Advertisement

ಡಾಕ್ಟರೇಟ್‌ ಗೌರವ ತ್ಯಾಗ-ಸೇವೆ ಪ್ರತೀಕ

05:41 PM May 09, 2022 | Team Udayavani |

ಬೀದರ: ಸಮರ್ಪಣಾ ಮನೋಭಾವದಿಂದ ಸಮಾಜಕ್ಕೆ ಕೊಡುಗೆ ನೀಡಿದ ಜಿಲ್ಲೆಯ ಮೂವರು ಮಹನೀಯರಿಗೆ ಸಂದಿರುವ ಗೌರವ ಡಾಕ್ಟರೇಟ್‌ ತ್ಯಾಗ ಮತ್ತು ಸೇವೆಯ ಪ್ರತೀಕ ಎಂದು ವಿಶ್ರಾಂತ ಕುಲಪತಿ ಪ್ರೊ| ಬಿ.ಜಿ. ಮೂಲಿಮನಿ ಹೇಳಿದರು.

Advertisement

ನಗರದ ರಂಗ ಮಂದಿರದಲ್ಲಿ ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್‌ ಪುರಷ್ಕೃತ ಶ್ರೀ ಸಿದ್ಧರಾಮ ಶರಣರು ಬೆಲ್ದಾಳ್‌, ಡಾ| ಬಸವರಾಜ ಪಾಟೀಲ ಅಷ್ಟೂರ ಮತ್ತು ಗುರಮ್ಮಾ ಸಿದ್ಧಾರೆಡ್ಡಿ ಅವರಿಗೆ ನಾಗರಿಕ ಅಭಿನಂದನಾ ಸಮಿತಿ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.

ಬೀದರ ಹಿಂದುಳಿದ ಜಿಲ್ಲೆ ಎಂಬುದು ನಮ್ಮ ಮನಸ್ಥಿತಿ ಇಷ್ಟೇ. ಇದು ಪವಿತ್ರ ಶರಣರ ನಾಡು. ಹಣೆ ಮೇಲೆ ವಿಭೂತಿ ಜಾಗದಲ್ಲಿ ಹಿಂದುಳಿದವರು ಎಂಬ ಹಣೆಪಟ್ಟಿ ಹಚ್ಚಲಾಗಿದೆ. ಇಂತಹ ಸಾಧಕರಿಂದ ಪ್ರೇರಣೆ ಪಡೆದು ಹಣೆಪಟ್ಟಿಯನ್ನು ಅಳಿಸಬೇಕಿದೆ ಎಂದು ಕರೆ ನೀಡಿದರು.

ಬುಡಾ ಅಧ್ಯಕ್ಷ ಬಾಬು ವಾಲಿ ಮಾತನಾಡಿ, ಡಾಕ್ಟರೇಟ್‌ ಮತ್ತು ಪುರಸ್ಕಾರ ಪಡೆದವರಿಗೆ ಅಭಿನಂದಿಸುವುದರಿಂದ ಅವರಿಗೆ ಮತ್ತಷ್ಟು ಸೇವೆ ಸಲ್ಲಿಸಲು ಪ್ರೋತ್ಸಾಹ, ಜತೆಗೆ ಮತ್ತೊಬ್ಬರಿಗೆ ಅವರು ಪ್ರೇರಣೆಯಾಗಿ ನಿಲ್ಲುತ್ತಾರೆ. ಇತ್ತೀಚಿನ ದಿನಗಳಲ್ಲಿ ಸಂಸ್ಥೆಗಳಿಂದ ಡಾಕ್ಟರೇಟ್‌ ಕೊಡುವುದು ಹೆಚ್ಚುತ್ತಿದೆ. ಆದರೆ, ವಿಶ್ವವಿದ್ಯಾಲಯ ಮತ್ತು ಸಂಸ್ಥೆಗಳ ಡಾಕ್ಟರೇಟ್‌ ಗಳಲ್ಲಿ ಅಜಗಜಾಂತರ ವ್ಯತ್ಯಾಸ ಇದೆ. ಈ ಬಾರಿ ಗುಲ್ಬರ್ಗಾ ವಿವಿಯಿಂದ ಮೂವರಿಗೆ ಗೌರವ ಸಂದಿರುವುದು ಈ ನೆಲ್ಲದ ಪುಣ್ಯ ಎಂದು ಸಂತಸ ವ್ಯಕ್ತಪಡಿಸಿದರು.

ಅನುಭವ ಮಂಟಪದ ಅಧ್ಯಕ್ಷರಾದ ಡಾ| ಬಸವಲಿಂಗ ಪಟ್ಟದೇವರು ಮಾತನಾಡಿ, ಬೀದರ ಹೆಚ್ಚು ಗೌರವ ಡಾಕ್ಟರೇಟ್‌ ಪಡೆದ ನಾಡು. ನಮ್ಮ ಜಿಲ್ಲೆ ಯಾವುದರಲ್ಲಿಯೂ ಕಡಿಮೆ ಇಲ್ಲ. ಶೈಕ್ಷಣಿಕ ಕ್ಷೇತ್ರದಲ್ಲಂತೂ ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡುತ್ತಿದೆ ಎಂದು ಹೇಳಿದರು.

Advertisement

ಹುಲಸೂರಿನ ಡಾ| ಶಿವಾನಂದ ಮಹಾಸ್ವಾಮಿಗಳು ಮಾತನಾಡಿ, ಬೀದರ ಇಡೀ ಕರ್ನಾಟಕದಲ್ಲೇ ಹೆಚ್ಚು ಗೌರವ ಡಾಕ್ಟರೆಟ್‌ ಪಡೆದ ಜಿಲ್ಲೆ. ಇಲ್ಲಿಯ ಸಾಧಕರ ಪರಿಶ್ರಮವೂ ಅಷ್ಟೇ ಪರಿಣಾಮಕಾರಿಯಾಗಿದೆ ಎಂದರು.

ಪಶು ವೈದ್ಯ ವಿವಿ ಕುಲಸಚಿವ ಡಾ| ಶಿವಪ್ರಕಾಶ ಮತ್ತು ಸಮಿತಿಯ ಸದಸ್ಯ ಬಸವರಾಜ ಜಾಬಶೆಟ್ಟಿ ಮಾತನಾಡಿದರು. ಸಮಿತಿಯ ಅಧ್ಯಕ್ಷ ಡಾ|ಚನ್ನಬಸಪ್ಪ ಹಾಲಹಳ್ಳಿ ಅಧ್ಯಕ್ಷತೆ ವಹಿಸಿದರು. ಸಮಿತಿ ಉಪಾಧ್ಯಕ್ಷ ಡಾ| ಬಲಬೀರಸಿಂಗ್‌, ಹೈ.ಕ ಶಿಕ್ಷಣ ಸಂಸ್ಥೆ ಆಡಳಿತ ಮಂಡಳಿ ಸದಸ್ಯ ಡಾ| ರಜನೀಶ ವಾಲಿ, ಲಿಂಗಾಯತ ಧರ್ಮ ಸಮನ್ವಯ ಸಮಿತಿ ಸಂಚಾಲಕ ಶ್ರೀಕಾಂತ ಸ್ವಾಮಿ, ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಬಿ.ಜಿ. ಶಟಕಾರ, ರೇವಣಸಿದ್ದಪ್ಪ ಜಲಾದೆ, ಕೆ.ಎಸ್‌. ಚಳಕಾಪುರೆ, ಎಂ.ಜಿ. ದೇಶಪಾಂಡೆ ಇದ್ದರು.

ಸಂಯೋಜಕ ಡಾ|ಜಗನ್ನಾಥ ಹೆಬ್ಟಾಳೆ ಪ್ರಾಸ್ತಾವಿಕ ಮಾತನಾಡಿದರು. ಸಮಿತಿ ಕಾರ್ಯದರ್ಶಿ ಡಾ| ಅಬ್ದುಲ್‌ ಖದೀರ್‌ ಸ್ವಾಗತಿಸಿದರು. ಸಂಜುಕುಮಾರ ಜುಮ್ಮಾ ನಿರೂಪಿಸಿದರು. ಶಿವಯ್ಯ ಸ್ವಾಮಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next