯ ಚೇತರಿಕೆ ಕಂಡು ಬರುತ್ತಿರುತ್ತಿದ್ದು, ಶೀಘ್ರವೇ ಅವರನ್ನೂ ಡಿಸಾcರ್ಜ್‌ ಮಾಡಲಾಗುವುದು. –ಡಾ| ಪಿ.ಎಸ್‌. ಭೂಸರಡ್ಡಿ, ಜಿಮ್ಸ್‌ ನಿರ್ದೇಶಕ

Advertisement

ಕೋವಿಡ್ 19 ಪಿ.304 ಮಹಿಳೆ ಸೋಂಕಿನಿಂದ ಗುಣಮುಖರಾಗಿ, ಆಸ್ಪತ್ರೆಯಿಂದ ಬಿಡುಗಡೆ ಯಾಗಿರುವುದು ಸಂತಸ ತಂದಿದೆ. ಅವರನ್ನು ಗುಣಪಡಿಸಲು ಶ್ರಮಿಸಿ, ಯಶಸ್ವಿಯಾದ ಆಸ್ಪತ್ರೆಯ ವೈದ್ಯರು, ನರ್ಸಿಂಗ್‌ ಸಿಬ್ಬಂದಿ, ಜಿಮ್ಸ್‌ ಹಾಗೂ ಜಿಲ್ಲಾದ್ಯಂತ ಇದಕ್ಕೆ ಬೆಂಬಲವಾಗಿರುವ ಜಿಲ್ಲಾಡಳಿತ, ಆಶಾ ಕಾರ್ಯಕತೆರ್ಯರಿಗೆ ಅಭಿನಂದನೆ. –ಸಿ.ಸಿ. ಪಾಟೀಲ, ಜಿಲ್ಲಾ ಉಸ್ತುವಾರಿ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next