ರಾಯಚೂರು: ಮಂತ್ರಾಲಯದ ಶ್ರೀ ರಾಘವೇಂದ್ರಮಠದಲ್ಲಿ ಪೀಠಾ ಧಿಪತಿ ಶ್ರೀ ಸುಬುಧೇಂದ್ರ ತೀರ್ಥರಿಗೆ ಗುಲ್ಬರ್ಗ ವಿಶ್ವವಿದ್ಯಾಲಯದಿಂದ ಶನಿವಾರ ಸಂಜೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು.
ಗುಲ್ಬರ್ಗ ವಿವಿಯಿಂದ ಈ ಸಾಲಿನ ಘಟಿಕೋತ್ಸವದಲ್ಲಿ ವಿವಿಧ ಗಣ್ಯರಿಗೆ ಗೌಡಾ ಪ್ರದಾನಮಾಡಲಾಗಿತ್ತು. ಆದರೆ, ಘಟಿಕೋತ್ಸವದಲ್ಲಿ ಭಾಗಿಯಾಗದ ಕಾರಣ ವಿವಿ ಸಿಬ್ಬಂದಿಯೇಶಿಷ್ಟಾಚಾರದನ್ವಯ ಗೌಡಾ ಪ್ರದಾನ ಮಾಡಿದರು. ಪದವಿ ಸ್ವೀಕರಿಸಿದ ಬಳಿಕ ಮಾತನಾಡಿದ ಶ್ರೀ ಸುಬುಧೇಂದ್ರ ತೀರ್ಥರು, ಗುಲ್ಬರ್ಗ ವಿವಿ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡುವ ಮೂಲಕ ಜವಾಬ್ದಾರಿ ಹೆಚ್ಚಿಸಿದೆ. ಸಮಾಜದಲ್ಲಿ ಸಾಕಷ್ಟು ಸಾಧಕರಿದ್ದು, ವಿವಿ ನಮ್ಮನ್ನು ಗುರುತಿಸಿರುವುದುಖುಷಿ ಕೊಟ್ಟಿದೆ. ಜ್ಞಾನಾರ್ಜನೆ ಮಾಡಿ ಉತ್ತಮ ನಾಗರಿಕನ್ನಾಗಿ ಮಾಡುವಂಥ ವಿವಿ ನೀಡಿದಗೌರವವನ್ನು ಶ್ರೀಮೂಲರಾಮದೇವರಿಗೆ ಸಮರ್ಪಿಸಲಾಗುವುದು ಎಂದರು.
ಜ್ಞಾನ ಮನುಷ್ಯನಿಗೆ ಅತಿ ಮುಖ್ಯ. ಅಕ್ಷರ ರಹಿತರು ರಾಕ್ಷಸರು, ವಿದ್ಯೆ ಇಲ್ಲದವರು ಪಶುವಿಗೆಸಮವೆಂದು ಶಾಸ್ತ್ರಗಳು ಹೇಳುತ್ತವೆ. ಎಲ್ಲರೂ ವಿದ್ಯೆ ಕಲಿಯುವ ಮೂಲಕ ಸಂಸ್ಕಾರವಂತರಾಗಬೇಕು ಎಂದರು.
ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್ ಮಾತನಾಡಿ, ಹಿಂದುತ್ವ ಪ್ರತಿಪಾದನೆಯಲ್ಲಿ ತಮ್ಮದೇ ಛಾಪು ಮೂಡಿಸಿದ್ದ ಪೇಜಾವರ ಶ್ರೀಗಳಅನುಪಸ್ಥಿತಿಯನ್ನು ಶ್ರೀ ಸುಬುಧೇಂದ್ರ ತೀರ್ಥರುಹೋಗಲಾಡಿಸುತ್ತಿದ್ದಾರೆ. ಪೀಠಕ್ಕೇರಿ ಕಡಿಮೆ ಅವಧಿಯಲ್ಲಿ ಗುರುತರ ಕೆಲಸಗಳನ್ನು ಮಾಡಿ ಗಮನ ಸೆಳೆಯುತ್ತಿದ್ದಾರೆ ಎಂದು ಶ್ಲಾಘಿಸಿದರು.
ಗುಲ್ಬರ್ಗ ವಿವಿ ಕುಲಪತಿ ಚಂದ್ರಕಾಂತ ಯಾತನೂರು, ಶ್ರೀಗುರುಸಾರ್ವಭೌಮವಿದ್ಯಾಪೀಠದ ಕುಲಪತಿ ಡಾ.ವಿ.ಆರ್.ಪಂಚಮುಖೀ ಮಾತನಾಡಿದರು. ಶ್ರೀಗಳು ರಚಿಸಿದ ವಿವಿಧಕೃತಿಗಳನ್ನು ಬಿಡುಗಡೆ ಮಾಡಲಾಯಿತು. ಶ್ರೀಮಠದಪಂಡಿತರಾದ ರಾಜಾ ಎಸ್.ಗಿರಿಯಾಚಾರ,ಪ್ರಮೋದ ಮುತಾಲಿಕ್, ರಾಯಚೂರು ನಗರಸಭೆ ಅಧ್ಯಕ್ಷ ಈ.ವಿಯನ ಕುಮಾರ, ಗುಲ್ಬರ್ಗ ವಿವಿಯ ವಿವಿಧ ವಿಭಾಗಗಳ ಮುಖ್ಯಸ್ಥರಾದ ಪ್ರೊ.ಸಂಜೀವ್ ಕುಮಾರ, ಪ್ರೊ.ಬಿ.ವಿಜಯ, ಸಿಂಡಿಕೇಟ್ ಸದಸ್ಯ ಡಾ.ಶರಣಬಸವ ಜೋಳದಡಗಿ, ಪ್ರೊ.ಸಿ.ಎಸ್ .ಭಾರದ್ವಾಜ್, ಆರ್‌ಡಿಒ ರಾಮಕೃಷ್ಣರೆಡ್ಡಿ, ಶ್ರೀಮಠದ ಆಡಳಿತಾಧಿಕಾರಿ ಮಾಧವಶೆಟ್ಟಿ ಸೇರಿ ಇತರರಿದ್ದರು.