ಉಡುಪಿ ಆದರ್ಶ ಆಸ್ಪತ್ರೆಯಲ್ಲಿ ರವಿವಾರ ವಿಶ್ವ ವೈದ್ಯರ ದಿನಾಚರಣೆ ಹಾಗೂ ಬೃಹತ್ ಉಚಿತ ವೈದ್ಯಕೀಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
Advertisement
ರಾಮರಾಜ್ಯದ ಕನಸು ಅಸಾಧ್ಯಎಲ್ಲ ಕಡೆ ವೈದ್ಯರ ಮೇಲೆ ಹಲ್ಲೆಗಳಾಗುತ್ತಿದೆ. ಇದರಿಂದ ಅವರಲ್ಲಿ ಒತ್ತಡಗಳು ಹೆಚ್ಚುತ್ತಿವೆ. ಎಲ್ಲೆಡೆ ಕಾನೂನನ್ನು ಕೈಗೆತ್ತಿಕೊಳ್ಳುತ್ತಿರುವ ಪ್ರವೃತ್ತಿ ಹೆಚ್ಚಾಗುತ್ತಿದ್ದು, ಇದರಿಂದ ರಾಮರಾಜ್ಯದ ಕನಸು ಅಸಾಧ್ಯ. ಹುಟ್ಟು- ಸಾವು ಯಾರ ಕೈಯಲ್ಲೂ ಇಲ್ಲ. ಬೇರೊಬ್ಬರನ್ನು ಸಾಯಿಸಲು ಹಿಂದೆ ಮುಂದೆ ಯೋಚಿಸದ ಜನ, ಅವರ ಸಂಬಂಧಿಕರು, ಬಂಧುಗಳು ಆಸ್ಪತ್ರೆಯಲ್ಲಿ ಮರಣವನ್ನಪ್ಪಿದರೆ ವೈದ್ಯರ ಮೇಲೆ ಆರೋಪ ಮಾಡುತ್ತಾರೆ. ಈ ರೀತಿಯ ಸ್ವಾರ್ಥ ಜಗತ್ತು ಸೃಷ್ಟಿಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆ. ಸಾವಿಗೆ ವೈದ್ಯರನ್ನು ಹೊಣೆಗಾರರಾಗಿ ಮಾಡುವುದು ಸರಿಯಲ್ಲ ಎಂದರು.
ಪ್ರಾಸ್ತವಿಕವಾಗಿ ಮಾತನಾಡಿದ ಆದರ್ಶ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ| ಜಿ. ಎಸ್. ಚಂದ್ರಶೇಖರ್, ಪ್ರಸ್ತುತ ಕಾಲದಲ್ಲಿ ವೈದ್ಯರು ಹಾಗೂ ರೋಗಿಗಳ ನಡುವಿನ ಸಂಬಂಧದಲ್ಲಿ ಬಿರುಕು ಮೂಡುತ್ತಿದೆ. ರೋಗಿಗಳ ಬೇಡಿಕೆ ಹೆಚ್ಚುತ್ತಿರುವುದು ಅದಕ್ಕೆ ಕಾರಣ. ಆ ನೆಲೆಯಲ್ಲಿ ಉತ್ತಮ ಸವಲತ್ತು, ಉತ್ಕೃಷ್ಟ ಸೇವೆ, ಶ್ರೇಷ್ಠ ಚಿಕಿತ್ಸೆ ಕೊಡುವುದು ವೈದ್ಯಲೋಕಕ್ಕೆ ಸವಾಲಾಗಿದ್ದು, ವೈದ್ಯರಿಗೆ ಜನರ ಸಹಕಾರ ಸಹ ಅಗತ್ಯವಾಗಿದೆ ಎಂದರು. ಉಪಸ್ಥಿತಿ
ಆದರ್ಶ ಆಸ್ಪತ್ರೆಯ ಹಿರಿಯ ವೈದ್ಯಕೀಯ ತಜ್ಞ ಡಾ| ಎನ್. ಆರ್. ರಾವ್, ಹಿರಿಯ ನರರೋಗ ಶಸ್ತ್ರ ಚಿಕಿತ್ಸಾ ತಜ್ಞ ಪ್ರೊ| ಎಂ. ರಾಜಾ, ಆಡಳಿತ ಮಂಡಳಿ ಸದಸ್ಯರು, ವೈದ್ಯಕೀಯ ವೃಂದ ಹಾಗೂ ಸಿಬಂದಿ ವರ್ಗ ಉಪಸ್ಥಿತರಿದ್ದರು.
Related Articles
ವಿಶ್ವ ವೈದ್ಯ ದಿನಾಚರಣೆ ಪ್ರಯುಕ್ತ ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯರನ್ನು ಸಚಿವ ಪ್ರಮೋದ್ ಮಧ್ವರಾಜ್ ಅವರು ಸಮ್ಮಾನಿಸಿದರು. ಕಾರ್ಕಳ ಬೈಲೂರಿನ ಗುರುಕೃಪಾ ನರ್ಸಿಂಗ್ ಹೋಮ್‌ನ ಡಾ| ರಾಮಕೃಷ್ಣ ನಾಯಕ್, ಹೆಬ್ರಿ ರಾಘವೇಂದ್ರ ಆಸ್ಪತ್ರೆಯ ಡಾ| ರಾಮಚಂದ್ರ ಐತಾಳ್, ಬೆಳ್ಮಣ್ ಗಣೇಶ್ ಕ್ಲಿನಿಕ್ ಮತ್ತು ಲ್ಯಾಬೊರೇಟರಿಯ ಡಾ| ಪ್ರಭಾಕರ ನಾಯಕ್, ಕುಂದಾಪುರ ಕಂಡೂÉರಿನ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ| ಲತಾ ನಾಯಕ್ ಅವರನ್ನು ಸಮ್ಮಾನಿಸಲಾಯಿತು.
Advertisement