Advertisement

ಕೃಷಿ ಡಾಕ್ಟರ್; ಸಮಸ್ಯೆಗೆ ಒಂದು ಪರಿಹಾರ

12:39 AM Mar 15, 2020 | mahesh |

ಮಾವು ಬೆಳೆಯಲ್ಲಿ ಅಲ್ಟ್ರಾ ಹೈಡೆನ್ಸಿಟಿ ಬೇಸಾಯದ ಕುರಿತು ಹಾಗೂ ಸೂಕ್ತ ತಳಿಗಳ ಬಗ್ಗೆ ಮಾಹಿತಿ ನೀಡಿ

Advertisement

– ಹನುಮಂತಪ್ಪ, ಕುಂದಗೋಳ

“ಹಣ್ಣುಗಳ ರಾಜ’ ಎಂದೇ ಕರೆಯಲಾಗುವ ಮಾವು ಭಾರತದ ಪ್ರಮುಖ ಹಣ್ಣಿನ ಬೆಳೆಯಾಗಿದೆ. ಇದರಲ್ಲಿ ಎ ಮತ್ತು ಸಿ ಜೀವ ಸತ್ವಗಳು ಹೆಚ್ಚಿನ ಪ್ರಮಾಣದಲ್ಲಿವೆ. ಈ ಬೆಳೆಯಲ್ಲಿ “ಅಲ್ಟ್ರಾ ಹೈಡೆನ್ಸಿಟಿ ಬೇಸಾಯ’, ಅಂದರೆ ಅಧಿಕ ಸಾಂದ್ರತೆಯಲ್ಲಿ ಮಾವಿನ ಗಿಡಗಳನ್ನು ಬೆಳೆಸುವುದು ಹೆಚ್ಚಿನ ಇಳುವರಿಗೆ ಕಾರಣವಾಗುತ್ತದೆ. ಈ ಕಾರಣಕ್ಕೇ ಈ ಪದ್ಧತಿ ಜನಪ್ರಿಯವಾಗಿದೆ. 5×5 ಮೀ., 7.5×7.5 ಮೀ. ಅಥವಾ 6×6 ಮೀ. ಅಂತರ ನೀಡಲಾಗುತ್ತದೆ. ಹೀಗೆ ಮಾಡುವುದರಿಂದ ಪ್ರತಿ ಎಕರೆಗೆ ಗಿಡಗಳ ಸಂಖ್ಯೆ ಹೆಚ್ಚಾಗುವುದರಿಂದ ಹೆಚ್ಚಿನ ಇಳುವರಿಯನ್ನು ಪಡೆಯಬಹುದು. ಅದಕ್ಕಾಗಿ ಸೂಕ್ತವಾದ ಗಿಡ ಬೇರು ಹೊಂದಿದ ತಳಿಗಳಾದ ನೆಕ್ಕರೆ, ಬಪ್ಪಕಾಯಿ, ಆಮ್ರಪಲ್ಲಿ, ತೋತಾಪುರಿ, ರೆಡ್‌ಸ್ಮಾಲ್‌ ಹಾಗೂ ಒಲೂರ ಉಪಯೋಗಿಸಬೇಕು. ಈ ಬೆಳೆಯನ್ನು ಜೂನ್‌ ಜುಲೈ ತಿಂಗಳುಗಳಲ್ಲಿ ಸಸಿಗಳನ್ನು ನಾಟಿ ಮಾಡಲು ಒಳ್ಳೆಯ ಸಮಯ. ಸಸ್ಯ ಪ್ರಚೋದಕ (ಸಿಸಿಸಿ 1000 ಪಿ.ಪಿ.ಎಂ = 1 ಮಿ.ಲೀ/ ಲೀಟರ್‌ ನೀರಿಗೆ)ವನ್ನು ಅಕ್ಟೋಬರ್‌ ಮತ್ತು ನವೆಂಬರ್‌ ತಿಂಗಳುಗಳಲ್ಲಿ ಚಾಟನಿ ಮಾಡುವುದರ ಜೊತೆಗೆ ಉಪಯೋಗ ಮಾಡಬೇಕು. ಈ ಪದ್ಧತಿಯನ್ನು ಅಳವಡಿಸಿಕೊಳ್ಳಲು ಪರಿಣತರಿಂದ ವಿಶಿಷ್ಟ ತಾಂತ್ರಿಕ ಸಲಹೆಯನ್ನು ಪಡೆಯುವುದು ಅತ್ಯವಶ್ಯಕ.

– ಡಾ. ಅಶೋಕ್‌ ಪಿ.,
ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥರು, ಕೃಷಿ ವಿಜ್ಞಾನ ಕೇಂದ್ರ, ಹನುಮನಮಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next