Advertisement

ಚಂದ್ರಾ ಮುತಾಲಿಕ ಅವರಿಗೆ ಡಾಕ್ಟರೇಟ್‌ 

04:29 PM Mar 03, 2017 | |

ಮುಂಬಯಿ: ಕನ್ನಡ ವಿಭಾಗದ ಸಂಶೋಧನ ವಿದ್ಯಾರ್ಥಿನಿ ಚಂದ್ರಾ ಮುತಾಲಿಕ ಅವರ ಸಂಶೋಧನ ಮಹಾಪ್ರಬಂಧ ಕನ್ನಡ ದಾಸ ಸಾಹಿತ್ಯ ಹಾಗೂ ಮರಾಠಿ ಸಂತ ಸಾಹಿತ್ಯ-ಒಂದು ತೌಲನಿಕ ಅಧ್ಯಯನ ಮಹಾಪ್ರಬಂಧವನ್ನು ಮನ್ನಿಸಿ ಮುಂಬಯಿ  ವಿಶ್ವವಿದ್ಯಾಲಯ ಅವರಿಗೆ ಡಾಕ್ಟರೇಟ್‌ ಪದವಿ ನೀಡಿ ಗೌರವಿಸಿದೆ. ಡಾ| ಚಂದ್ರಾ ಮುತಾಲಿಕ ಅವರು ಕನ್ನಡ ವಿಭಾಗದ ಮುಖ್ಯಸ್ಥ ಡಾ| ಜಿ. ಎನ್‌. ಉಪಾಧ್ಯ ಅವರ ಮಾರ್ಗದರ್ಶನದಲ್ಲಿ ಈ ಮಹಾಪ್ರಬಂಧವನ್ನು ಮುಂಬಯಿ ವಿಶ್ವವಿದ್ಯಾಲಯಕ್ಕೆ ಪ್ರಸ್ತುತಪಡಿಸಿದ್ದರು.

Advertisement

ಬಹುಭಾಷಿಕ ಸಂವೇದನೆಯನ್ನು ಮೈಗೂಡಿಸಿಕೊಂಡಿರುವ ಡಾ| ಚಂದ್ರಾ ಮುತಾಲಿಕ ದೇಸಾಯಿ ಅವರು ಮೂಲತ: ಬೆಳಗಾವಿಯವರು. ಮುಂಬಯಿ ವಿವಿ ಕನ್ನಡ ವಿಭಾಗದಿಂದ ಪ್ರಥಮ ದರ್ಜೆಯಲ್ಲಿ ಎಂಎ ಪದವಿಯನ್ನು ಪಡೆದ ಅವರು ಕನ್ನಡ ಹರಿದಾಸರ ಹಾಗೂ ಮರಾಠಿ ಸಂತರ ಸಾಮಾಜಿಕ ಚಿಂತನೆಗಳು ಎಂಬ ಎಂಫಿಲ್‌ ಸಂಪ್ರಂಧವನ್ನು ಡಾ| ಜಿ. ಎನ್‌. ಉಪಾಧ್ಯ ಅವರ ಮಾರ್ಗದರ್ಶನದಲ್ಲಿ ಮಂಡಿಸಿದ್ದಾರೆ. ಈ ಎಂ. ಫಿಲ್‌.  ಸಂಪ್ರಬಂಧ ಈಗಾಗಲೇ ಪ್ರಕಟಗೊಂಡಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಹಾಗೂ ತಿರುಮಲ ತಿರುಪತಿಯ ಪುರಸ್ಕಾರಕ್ಕೆ ಪಾತ್ರವಾಗಿದೆ.

ನಾಟಕ ಹಾಗೂ ಸಂಗೀತದಲ್ಲಿ ಆಸಕ್ತಿಯನ್ನು ಹೊಂದಿರುವ ಅವರು ರಂಗನಿರ್ದೇಶಕ ಡಾ| ಭರತ್‌ ಕುಮಾರ್‌ ಪೊಲಿಪು ಅವರ ನಾಟಕಗಳಲ್ಲಿ ಪಾತ್ರವಹಿಸಿದ್ದಾರೆ. ಅವರ ಅನೇಕ ಲೇಖನಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಬೆಳಕು ಕಂಡಿವೆ. ಪ್ರಸ್ತುತ ಮಹಾಪ್ರಬಂಧ ಉಭಯ ಭಾಷೆಗಳ ಭಾವ ಸಂಬಂಧ ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ. ಇದು ಅನೇಕ ಒಳನೋಟಗಳಿಂದ ಕೂಡಿದ ಮಹಾಪ್ರಬಂಧ ಎಂದು ಪಿಎಚ್‌ಡಿ ಮೌಲ್ಯಮಾಪಕರು ಕೊಂಡಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next