Advertisement

ದಾಖಲೆ ವೀರನಿಗೆ ಡಾಕ್ಟರೇಟ್‌!

10:41 AM May 22, 2017 | Team Udayavani |

ಹೊಸದಿಲ್ಲಿ: ಎಂಬಿಎ ಡಿಗ್ರಿ ಪಡೆದು, ಸಂಬಳ ಬರುವ ಉದ್ಯೋಗ ಹಿಡಿದು ಅಥವಾ ಸ್ವಂತದ್ದೊಂದು ವ್ಯವಹಾರ ಆರಂಭಿಸಿ ಲೈಫ‌ಲ್ಲಿ ಸೆಟ್ಲ ಆಗೋರನ್ನ ನೋಡಿದ್ದೀರ. ಆದರೆ ನೀವೀಗ ಓದುತ್ತಿರುವುದು ಎಂಬಿಎ ಓದಿದ ಅನಂತರ ದಾಖಲೆ ಮೇಲೊಂದು ದಾಖಲೆ ಮಾಡಿ, ರೆಕಾರ್ಡ್‌ ಬ್ರೇಕಿಂಗ್‌ನಲ್ಲಿ ಡಾಕ್ಟರೇಟ್‌ ಪಡೆದ ದಾಖಲೆ ವೀರನ ಬಗ್ಗೆ!

Advertisement

ಬರೋಬ್ಬರಿ 180 ಕೆ.ಜಿ. ತೂಕದ ಬನ್‌, 14 ಅಡಿ ಉದ್ದ ಮತ್ತು 6 ಅಡಿ ಅಗಲದ ಜಗತ್ತಿನ ಅತಿ ದೊಡ್ಡ ಹೂರಣಕಡುಬು, 14,353 ಸಣ್ಣ ಸಣ್ಣ ಸಕ್ಕರೆ ಅಚ್ಚುಗಳಿಂದ ಮಾಡಿದ ಬೃಹತ್‌ ಶುಗರ್‌ ಕ್ಯೂಬ್‌ ಹಾಗೂ 32 ಚದರ ಅಡಿ ವಿಸ್ತೀರ್ಣದ “ಮಲ್ಪುವಾ’ ಎಂಬ ಸಿಹಿ ಖಾದ್ಯ! ಇವಿಷ್ಟೂ ಜೈಪುರದ ಪ್ರೊಫೆಸರ್‌ ಮನೋಜ್‌ ಶ್ರೀವಾಸ್ತವ್‌ ಅವರ, ಲಿಮ್ಕಾ ಗಿನ್ನೆಸ್‌ ವಿಶ್ವ ದಾಖಲೆಯ ಸ್ಯಾಂಪಲ್‌ಗಳು.

ಮಣಿಪಾಲ ವಿವಿಗೆ ಸೇರಿರುವ ಜೈಪುರದ ಸ್ಕೂಲ್‌ ಆಫ್ ಹೊಟೇಲ್‌ ಮ್ಯಾನೇಜೆ¾ಂಟ್‌ನ ಮುಖ್ಯಸ್ಥರಾಗಿರುವ ಶ್ರೀವಾಸ್ತವ್‌ ಎಂಬಿಎ ಪದವೀಧರರು. ಹೊಟೇಲ್‌ ಮ್ಯಾನೇಜೆ¾ಂಟ್‌ಗೆ ಸೇರಿದ ಅನಂತರ ಅವರ ಆಸಕ್ತಿ ವಿಶ್ವ ದಾಖಲೆಯತ್ತ ಹೊರಳಿದ್ದು, 2008ರಲ್ಲಿ 180 ಕಿಲೋ ತೂಕದ, ವಿಶ್ವದ ಅತಿ ದೊಡ್ಡ ಬ್ರೆಡ್‌ ಪೀಸ್‌ ತಯಾರಿಸಿ ಗಿನ್ನೆಸ್‌ ಪುಸ್ತಕ ಸೇರಿದರು. ಅನಂತರ ಜಗತ್ತಿನಲ್ಲೇ ಅತಿ ದೊಡ್ಡವು ಎನಿಸಿಕೊಳ್ಳುವಂತಹ ವಿವಿಧ ಖಾದ್ಯಗಳನ್ನು ತಯಾರಿಸಿ 8 ವಿಶ್ವ ದಾಖಲೆ ಗರಿಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ಶ್ರೀವಾಸ್ತವ್‌ ಅವರ ಈ ಸಾಧನೆ ಮೆಚ್ಚಿದ ಬ್ರಿಟನ್‌ ಮೂಲದ ವರ್ಲ್ಡ್ ರೆಕಾರ್ಡ್ಸ್‌ ಯೂನಿವರ್ಸಿಟಿ ಇವರಿಗೆ ಡಾಕ್ಟರೇಟ್‌ ನೀಡಿದೆ. ಈ ಗೌರವಕ್ಕೆ ಪಾತ್ರರಾದ ಜಗತ್ತಿನ 13 ಮಂದಿಯಲ್ಲಿ ಶ್ರೀವಾಸ್ತವ್‌ ಕೂಡ ಒಬ್ಬರು ಎಂಬುದು ವಿಶೇಷ.

Advertisement

Udayavani is now on Telegram. Click here to join our channel and stay updated with the latest news.

Next