“ಸಿಕ್ಸರ್’ ಸಿನಿಮಾದ ಮೂಲಕ ಪ್ರಜ್ವಲ್ ದೇವರಾಜ್, “ಮೊಗ್ಗಿನ ಮನಸ್ಸು’ಸಿನಿಮಾದ ಮೂಲಕ ಯಶ್, ರಾಧಿಕಾ ಪಂಡಿತ್ ಮೊದಲಾದಪ್ರತಿಭೆಗಳನ್ನು ಬೆಳ್ಳಿತೆರೆಗೆ ಪರಿಚಯಿಸಿದ್ದ ನಿರ್ದೇಶಕ ಶಶಾಂಕ್, ನಂತರಸ್ಟಾರ್ ಸಿನಿಮಾಗಳತ್ತ ಮುಖ ಮಾಡಿದ್ದರು.
ಸುದೀಪ್, ದುನಿಯಾವಿಜಯ್, ಅಜೇಯ್ ರಾವ್, ಗಣೇಶ್ ಹೀಗೆ ಸ್ಟಾರ್ ನಟರ ಜೊತೆ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಮಾಡಿದ್ದ ಶಶಾಂಕ್, ಕಳೆದ ವರ್ಷ ರಿಯಲ್ಸ್ಟಾರ್ ಉಪೇಂದ್ರ ಜೊತೆ ಹೊಸಸಿನಿಮಾವನ್ನು ಅನೌನ್ಸ್ ಮಾಡಿದ್ದರು.ಸದ್ಯ ಕೋವಿಡ್ ಎರಡನೇ ಅಲೆಯಆತಂಕ ಜೋರಾಗಿರುವುದರಿಂದ, ಸದ್ಯಕ್ಕೆಆ ಸಿನಿಮಾವನ್ನ ಕೆಲಕಾಲಮುಂದೂಡಿರುವ ಶಶಾಂಕ್, ಈಗ್ಯಾಪ್ನಲ್ಲಿ ಬಹುತೇಕ ಹೊಸ ಪ್ರತಿಭೆಗಳಇಂಟೆನ್ಸ್ ಲವ್ಸ್ಟೋರಿಯೊಂದನ್ನು ಕನ್ನಡಮತ್ತು ತೆಲುಗಿನಲ್ಲಿ ತೆರೆಗೆ ತರುವ ಪ್ಲಾನ್ನಲ್ಲಿದ್ದಾರೆ.
ಈ ಬಗ್ಗೆ ಮಾತಿಗಿಳಿದ ಶಶಾಂಕ್, “ಇದೊಂದು ಇಂಟೆನ್ಸ್ಲವ್ಸ್ಟೋರಿ ಸಿನಿಮಾ. ಪ್ರವೀಣ್ ಎನ್ನುವ ಹೊಸ ಪ್ರತಿಭೆಯನ್ನ ಹೀರೋಆಗಿ ಈ ಸಿನಿಮಾದಲ್ಲಿ ಪರಿಚಯಿಸುತ್ತಿದ್ದೇವೆ. ಹೀರೋಯಿನ್ಗಾಗಿ ಹೊಸಟ್ಯಾಲೆಂಟ್ ಹುಡುಕಾಟ ನಡೆದಿದೆ. ಉಳಿದಂತೆ ಸಪೋರ್ಟಿಂಗ್ರೋಲ್ನಲ್ಲೂ ಬಹುತೇಕ ಹೊಸಬರೇ ಈ ಸಿನಿಮಾದಲ್ಲಿ ಇರುತ್ತಾರೆ.ತುಂಬಾ ವರ್ಷಗಳ ನಂತರ ಹೊಸ ಟ್ಯಾಲೆಂಟ್ಗಳನ್ನೇ ಇಟ್ಟುಕೊಂಡು ಇಂಥದ್ದೊಂದು ಸಿನಿಮಾ ಮಾಡೋದಕ್ಕೆ ಖುಷಿಯಾಗುತ್ತಿದೆ.
ಈಗಾಗಲೇಸ್ಕ್ರಿಪ್ಟ್ ಕೆಲಸಗಳು ಬಹುತೇಕ ಕಂಪ್ಲೀಟ್ ಆಗಿದ್ದು, ಡೈಲಾಗ್ಸ್ಬರೆಯುತ್ತಿದ್ದೇನೆ. ಸದ್ಯ ಪ್ರೀ-ಪ್ರೊಡಕ್ಷನ್ಸ್ ಕೆಲಸಗಳು ನಡೆಯುತ್ತಿದ್ದು, ಎಲ್ಲಅಂದುಕೊಂಡಂತೆ ನಡೆದರೆ, ಜೂನ್ ವೇಳೆಗೆ ಶೂಟಿಂಗ್ ಶುರು ಮಾಡಿ,ಇದೇ ವರ್ಷ ಸೆಪ್ಟೆಂಬರ್ – ಅಕ್ಟೋಬರ್ ವೇಳೆಗೆ ಸಿನಿಮಾ ರಿಲೀಸ್ಮಾಡುವ ಪ್ಲಾನ್ ಇದೆ’ ಎನ್ನುತ್ತಾರೆ.
ಜಿ.ಎ ಸ್.ಕಾರ್ತಿಕ ಸುಧನ್